'ಕೈ' ಗೆದ್ದ ಬೆನ್ನಲ್ಲೇ ಗಲಾಟೆ ಶುರು: ಬಿಜೆಪಿ ಮುಖಂಡನ ಮನೆಗೆ ಹೊಕ್ಕು ಕಾಂಗ್ರೆಸ್ಸಿಗರಿಂದ ಹಲ್ಲೆ
ಭಟ್ಕಳ ಮೂಡಶಿರಾಲಿಯ ರಾಮಚಂದ್ರ ನಾಯ್ಕ್ ಹಾಗೂ ಸಂಬಂಧಿಕರ ಮೇಲೆ ಕಾಂಗ್ರೆಸಿಗರಿಂದ ಹಲ್ಲೆ. ಹಳೇಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿರುವ ರಾಮಚಂದ್ರ ನಾಯ್ಕ್, ಪತ್ನಿ, ಮಕ್ಕಳನ್ನು ದೂಡಿ ರಾಮಚಂದ್ರ ನಾಯ್ಕ್ ಹಾಗೂ ಸಂಬಂಧಿಕ ಯುವಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ
ಕಾರವಾರ(ಮೇ.14): ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದ ಬೆನ್ನಲ್ಲೇ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗಲಾಟೆ ಪ್ರಾರಂಭವಾಗಿದೆ. ಹೌದು, ಬಿಜೆಪಿ ಮುಖಂಡನ ಮನೆಗೆ ಹೊಕ್ಕಿದ ಸುಮಾರು 15 ಮಂದಿ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ ಘಟನೆ ನಿನ್ನೆ(ಶನಿವಾರ) ನಡೆದಿದೆ. ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಭಟ್ಕಳ ಮೂಡಶಿರಾಲಿಯ ರಾಮಚಂದ್ರ ನಾಯ್ಕ್ ಹಾಗೂ ಸಂಬಂಧಿಕರ ಮೇಲೆ ಕಾಂಗ್ರೆಸಿಗರಿಂದ ಹಲ್ಲೆ ಮಾಡಲಾಗಿದೆ ಅಂತ ಆರೋಪಿಸಲಾಗಿದೆ. ಹಳೇಕೋಟೆ ಹನುಮಂತ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರಾಗಿರುವ ರಾಮಚಂದ್ರ ನಾಯ್ಕ್, ಪತ್ನಿ, ಮಕ್ಕಳನ್ನು ದೂಡಿ ರಾಮಚಂದ್ರ ನಾಯ್ಕ್ ಹಾಗೂ ಸಂಬಂಧಿಕ ಯುವಕರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ.
ಹೊಸಕೋಟೆ: ಮತ ಹಾಕಿಲ್ಲ ಅನ್ನೋ ವಿಚಾರಕ್ಕೆ ಗಲಾಟೆ, ದೊಡ್ಡಪ್ಪನನ್ನೇ ಕೊಲೆ ಮಾಡಿದ ಮಗ..!
ಭಟ್ಕಳದಲ್ಲಿ ಮಾಂಕಾಳು ವೈದ್ಯ ಬಿಜೆಪಿಯ ಸುನೀಲ್ ನಾಯ್ಕ್ ವಿರುದ್ಧ ಗೆದ್ದಿದ್ದರು. ಈ ವಿಚಾರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪದೇ ಪದೇ ರಾಮಚಂದ್ರ ಅವರ ಮನೆಯಲ್ಲಿದ್ದ ಸಂಬಂಧಿಕ ಯುವಕರಿಗೆ ಕರೆ ಮಾಡಿ ಕಿರಿಕಿರಿ ಮಾಡ್ತಿದ್ರು, ಈ ವೇಳೆ ಯುವಕರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಫೋನ್‌ನಲ್ಲಿ ಬೈಯ್ದಾಡಿಕೊಂಡಿದ್ರು. ನಂತರ ರಾಮಚಂದ್ರ ನಾಯ್ಕ್ ಅವರ ಮನೆಗೆ ಹೊಕ್ಕಿದ ಕಾಂಗ್ರೆಸ್ ಕಾರ್ಯಕರ್ತರಿಂದ ಎಲ್ಲರ ಮೇಲೆ ಹಲ್ಲೆ ಮಾಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಎರಡೂ ಪಕ್ಷದವರಿಂದ ದೂರು ದಾಖಲಾಗಿದೆ. ಎರಡು ಪಕ್ಷದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.