ರಾಮನಗರ 'ಮೇವು ಹೇಗೆ ತಿನ್ನಲಿ' ನಾಡಬಾಂಬ್ ಅಗೆದ ಹಸುವಿನ ಬಾಯಿ ಛಿದ್ರ ಛಿದ್ರ..
ನಾಡಬಾಂಬ್ ತಿಂದು ಹಸುವಿನ ಬಾಯಿ ಸಂಪೂರ್ಣ ಛಿದ್ರ/ ರಾಮನಗರ ಜಿಲ್ಲೆ ಕನಕಪುರ ತಾಲೂಕಿನಲ್ಲಿ ದುರ್ಘಟನೆ/ ಕಾಶಿಗೌಡ ಎಂಬುವವರ ಜಮೀನಿನಲ್ಲಿ ಆಕ್ರಮವಾಗಿ ಇಡಲಾಗಿತ್ತು/ಮೇವು ತಿನ್ನಲು ಹೋದಂತಹ ಸಂದರ್ಭದಲ್ಲಿ ನಾಡಬಾಂಬ್ ತಿಂದ ಹಸು
ರಾಮನಗರ(ಫೆ. 07) ನಾಡಬಾಂಬ್ ತಿಂದು ಹಸುವಿನ ಬಾಯಿ ಸಂಪೂರ್ಣ ಛಿದ್ರ ಛಿದ್ರವಾಗಿದೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೆಬ್ಬಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.
ಕಾಶಿಗೌಡ ಎಂಬುವವರ ಜಮೀನಿನಲ್ಲಿ ಆಕ್ರಮವಾಗಿ ಇಡಲಾಗಿತ್ತು. ಕಾಡುಪ್ರಾಣಿಗಳನ್ನ ಭೇಟಿಯಾಡಲು ನಾಡಬಾಂಬ್ ಇಡಲಾಗಿತ್ತು. ಮೇವು ತಿನ್ನಲು ಹೋದಂತಹ ಸಂದರ್ಭದಲ್ಲಿ ನಾಡಬಾಂಬ್ ತಿಂದ ಹಸು ಗಂಭೀರ ಗಾಯಗೊಂಡಿದೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಆನೆಗೆ ಬೆಂಕಿ ಇಟ್ಟ ಕಿರಾತಕರಿಗೆ ಯಾವ ಶಿಕ್ಷೆ ಕೊಡಬೇಕು?
ಕಾಡು ಪ್ರಾಣಿಗಳ ಕಾಟ ತಪ್ಪಿಸಲು ಈ ರೀತಿಯ ಕೆಲಸ ಮಾಡಲಾಗುತ್ತಿದೆ. ಈ ಹಿಂದೆ ತಮಿಳುನಾಡಿನಲ್ಲಿ ಆನೆಯೊಂದು ಇಂಥದ್ದೆ ಘಟನೆಗೆ ಬಲಿಯಾಗಿತ್ತು. ಉತ್ತರ ಕನ್ನಡ ಜಿಲ್ಲೆಯಲ್ಲಿ ಜಾನುವಾರುಗಳು ಪ್ಲಾಸ್ಟಿಕ್ ತಿಂದು ಅಪಾಯಕ್ಕೆ ಸಿಲುಕುತ್ತಿವೆ ಎಂಬ ವಿಚಾರವನ್ನು ನಟ ಅನಿರುದ್ಧ ಗಮನಕ್ಕೆ ತಂದಿದ್ದರು.