ಹತ್ರಾಸ್ ಅತ್ಯಾಚಾರ ಪ್ರಕರಣ ಪ್ರಶ್ನೆ ಮಾಡಿದ್ದ ರಾಹುಲ್ ಗಾಂಧಿ/ ಕಾಂಗ್ರೆಸ್ ನಾಯಕಿ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದಲೇ ಹಲ್ಲೆ/ ಉತ್ತರ ಪ್ರದೇಶದಿಂದ ವರದಿಯಾದ ಪ್ರಕರಣ/ ಅತ್ಯಾಚಾರ ಆರೋಪಿಗೆ ಯಾಕೆ ಟಿಕೆಟ್ ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದೆ  ತಪ್ಪಾಯಿತು

ಲಕ್ನೋ(ಅ. 11) ಹತ್ರಾಸ್ ಅತ್ಯಾಚಾರ ಪ್ರಕರಣ ವಿರೋಧಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಂತ್ರಸ್ತೆಯ ಮನೆಗೆ ತೆರಳುವ ವೇಳೆ ಉತ್ತರ ಪ್ರದೇಶ ಪೊಲೀಸರು ತಡೆದಿದ್ದು ದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಅದೆ ಪಕ್ಷದಲ್ಲಿ ಮಹಿಳೆಯರ ಮೇಲೆ ಹಲ್ಲೆಯಾಗಿದೆ.

ಅತ್ಯಾಚಾರ ಆರೋಪಿಗೆ ಟಿಕೆಟ್ ನೀಡಿದ್ದೀರಿ ಎಂದು ವಿರೋಧ ಮಾಡಿದ ಕಾಂಗ್ರೆಸ್ ನಾಯಕಿ ಮೇಲೆ ಅದೆ ಪಕ್ಷದ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಮುಕುಂದ್ ಭಾಸ್ಕರ್ ಮಣಿ ಎಂಬುವರಿಗೆ ಟಿಕೆಟ್ ನೀಡಿದ್ದನ್ನು ತಾರಾ ಯಾದವ್ ವಿರೋಧಿಸಿದ್ದಾರೆ. ಇದೆ ಕಾರಣಕ್ಕೆ ಅವರ ಮೇಲೆ ಹಲ್ಲೆಯಾಗಿದೆ.

ಬೈ ಎಲೆಕ್ಷನ್ ನಡುವೆ ಜೋಡೆತ್ತುಗಳ ಜಾತಿ ವಾರ್!

ನಮ್ಮ ಪಾರ್ಟಿಯ ಇಮೇಜ್ ಗೆ ಈ ನಿರ್ಧಾರ ಧಕ್ಕೆ ತರುತ್ತದೆ , ಬೇರೆಯವರಿಗೆ ಟಿಕೆಟ್ ಕೊಡಿ ಎಂದು ತಾರಾ ಒತ್ತಾಯ ಮಾಡಿದ್ದಕ್ಕೆ ಅವರ ಮೇಲೆಯೇ ಹಲ್ಲೆಯಾಗಿದೆ.

ಈ ಪ್ರಕರಣ ತಲೆಕೆಟ್ಟವರು ನಡೆದುಕೊಂಡ ರೀತಿಯಿದೆ ಎಂದು ರಾಷ್ಟ್ರೀಯ ಮಹಿಳಾ ಹಕ್ಕು ಆಯೋಗದ ರೇಖಾ ಶರ್ಮ ಹೇಳಿದ್ದಾರೆ. 

Scroll to load tweet…
Scroll to load tweet…