ಪಲಾಶ್‌ ಮತ್ತು ಶುಕ್ಲಾ ದಂಪತಿ ತಮ್ಮ 2 ವರ್ಷದ ಮಗುವಿನೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಇವರು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರು ಎಂದು ಶಂಕಿಸಿ ಕಳೆದ ವರ್ಷ ಜುಲೈನಲ್ಲಿ ಬೆಂಗಳೂರು ಪೊಲೀಸರು ದಂಪತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ‘ನಾವು ಭಾರತೀಯರು, ಪಶ್ಚಿಮ ಬಂಗಾಳದವರು’ ಎಂದು ದಂಪತಿ ಹೇಳಿದರೂ ಕೇಳದ ಪೊಲೀಸರು ಇಬ್ಬರನ್ನು ಜೈಲಿಗೆ ಹಾಕಿದ್ದರು.

ಬರ್ದ್ವಾನ್‌(ಪ.ಬಂಗಾಳ)(ಜೂ.03): ಬೆಂಗಳೂರಿಗೆ ಕೂಲಿ ಕೆಲಸಕ್ಕೆ ಬಂದಿದ್ದ ಪಶ್ಚಿಮ ಬಂಗಾಳದ ಬರ್ದ್ವಾನ್‌ ಮೂಲದ ದಂಪತಿಯನ್ನು ಸುಮಾರು 301 ದಿನಗಳ ಕಾಲ ಬೆಂಗಳೂರಿನ ಜೈಲಲ್ಲಿ ಇರಿಸಿದ ಪ್ರಸಂಗ ನಡೆದಿದೆ. ಇದೀಗ ದಂಪತಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿದ್ದು ಇಬ್ಬರೂ ಗುರುವಾರ ತವರಿಗೆ ಮರಳಿದ್ದಾರೆ.

ಪಲಾಶ್‌ ಮತ್ತು ಶುಕ್ಲಾ ದಂಪತಿ ತಮ್ಮ 2 ವರ್ಷದ ಮಗುವಿನೊಂದಿಗೆ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು. ಇವರು ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದವರು ಎಂದು ಶಂಕಿಸಿ ಕಳೆದ ವರ್ಷ ಜುಲೈನಲ್ಲಿ ಬೆಂಗಳೂರು ಪೊಲೀಸರು ದಂಪತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದರು. ‘ನಾವು ಭಾರತೀಯರು, ಪಶ್ಚಿಮ ಬಂಗಾಳದವರು’ ಎಂದು ದಂಪತಿ ಹೇಳಿದರೂ ಕೇಳದ ಪೊಲೀಸರು ಇಬ್ಬರನ್ನು ಜೈಲಿಗೆ ಹಾಕಿದ್ದರು.

Whale Vomit Smuggling: 3.5 ಕೋಟಿ ಮೌಲ್ಯದ ಅಂಬರ್ಗ್ರಿಸ್ ಸಾಗಿಸುತ್ತಿದ್ದವರು ಚಾಮರಾಜನಗರದಲ್ಲಿ ಅರೆಸ್ಟ್

ಈ ನಡುವೆ, ಬೆಂಗಳೂರಿಗೆ ಬಂದ ದಂಪತಿಯ ಸಂಬಂಧಿಕರು ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಪೊಲೀಸರು ಅವರ ವಿರುದ್ಧ ಅಷ್ಟರಲ್ಲೇ ಚಾರ್ಜ್‌ಶೀಟ್‌ ದಾಖಲಿಸಿದ್ದರು. ಬಳಿಕ ಬೆಂಗಳೂರು ಪೊಲೀಸರ ತಂಡ ಬದ್ರ್ವಾನ್‌ನಲ್ಲಿ ದಂಪತಿಗಳ ಬಗ್ಗೆ ತನಿಖೆ ನಡೆಸಿದಾಗ ಅವರು ಪಶ್ಚಿಮ ಬಂಗಾಳದವರು ಎಂಬುದು ದೃಢವಾಗಿದೆ.

ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಇವರಿಗೆ ಜಾಮೀನು ಲಭಿಸಿದೆ. ಏ.28 ರಂದೇ ದಂಪತಿಗೆ ಕೋರ್ಟ್‌ ಜಾಮೀನು ಮಂಜೂರು ಮಾಡಿತ್ತಾದರೂ ಸ್ಥಳೀಯ (ಬೆಂಗಳೂರಿನ) ಜಾಮೀನುದಾರರು ತಮ್ಮ ಜಮೀನು ಬಾಂಡ್‌ಗಳನ್ನು ನೀಡುವುದು ತಡವಾದ್ದರಿಂದ ಮೇ 24ರಂದು ಅವರನ್ನು ಬಿಡುಗಡೆಗೊಳಿಸಲಾಯಿತು ಎಂದು ದಂಪತಿಯ ಸಂಬಂಧಿಕರು ತಿಳಿಸಿದ್ದಾರೆ. ಇದೀಗ ದಂಪತಿ ಸೇರಿದಂತೆ ಕುಟುಂಬಸ್ಥರು ನಿರಾಳರಾಗಿ ತಮ್ಮೂರಿಗೆ ತೆರಳಿದ್ದಾರೆ.