ಬೆಂಗಳೂರು(ಏ. 05)  ಒಂದು ಕಡೆ ಕೊರೋನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶವೇ ಲಾಕ್ ಡೌನ್ ಆಗಿದ್ದರೆ ಇನ್ನೊಂದು ಕಡೆ ಆನ್ ಲೈನ್ ಜೂಜಾಟ ಜೋರಾಗಿಯೇ ಶುರುವಾಗಿದೆ.

ಮೊಬೈಲ್ ಆಪ್ ಮೂಲಕ ಆನ್ ಲೈನ್ ಜೂಜಾಟ ಶುರು ಹಚ್ಚಿಕೊಂಡಿದ್ದವರ ಮೇಲೆ ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿದ್ದಾರೆ.  ಕಾಮಾಕ್ಷಿಪಾಳ್ಯ ಹಾಗೂ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಗಳಲ್ಲಿ ದಾಳಿ ನಡೆಸಲಾಗಿದೆ.

ಆಪ್ ಮೂಲಕ ತನ್ನ ಪಂಟರುಗಳಿಗೆ ಯೂಸರ್ ಐಡಿ ಮತ್ತು ಪಾಸ್ ವರ್ಡ್ ನೀಡಿ ಆನ್ ಲೈನ್ ಜೂಜಾಟ ನಡೆಸಲಾಗುತ್ತಿತ್ತು.  ಗೂಗಪ್ ಪೇ ಮತ್ತು  ಫೋನ್ ಪೇ ಮೂಲಕ ಆಟ ಜೋರಾಗಿ ನಡೆಯುತ್ತಿತ್ತು. 

ಅನಾಮಧೇಯ ಪತ್ರದಿಂದ ಬಹಿರಂಗವಾದ ಸಿರ ಸುಂದರಿಯರ ಗ್ಯಾಂಬ್ಲಿಂಗ್ ರಹಸ್ಯ

ಕಾಮಾಮಾಕ್ಷಿಪಾಳ್ಯದಲ್ಲಿ ಪುನೀತ್ ಎಂಬಾತನ‌ನ್ನು ಬಂಧಿಸಿ 52  ಸಾವಿರ  ರೂ. ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಇದೇ ರೀತಿ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿ ಆಪ್ ಮೂಲಕ‌ ಹೈಟೆಕ್ ಜೂಜಾಟದಲ್ಲಿ ತೊಡಗಿದ್ದವನ ಬಂಧನವಾಗಿದೆ.  ಹೈಗ್ರೌಂಡ್ಸ್ ವ್ಯಾಪ್ತಿಯಲ್ಲಿ  ಯತೀಶ್‌ ಪೊಲೀಸರ ಬಲೆಗೆ ಬಿದ್ದಿದ್ದು ಪ್ರತ್ಯೇಕ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಆನ್ ಲೈನ್ ಜೂಜಾಟ ಹೊಸದೇನಲ್ಲ. ಈಗಾಗಲೇ ವಿವಿಧ ಆಪ್ ಗಳು ಜಾಹೀರಾತು ನೀಡಿ ಜನರನ್ನು ತಮ್ಮ ಕಡೆ ಸೆಳೆಯುವ ಯತ್ನ ಮಾಡುತ್ತಲೇ ಇವೆ. ಲಾಕ್ ಡೌನ್ ಸಂದರ್ಭ ಎಲ್ಲರೂ ಮನೆಯಲ್ಲೇ ಇರುತ್ತಾರೆ ಎಂಬುದನ್ನು ಮನಗಂಡ ಜೂಜುಕೋರರು ಹೊಸ ವಿಧಾನ ಕಂಡುಕೊಂಡಿದ್ದಾರೆ.