Asianet Suvarna News Asianet Suvarna News

ಇವನೆಂತಾ ಗಂಡ? ಪತ್ನಿಗೆ ಪೊರ್ನ್ ವಿಡಿಯೋ ತೋರಿಸಿ ಆಫ್ರಿಕಾ ಪುರುಷನ ಜೊತೆ ಸೆಕ್ಸ್‌ಗೆ ಒತ್ತಾಯ!

ಪತ್ನಿಗೆ ಪೋರ್ನ್ ವಿಡಿಯೋ ತೋರಿಸಿ ಆಫ್ರಿಕಾ ಪುರುಷನ ಜೊತೆ ಸೆಕ್ಸ್ ಒತ್ತಾಯಿಸುತ್ತಿದ್ದ ಭೀಕರ ಘಟನೆಯೊಂದು ಬಹಿರಂಗವಾಗಿದೆ. ಪತಿ ವಿರುದ್ಧ ದೂರು ದಾಖಲಿಸಿರುವ ಪತ್ನಿ ನಡೆದ ಘಟನೆಯನ್ನು ವಿವರಿಸಿದ್ದಾಳೆ. 
 

Complaint against husband who forced Lucknow wife to have sex with African man ckm
Author
First Published Aug 4, 2024, 3:24 PM IST | Last Updated Aug 4, 2024, 3:24 PM IST

ಲಖನೌ(ಆ.04) ಪತಿ ಹಾಗೂ ಪತ್ನಿ ನಡುವಿನ ಸಂಬಂಧದ ಮಹತ್ವ ಕಳೆದುಕೊಳ್ಳುತ್ತಿದೆ ಅನ್ನೋ ಆರೋಪಗಳಿವೆ. ಇದಕ್ಕೆ ಪೂರಕವಾಗಿ ಹಲವು ಘಟನೆಗಳು ನಡೆದಿದೆ. ಜೊತೆಗೆ ವಿಚ್ಚೇದನ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಊಹಿಸಲು ಅಸಾಧ್ಯವಾಗಿರುವ ಘಟನೆಯೊಂದು ನಡೆದಿದೆ. ಇಲ್ಲೊಬ್ಬ ಪತ್ನಿಗೆ ಅಶ್ಲೀಲ ವಿಡಿಯೋ ತೋರಿಸಿ, ಆಫ್ರಿಕಾದ ಪುರುಷನ ಜೊತೆ ಸಂಭೋಗ ಮಾಡುವಂತೆ ಒತ್ತಾಯಿಸಿದ ಘಟನೆ ನಡೆದಿದೆ. ಇದೀಗ ಉತ್ತರ ಪ್ರದೇಶದ ಲಖನೌ ಮೂಲದ ಪತ್ನಿ  ಪೊಲೀಸ್ ಠಾಣೆಯಲ್ಲಿ ಪತಿ ಗಣೇಶ್ ಗಂಜ್ ವಿರುದ್ಧ ದೂರು ದಾಖಲಿಸಿದ್ದಾಳೆ. 

ಪತಿ ಹಾಗೂ ಪತ್ನಿ ಚೀನಾದಲ್ಲಿರುವಾಗ ಈ ಘಟನೆ ನಡೆದಿದೆ. ಪತ್ನಿಗೆ ಪ್ರತಿ ದಿನ ಥಳಿಸುತ್ತಿದ್ದ ಪತಿ, ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದ. ಬಳಿಕ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಪತಿಯ ಪರಿಚಿತ ಆಫ್ರಿಕಾ ಪುರುಷನ ಜೊತೆ ಸೆಕ್ಸ್ ಮಾಡುವಂತೆ ಬೆದರಿಕೆ ಹಾಕುತ್ತಿದ್ದಎಂದು ಲಖನೌದ ನಾಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಭಾರತೀಯ ರಾಯಭಾರ ಕಚೇರಿ ನೆರವಿನಿಂದ ಭಾರತಕ್ಕೆ ಮರಳಿದ್ದೇನೆ ಎಂದು ಮಹಿಳೆ ಹೇಳಿದ್ದಾಳೆ.

ಐವರ ಜೊತೆ ಮದುವೆ, 49 ಹುಡ್ಗೀರ ಜೊತೆ ಮುಹೂರ್ತ ಫಿಕ್ಸ್: ಬೆಚ್ಚಿ ಬೀಳಿಸಿದ ವಂಚಕನ ಲೈಫ್‌ಸ್ಟೈಲ್!

2015ರಲ್ಲಿ ಇವರ ಮದುವೆಯಾಗಿದೆ. ಗಣೇಶ್ ಗಂಜ್‍ಗೆ ಚೀನಾದಲ್ಲಿ ಕೆಲಸ. ಮದುವೆ ಮೊದಲ ವಾರದಲ್ಲೇ ಮಹಿಳೆ ಪೋಷಕರು ಗಣೇಶ್ ಗಂಜ್‌ಗೆ 15 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದಾರೆ. ಮದುವೆಯಾದ ಮೊದಲ ವಾರದಿಂದ ಪತಿ ಪತ್ನಿ ನಡುವೆ ಜಗಳ ಶುರುವಾಗಿದೆ. ವರದಕ್ಷಿಣೆ ಕಡಿಮೆಯಾಗಿದೆ. ಮೊದಲು ಹೇಳಿದ್ದ ಮೊತ್ತ ನೀಡಿಲ್ಲ ಎಂದು ಕಿರಿಕ್ ತೆಗೆದು ಜಗಳ ಶುರುವಾಗಿದೆ. ಇದರ ನಡುವೆ ಮಗು ಜನನವಾಗಿದೆ. ಆದರೂ ಇವರ ಜಗಳ ನಿಂತಿಲ್ಲ. 

ಕೊರೊನಾ ಬಳಿಕ ಪುತ್ರಿಯೊಂದಿಗೆ ಇಬ್ಬರು ಚೀನಾಗೆ ತೆರಳಿದ್ದಾರೆ.  ಇಲ್ಲಿಂದ ಪತಿಯ ಅಸಲಿ ಮುಖ ಬೆಳಕಿಗೆ ಬಂದಿದೆ. ಆಫ್ರಿಕಾ ಪುರುಷನ ಜೊತೆ ಆತ್ಮೀಯತೆ ಹೊಂದಿದ್ದ ಗಣೇಶ್ ಗಂಜ್, ಪತ್ನಿಯನ್ನು ಪೀಡಿಸಲು ಆರಂಭಿಸಿದ್ದಾನೆ. ಅಶ್ಲೀಲ ವಿಡಿಯೋಗಳನ್ನು ತೋರಿಸಿ ಇದೇ ರೀತಿ ಆಫ್ರಿಕಾ ಪುರುಷನ ಜೊತೆ ಸೆಕ್ಸ್ ಮಾಡುವಂತೆ ಪೀಡಿಸಿದ್ದಾನೆ. ಪತಿಯ ಕ್ರೌರ್ಯ ಹೆಚ್ಚಾಗುತ್ತಿದ್ದಂತೆ ಚೀನಾದಲ್ಲಿರುವ ರಾಯಭಾರಿಯನ್ನು ಸಂಪರ್ಕಿಸಿ ಪತ್ನಿ ಭಾರತಕ್ಕೆ ಮರಳಿದ್ದಾಳೆ. 

ಚಿಕ್ಕಬಳ್ಳಾಪುರ: ತಾಯಿ ಸಾವಿನಿಂದ ಬೇಸತ್ತು ರೈಲಿಗೆ ತಲೆ ಕೊಟ್ಟು ಅಕ್ಕ, ತಮ್ಮ ಆತ್ಮಹತ್ಯೆ..!

ಲಖನೌದಲ್ಲಿರುವ ತವರಿಗೆ ಆಗಮಿಸಿದ ಪತ್ನಿ ದೂರು ದಾಖಲಿಸಿ ನ್ಯಾಯ ಕೊಡಿಸುವಂತೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾಳೆ. ಇದೇ ವೇಳೆ ಕ್ರೂರಿ ಪತಿ ಕೂಡ ಪತ್ನಿ ವಿರುದ್ದ ದೂರು ದಾಖಲಿಸಿದ್ದಾಳೆ.
 

Latest Videos
Follow Us:
Download App:
  • android
  • ios