ಮಂಡ್ಯ ಯುವಕನ ಬಲವಂತದ ಮತಾಂತರ; ಪ್ರಕರಣ ಬೆಂಗಳೂರಿಗೆ ಶಿಫ್ಟ್ ಆಗುವ ಸಾಧ್ಯತೆ

 ಬಲವಂತದಿಂದ ಮರ್ಮಾಂಗದ ತುದಿ ಕತ್ತರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಪ್ರಕರಣ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಶಿಫ್ಟ್ ಆಗುವ  ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

Conversion case in mandya shift to Bangalore rav

ಹುಬ್ಬಳ್ಳಿ (ಸೆ.26) : ಬಲವಂತದಿಂದ ಮರ್ಮಾಂಗದ ತುದಿ ಕತ್ತರಿಸಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ ಪ್ರಕರಣ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಶಿಫ್‌್ಟಆಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದೆ ಎಂದು ಮೂಲಗಳು ತಿಳಿಸಿವೆ. ಈ ನಡುವೆ, ಬಲವಂತದ ಮತಾಂತರಕ್ಕೆ ಒಳಗಾದ ಶ್ರೀಧರ ಗಂಗಾಧರ ಅಲಿಯಾಸ್‌ ಸಲ್ಮಾನ್‌ ಮಾತನಾಡಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ದಲಿತ ಯುವಕನಿಗೆ ಬಲವಂತದಿಂದ ಮುಂಜಿ ಮಾಡಿಸಿ ಇಸ್ಲಾಂಗೆ ಮತಾಂತರ: ಹುಬ್ಬಳ್ಳಿಯಲ್ಲಿ ಕೇಸು ದಾಖಲು

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯುವಕ ಶ್ರೀಧರ ಗಂಗಾಧರನನ್ನು ಬಲವಂತವಾಗಿ ಮತಾಂತರ ಮಾಡಿರುವುದು ಬೆಂಗಳೂರಿನಲ್ಲಿಯೇ. ಹೀಗಾಗಿ ಈ ಪ್ರಕರಣವನ್ನು ಬೆಂಗಳೂರಿನ ಬನಶಂಕರಿ ಠಾಣೆಗೆ ಸ್ಥಳಾಂತರಿಸಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇನ್ನೆರಡು ದಿನಗಳಲ್ಲಿ ಪ್ರಕರಣ ಬೆಂಗಳೂರು ಠಾಣೆಗೆ ಶಿಫ್‌್ಟಆಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಶ್ರೀಧರ ಗಂಗಾಧರ ಅಲಿಯಾಸ್‌ ಸಲ್ಮಾನ್‌ ಮಾತನಾಡಿರುವ ವಿಡಿಯೋ ವೈರಲ್‌ ಆಗಿದೆ. ತನಗೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಯಾವ ರೀತಿ ಆಸೆ-ಆಮಿಷ ತೋರಿಸಲಾಯಿತು. ಯಾವ ರೀತಿ ತನ್ನ ಬ್ರೇನ್‌ವಾಶ್‌ ಮಾಡಿದ್ದಾರೆ. ಯಾವ ರೀತಿ ತನಗೆ ಹಿಂಸೆ ನೀಡಿದ್ದಾರೆ. ತಾನು ಹುಬ್ಬಳ್ಳಿಗೆ ಹೇಗೆ ಬಂದೆ ಎಂಬ ಬಗ್ಗೆ ವಿಡಿಯೋದಲ್ಲಿ ಆತ ವಿವರಿಸಿದ್ದಾನೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದ್ರೆ ಮತಾಂತರ ನಿಷೇಧ ಕಾಯ್ದೆ ವಾಪಾಸ್: ಪ್ರಿಯಾಂಕ್ ಖರ್ಗೆ ಘೋಷಣೆ

ಅಲ್ಲದೆ, ಯುವತಿಯನ್ನು ಭೇಟಿ ಮಾಡಿ ಆಕೆಯನ್ನು ಮತಾಂತರಗೊಳಿಸಲು ಹುಬ್ಬಳ್ಳಿಗೆ ಬಂದಿದ್ದೆ. ಆ ಯುವತಿಯ ಡಿಟೆಲ್ಸ್‌ನ್ನು ಕೂಡ ಈತನನ್ನು ಮತಾಂತರಗೊಳಿಸಿದವರೇ ನೀಡಿದ್ದರು ಎಂದು ಆತ ವಿಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಆದರೆ, ಈ ವಿಡಿಯೋವನ್ನು ಯಾವಾಗ, ಎಲ್ಲಿ ಮಾಡಲಾಗಿದೆ ಎಂಬುದು ಇನ್ನೂ ಬಹಿರಂಗಗೊಂಡಿಲ್ಲ. ಅಲ್ಲದೆ, ಹುಬ್ಬಳ್ಳಿಗೆ ಬಂದಾಗ ನಾಲ್ಕಾರು ಮಂದಿ ಸೇರಿ ಇವನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿದೆ. ಆದರೆ, ಹಲ್ಲೆ ನಡೆಸಿದ್ದು ಯಾರು? ಈತ ಇಲ್ಲಿನ ಯುವತಿಯನ್ನು ಮತಾಂತರಗೊಳಿಸಲು ಬಂದಿದ್ದ ಎಂಬುದು ಈ ಗುಂಪಿಗೆ ಗೊತ್ತಾಗಿತ್ತಾ? ಹಾಗಾದರೆ ಅವರಾರ‍ಯರು ಎಂಬುದು ಕೂಡ ಇನ್ನೂ ಬಹಿರಂಗಗೊಂಡಿಲ್ಲ.

Latest Videos
Follow Us:
Download App:
  • android
  • ios