ಬೆಂಗಳೂರು(ಡಿ. 12)  ವೈಯುಕ್ತಿಕ ದ್ವೇಷಕ್ಕೆ ಒಂದನೇ ತರಗತಿ ವಿದ್ಯಾರ್ಥಿನಿಗೆ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ.  ಶಾಲಾ ಪ್ರಾಂಶುಪಾಲ ಹಾಗೂ ಶಿಕ್ಷಕಿ ಕಿರುಕುಳ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕಲಿಕೆಯಲ್ಲಿ ಹಿಂದುಳಿದಿದ್ದಕ್ಕೆ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕಿ ಥಳಿಸಿದ್ದಾರೆ. ಮೈತುಂಬಾ ಬಾಸುಂಡೆ ಬರುವಂತೆ ಒಂದನೇ ತರಗತಿ ವಿದ್ಯಾರ್ಥಿನಿಗೆ ಥಳಿಸಿದ್ದಾರೆ. ಥಳಿಸಿದ್ದನ್ನು ಪ್ರಶ್ನೆ ಮಾಡಿದಕ್ಕೆ ಪೋಷಕರಿಗೂ ಪ್ರಾಂಶುಪಾಲೆ ಹಾಗೂ ಶಾಲಾ ನಿರ್ದೇಶಕ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಪ್ರವಾಸಕ್ಕೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕನಿಂದ ಇದೆಂಥಾ ಫನಿಶ್‌ಮೆಂಟ್!

ಪ್ರಶ್ನಿಸಿದ್ದಕ್ಕೆ ದಿನನಿತ್ಯ ವಿದ್ಯಾರ್ಥಿನಿಗೆ ಮಾನಸಿಕ ಹಾಗೂ ದೈಹಿಕ ಹಲ್ಲೆ ಮಾಡಲಾಗಿದೆ. ನವಚೈತನ್ಯ ಪಬ್ಲಿಕ್ ಸ್ಕೂಲ್‌ ನ ಪ್ರಾಂಶುಪಾಲೆ ಶೋಭಾ ಹಾಗೂ ನಿರ್ದೇಶಕ ಶ್ರೀನಿವಾಸ್ ಬೆದರಿಕೆ ಹಾಕಿದ್ದಾರೆ.

ಅಂದ್ರಹಳ್ಳಿಯಲ್ಲಿರುವ ನವಚೈತನ್ಯ ಪಬ್ಲಿಕ್ ಸ್ಕೂಲ್‌ ಮೇಲೆ  ಪೋಷಕರು ಬ್ಯಾಡರಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸಂಬಂಧ ಪ್ರಾಂಶುಪಾಲೆ ಹಾಗೂ ಶಾಲಾ ನಿರ್ದೇಶಕನ ವಿರುದ್ದ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.