* ಕರೆಂಟ್ ಶಾಕ್ ಗೆ ದಂಪತಿ ಬಲಿ* ಕೃಷಿ ಕೆಲಸ ಮಾಡಿಕೊಂಡಿದ್ದ ದಂಪತಿ* ಆಕಸ್ಮಿಕವಾಗಿ ಪ್ರವಹಿಸಿದ ವಿದ್ಯುತ್* ಸಂಗಾರೆಡ್ಡಿ ಜಿಲ್ಲೆಯ ಫಾರ್ಮ್‌ಹೌಸ್‌ನಲ್ಲಿ ಪ್ರಾಣ ಕಳೆದುಕೊಂಡ ದಂಪತಿ

ಸಂಗಾರೆಡ್ಡಿ (ಡಿ. 20) ದಂಪತಿಗಳು ದಾರುಣ ಅಂತ್ಯ ಕಂಡಿದ್ದಾರೆ. ಆಕಸ್ಮಿಕವಾಗಿ ವಿದ್ಯುತ್ (Electrocution) ಶಾಕ್ ತಗುಲಿ ಸಂಗಾರೆಡ್ಡಿ ಜಿಲ್ಲೆಯ ಫಾರ್ಮ್‌ಹೌಸ್‌ನಲ್ಲಿ ದಂಪತಿ (Couple) ಸಾವನ್ನಪ್ಪಿದ್ದಾರೆ.

ಮೃತರನ್ನು ಆಂಧ್ರಪ್ರದೇಶ (Andhra Pradesh)ಮೂಲದ ಶ್ರೀನಿವಾಸ್ (46) ಮತ್ತು ದೇವಿ (38) ಎಂದು ಗುರುತಿಸಲಾಗಿದೆ. ಕೃಷಿ (Agriculture) ಕೆಲಸ ಮಾಡಿಕೊಂಡಿದ್ದ ದಂಪತಿ ಸಾವು ಕಂಡಿದ್ದಾರೆ

ಶನಿವಾರ ಸಂಜೆ ಶ್ರೀನಿವಾಸ್ ಕರೆಂಟ್ ಸ್ವಿಚ್ ಆನ್ ಮಾಡಲು ಮುಂದಾದಾಗ ಶಾಕ್ ತಗುಲಿದೆ. ಗಂಡನ ಉಳಿಸಲು ಹೋದ ಪತ್ನಿ ಸಹ ದಾರುಣ ಅಂತ್ಯ ಕಂಡಿದ್ದಾರೆ. ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು ಭಾನುವಾರ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ದಂಪತಿಗೆ ಮೂವರು ಮಕ್ಕಳಿದ್ದು ತಂದೆ-ತಾಯಿಯನ್ನು ಕಳೆದುಕೊಂಡಿದ್ದಾರೆ.

ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ:  ವಿದ್ಯುತ್ ಕಂಬಕ್ಕೆ ಟಾಟಾ ಇಂಡಿಕಾ ಕಾರು ಡಿಕ್ಕಿಯಾದ ಪರಿಣಾಮ ವಿದ್ಯುತ್ ಶಾಕ್ ನಿಂದ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದ ಪ್ರಕರಣ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗರ್ತಿಕೆರೆಯಿಂದ ವರದಿಯಾಗಿತ್ತು.

Chikkaballapur: ಅಕ್ರಮ ವಿದ್ಯುತ್‌ ತಂತಿ ಬೇಲಿ ಹಾಕಿದ್ದವನ ಬಡಿದು ಕೊಂದ ದುರುಳರು

ಕಾರು ಕಂಬಕ್ಕೆ ಡಿಕ್ಕಿಯಾದ ವೇಳೆ ವಿದ್ಯುತ್ ಶಾಕ್ ತಗುಲಿ ಕಲಾವತಿ (65), ಲೋಹಿತ್ (36), ಶಶಾಂಕ್ (10) ಸ್ಥಳದಲ್ಲೇ ಸಾವಿಗೀಡಾಗಿದ್ದರು. ಕಾರಿನಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿದ್ದರು. ಎಲ್ಲರೂ ರಿಪ್ಪನ್ ಪೇಟೆಯ ನಿವಾಸಿಗಳಾಗಿದ್ದು, ಧರ್ಮಸ್ಥಳ ಮಂಜುನಾಥನ ದರ್ಶನಕ್ಕೆ ತೆರಳಿ ವಾಪಸಾಗುತ್ತಿದ್ದ ವೇಳೆ ಈ ದುರ್ಘಟನೆ ನಡೆದಿತ್ತು.

ತಾಯಿ ಮಗ ಸಾವು: ವಿದ್ಯುತ್ ಶಾಕ್ ಗೆ ಒಳಗಾಗಿ ತಾಯಿ ಮಗು ಇಬ್ಬರೂ ದಾರುಣವಾಗಿ ಸಾವಿಗೀಡಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಿಂದ ವರದಿಯಾಗಿತ್ತು. ಬೆಳ್ತಂಗಡಿ ತಾಲೂಕಿನ ಕೊಕ್ಕಡದ ಪಟ್ರಮೆಯಲ್ಲಿ ಗೀತಾ(30), ನಾಲ್ಕೂವರೆ ವರ್ಷದ ಮಗು ಭವಿಷ್ ಮೃತಪಟ್ಟಿದ್ದರು. ನೀರಿನ ಪಂಪ್ ಸ್ವಿಚ್ ಆನ್ ಮಾಡುವ ವೇಳೆ ತಾಯಿ ಹಾಗೂ ಮಗ ಇಬ್ಬರಿಗೂ ವಿದ್ಯುತ್ ಶಾಕ್ ತಗುಲಿತ್ತು.

ಸಿಡಿಲಾಘಾತಕ್ಕೆ ಬಲಿ: ಸಿಡಿಲು (Lighting Strike) ಬಡಿದು ಅಪ್ಪ ಮಗ ಸೇರಿ ಮೂವರು ದಾರುಣ ಸಾವು (Death) ಕಂಡಿದ್ದರು. ವಿಜಯನಗರ (Vijaynagar) ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ವರಲಹಳ್ಳಿ ಗ್ರಾಮದಲ್ಲಿ ದುರ್ಘಟನೆ ನಡೆದಿತ್ತು. ತಂದೆ ಶಿವರಾಯಪ್ಪ (34), ಮಗ ಮೈಲಾರಪ್ಪ (11), ಹನುಮಂತಪ್ಪ (35) ಮೃತರಾಗಿದ್ದರು. ಸಿಡಿಲಿನ ಬಡಿತಕ್ಕೆ 2 ಆಡುಗಳು ಮರಣ ಹೊಂದಿವೆ. ಆಡು ಮೇಯಿಸಲು ತೋಟಕ್ಕೆ ಹೋಗಿದ್ದ ವೇಳೆ ಸಿಡಿಲು ಯಮನಾಗಿತ್ತು. 

ಘೋರ ಪ್ರಕರಣ; ಬೆಂಗಳೂರಿನ ನೈಸ್ ರಸ್ತೆಯಲ್ಲಿ ದಾರುಣ ಘಟನೆ ನಡೆದಿತ್ತು. ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದು ಅವರ ಪುತ್ರನಿಗೂ ಸಿಡಿಲು ಬಡಿದಿದೆ. ಪುತ್ರ ಪ್ರಾಣಾಪಾಯದಿಂದ ಪಾರಾಗಿದ್ದರು. ಚಿಕ್ಕಗೊಲ್ಲರಹಟ್ಟಿಯಲ್ಲಿರುವ ಸಂಬಂಧಿಕರ ಮನೆಗೆ ತಂದೆ ಮಗ ತೆರಳಿದ್ದರು. ಟಿ ದಾಸರಹಳ್ಳಿಯಲ್ಲಿರು ಮನೆಗೆ ವಾಪಾಸ್ ಬರುತ್ತಿರುವಾಗ ಸಾವು ಕಾದಿತ್ತು.

ಸಾವಿನ ಮನೆಯಾಗಿದ್ದ ಮದುವೆ ಸಮಾರಂಭ: ಬಾಂಗ್ಲಾದ ಶಿಬ್‍ಗಂಜ್ ವಲಯದಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದ ಪರಿಣಾಮ 16 ಮಂದಿ ಸಾವನ್ನಪ್ಪಿದ್ದರು.

ನದಿ ತಟದಲ್ಲಿರುವ ಶಿಬ್‌ಗಂಜ್ ವಲಯದಲ್ಲಿ ಮದುವೆ ಸಮಾರಂಭ ನಡೆಯುತ್ತಿತ್ತು. ಭಾರಿ ಮಳೆ ನಡುವೆ ನಡೆಯುತ್ತಿದ್ದ ಸಮಾರಂಭಕ್ಕೆ ಸಿಡಿಲು ಆಘಾತ ನೀಡಿದೆ. ಸಮಾರಂಭ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದಿದೆ. ಸಿಡಿಲಿನ ಹೊಡೆತಕ್ಕೆ ಮದುವೆ ಸಮಾರಂಭದಲ್ಲಿದ್ದ 16 ಮಂದಿ ಸಾವನ್ನಪ್ಪಿದ್ದಾರೆ. ಸಿಡಿಲಿನ ಹೊಡೆತಕ್ಕೆ ವರ ಗಾಯಗೊಂಡು ವಧು ಸುರಕ್ಷಿತರಾಗಿದ್ದರು. ಇತ್ತ ವರ ಸೇರಿದಂತೆ ಸುಮಾರು 20ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದರು. 

ಎಚ್ಚರಿಕೆ ಸೂತ್ರ: ಶಾರ್ಟ್ ಸರ್ಕ್ಯೂಟ್ ಮತ್ತು ಇತರೆ ಸಂದರ್ಭ ಕರೆಂಟ್ ಶಾಕ್ ತಗುಲಿದರೆ ಅಂಥ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಬರಿ ಕೈನಿಂದ ಅಥವಾ ಲೋಹದ ವಸ್ತುವಿನಿಂದ ಸ್ಪರ್ಶಿಸಲು ಹೋಗಬಾರದು. ಚಪ್ಪಲಿ ಧರಿಸಿ ಮರದ ತುಂಡಿನ ಮೂಲಕ ರಕ್ಷಣೆ ಮಾಡುವ ಯತ್ನ ಮಾಡಬೇಕು.