ಕರ್ನಾಟಕದಲ್ಲಿ ಹೆಚ್ಚಿದ ಮಹಿಳಾ ದೌರ್ಜನ್ಯ, ಕೊಲೆ ಪ್ರಕರಣ: ಬೆಂಗಳೂರು ನಂ. 3

ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳ (Violence against women) ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 2022ರಲ್ಲಿ 17,813 ಮಹಿಳಾ ದೌರ್ಜನ್ಯ ಮತ್ತು 1,404 ಕೊಲೆ ಪ್ರಕರಣಗಳು ದಾಖಲಾಗಿವೆ. 

Crime Aganist women increased In Karnataka Bangalore is Number 3 In metro cities crime rate akb

ನವದೆಹಲಿ: ಕರ್ನಾಟಕದಲ್ಲಿ ಮಹಿಳೆಯರ ವಿರುದ್ಧದ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, 2022ರಲ್ಲಿ 17,813 ಮಹಿಳಾ ದೌರ್ಜನ್ಯ ಮತ್ತು 1,404 ಕೊಲೆ ಪ್ರಕರಣಗಳು ದಾಖಲಾಗಿವೆ. ಇನ್ನು ಮಹಾನಗರಗಳ (Metropoliton cities) ಪಟ್ಟಿಯಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ ಎಂದು ರಎನ್‌ಸಿಆರ್‌ಬಿ ವರದಿ ತಿಳಿಸಿದೆ.

ಮಹಿಳೆಯರ ದೌರ್ಜನ್ಯ (Violence against women) ಪ್ರಕರಣಗಳಲ್ಲಿ ಕರ್ನಾಟಕ 10ನೇ ಸ್ಥಾನದಲ್ಲಿದ್ದು, 1 ಲಕ್ಷ ಜನಸಂಖ್ಯೆಯಲ್ಲಿ 53 ಮಂದಿ ದೌರ್ಜನ್ಯಕ್ಕೆ ತುತ್ತಾಗಿದ್ದಾರೆ. ಇಂತಹ ಪ್ರಕರಣಗಳಲ್ಲಿ ದೋಷಾರೋಪ ಸಲ್ಲಿಕೆಯ ಪ್ರಮಾಣ 82.8ರಷ್ಟಿದೆ. 6,201 ಮಾನಭಂಗ, 3,141 ಪೋಕ್ಸೋ ಮತ್ತು 2,812 ಕೌಟುಂಬಿಕ ದೌರ್ಜನ್ಯ, 2,224 ಪ್ರಕರಣಗಳು ವರದಕ್ಷಿಣೆ ಕಿರುಕುಳ ಮತ್ತು 595 ಅತ್ಯಾಚಾರ ಪ್ರಕರಣಗಳು (Rape case) ದಾಖಲಾಗಿವೆ. ಇನ್ನು ಮಹಾನಗರಗಳಲ್ಲಿ ನಡೆದ ದೌರ್ಜನ್ಯ ಪ್ರಕರಣಗಳಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದ್ದು, 3,924 ಪ್ರಕರಣಗಳು ದಾಖಲಾಗಿವೆ. ದೆಹಲಿ ಮೊದಲ ಸ್ಥಾನದಲ್ಲಿದ್ದು, ಇಲ್ಲಿ 14,247 ಪ್ರಕರಣಗಳು ದಾಖಲಾಗಿದ್ದು, 6,176 ಪ್ರಕರಣಗಳೊಂದಿಗೆ ಮುಂಬೈ 2ನೇ ಸ್ಥಾನದಲ್ಲಿದೆ.

ಸಲಿಂಗಕಾಮಿ ಸ್ನೇಹಿತನಿಂದಲೇ ಲೈಂಗಿಕ ದೌರ್ಜನ್ಯವೆಸಗಿ 16 ವರ್ಷದ ಕಾಲೇಜು ಹುಡುಗನ ಹತ್ಯೆ

ಹೆಚ್ಚಿದ ಕೊಲೆ ಪ್ರಕರಣ:

2021ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಕೊಲೆ ಪ್ರಕರಣಗಳಲ್ಲೂ ಸಹ ಏರಿಕೆ ಕಂಡು ಬಂದಿದೆ. ಕಳೆದ ವರ್ಷ 1404 ಪ್ರಕರಣಗಳು ದಾಖಲಾಗಿದ್ದು, ರಾಜ್ಯ 8ನೇ ಸ್ಥಾನದಲ್ಲಿದೆ . 2021ರಲ್ಲಿ 1357 ಪ್ರಕರಣಗಳು ದಾಖಲಾಗಿದ್ದವು. ಜಗಳಗಳಿಂದ 706 ಕೊಲೆಗಳು ನಡೆದಿದ್ದು, ದ್ವೇಷದ ಕಾರಣಕ್ಕೆ 353, ಅಕ್ರಮ ಸಂಬಂಧದ ಕಾರಣಕ್ಕೆ 108, ಹಣಕ್ಕಾಗಿ 59, ಪ್ರೇಮ ಪ್ರಕರಣಗಳಿಂದಾಗಿ 44 ಕೊಲೆಗಳು ನಡೆದಿವೆ ಎಂದು ವರದಿ ತಿಳಿಸಿದೆ.

2022ರಲ್ಲಿ 4.45 ಲಕ್ಷ ಮಹಿಳಾ ದೌರ್ಜನ್ಯ ಕೇಸು

ನವದೆಹಲಿ: ಮಹಿಳೆಯರ ವಿರುದ್ಧ ನಡೆದ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ 2022ರಲ್ಲಿ ದೇಶಾದ್ಯಂತ 4.45 ಲಕ್ಷ ಪ್ರಕರಣಗಳು ದಾಖಲಾಗಿವೆ. ಅಂದರೆ ಹತ್ತಿರಹತ್ತಿರ ಪ್ರತಿ ಗಂಟೆಗೆ 51 ಎಫ್‌ಐಆರ್‌ಗಳು (FIR) ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯೂರೋದ ಅಂಕಿ ಅಂಶಗಳಿಂದ ತಿಳಿದು ಬಂದಿದೆ.

9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, 2 ಲಕ್ಷ ರೂ. ದಂಡ ವಿಧಿಸಿದ ಕೋರ್ಟ್

ಪ್ರಕರಣಗಳು ದಾಖಲಾದ ಪ್ರಮಾಣ ಗಮನಿಸಿದರೆ ಉತ್ತರ ಪ್ರದೇಶ ಮೊದಲ ಸ್ಥಾನದಲ್ಲಿದ್ದು 65,743 ಪ್ರಕರಣಗಳು ದಾಖಲಾಗಿವೆ. ಉಳಿದಂತೆ ಮಹಾರಾಷ್ಟ್ರ (45,331), ರಾಜಸ್ಥಾನ (45,058), ಪಶ್ವಿಮ ಬಂಗಾಳ (34,738) ಮತ್ತು ಮಧ್ಯಪ್ರದೇ (32,765) ನಂತರದ ಸ್ಥಾನಗಳಲ್ಲಿವೆ. ಕಳೆದ ವರ್ಷ ದೇಶದಲ್ಲಿ 3.71 ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಮಹಿಳೆಯರ ವಿರುದ್ಧದ ಅಪರಾಧ ಕೃತ್ಯಗಳಲ್ಲಿ ಪತಿ ಹಾಗೂ ಆತನ ಕುಟುಂಬದಿಂದ ನಡೆಯುವ ದೌರ್ಜನ್ಯ (ಶೇ.31.4) ಮೊದಲ ಸ್ಥಾನದಲ್ಲಿದೆ. ಉಳಿದಂತೆ ಮಹಿಳೆಯರ ಅಪಹರಣ (ಶೇ.19.2), ಮಾನಭಂಗ (ಶೇ.18.7) ಮತ್ತು ಅತ್ಯಾಚಾರ (ಶೇ.7.1) ನಂತರದ ಸ್ಥಾನಗಳಲ್ಲಿವೆ.
 

Latest Videos
Follow Us:
Download App:
  • android
  • ios