ಹೊಸಪೇಟೆಯಲ್ಲಿ‌ ಹೆಚ್ಚಾದ ಲ್ಯಾಂಡ್ ಮಾಫಿಯಾ: ಅಧಿಕಾರಿಗಳು, ಮಾಜಿ ನಗರಸಭೆ ಸದಸ್ಯರೇ ಇಲ್ಲಿ ಆರೋಪಿಗಳು

*   ನಕಲಿ ದಾಖಲೆ ಸೃಷ್ಟಿಸೋ‌ ಮೂಲಕ ಸರ್ಕಾರಿ ‌ಭೂಮಿ‌‌ ಕಳುಹಿಸೋ ಯತ್ನ 
*  ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲು 
*  ರಾತ್ರೋರಾತ್ರಿ ಕೋಟಿಗಟ್ಟಲೇ ದುಡಿಯಲು ಮುಂದಾದ ಭ್ರಷ್ಟರು 

Complaint Against Former Hosapete CMC Members and Officers on Land Mafia Case grg

ವರದಿ: ನರಸಿಂಹ ‌ಮೂರ್ತಿ‌ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯನಗರ

ವಿಜಯನಗರ(ಮೇ.26):  ಹೊಸಪೇಟೆ ಕೇಂದ್ರವನ್ನಾಗಿ‌ ಮಾಡಿ ವಿಜಯನಗರ ಜಿಲ್ಲೆಯಾಗಿದ್ದೇ ಬಂತೂ ಇಲ್ಲಿಯ‌ ಭೂಮಿಗೆ ಚಿನ್ನದ ‌ಬೆಲೆ ಬಂದಿದೆ.  ಹೀಗಾಗಿ ಇಲ್ಲಿ‌ ಎಗ್ಗಿಲ್ಲದೇ‌‌ ನಕಲಿ ದಾಖಲೆ ಸೃಷ್ಟಿಸೋ‌ ಮೂಲಕ ಖಾಸಗಿ ಜಮೀನಲ್ಲ‌ ಸರ್ಕಾರಿ ‌ಭೂಮಿ‌‌ ಕಳುಹಿಸೋ ಯತ್ನ ನಡೆದಿದೆ. ಇದರಲ್ಲಿ ಮಾಜಿ ನಗರಸಭೆ ಸದಸ್ಯರು ಮತ್ತು ನಗರಸಭೆ, ಕಂದಾಯ ಇಲಾಖೆಯ ಅಧಿಕಾರಿಗಳು ಶಾಮೀಲಾಗಿದ್ದಾರೆ. ಹೀಗಾಗಿ ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆಯಾಗಿದೆ.
ಸರ್ಕಾರಿ ಭೂ ವಂಚನೆ ಹಿನ್ನಲೆ ನಗರಸಭೆ ಮಾಜಿ ಸದಸ್ಯ ಸೇರಿದಂತೆ ಸರ್ಕಾರಿ ಅಧಿಕಾರಿಗಳ ಮೇಲೆ ‌ಇದೀಗ ಹೊಸಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೇಲಿಯೇ ಎದ್ದು ಹೊಲ ಮೇಯ್ದ ಕಥೆಗೆ ಮಾಜಿ ನಗರಸಭೆ ಸದಸ್ಯನೇ ಕಿಂಗ್ ಪಿನ್

ಇಲ್ಲಿ ಸರ್ಕಾರಿ ಸ್ಥಳವನ್ನು ಸಂರಕ್ಷಿಸಿ, ಸಾರ್ವಜನಿಕರಿಗೆ ನೀಡೋದ್ರ ಜೊತೆ ಆಯ್ದ ಲೇಔಟ್ ಮತ್ತು ಸ್ಥಳಗಳಲ್ಲಿ ಮೂಲ‌ಭೂತ ಸೌಕರ್ಯವನ್ನು ನೀಡಬೇಕಾದ ನಗರಸಭೆ ಸದಸ್ಯರು ಮತ್ತು ಅಧಿಕಾರಿಗಳು ಇಲ್ಲಿ ಆರೋಪಿಗಳಾಗಿದ್ದಾರೆ. ಸರ್ಕಾರಿ ಭೂವಿಯ ನಕಲಿ ದಾಖಲೆ (ಫಾರಂ 3 ) ಸೃಷ್ಟಿ ಮಾಡಿ ಮತ್ತೊಬ್ಬರಿಗೆ ಪರಬಾರೆ ಮಾಡೋದೇ ಇವರ ಕೆಲಸ. ಹೀಗಾಗಿ ಒಂದೇ ದಿನ ನಾಲ್ಕು  ಪ್ರಕರಣ ದಾಖಲಾಗಿದೆ.  ಮಾಜಿ ನಗರಸಭೆ ಸದಸ್ಯ ಕಿಂಗ್ ಪಿನ್ ಸೇರಿ ಹಲವು ಖಾಸಗಿ ವ್ಯಕ್ತಿಗಳು ಮತ್ತು ಹತ್ತಕ್ಕೂ ಹೆಚ್ಚು ಮಾಜಿ ಮತ್ತು ಹಾಲಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಹೊಸಪೇಟೆ ನಗರ ಠಾಣೆಯಲ್ಲಿ ದೂರು ‌ದಾಖಲಾಗಿದೆ. 

Vijayanagara: ಇಲ್ಲಿನ ರೈತರಿಗೆ ಅಕಾಲಿಕ ಮಳೆಯೇ ಆಸರೆ..!

ಓರ್ವ ನಗರಸಭೆ ಮಾಜಿ ಸದಸ್ಯ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಶಾಮೀಲು

ಪ್ರಕರಣ 1: ಹೊಸಪೇಟೆಯ ವ್ಯಾಪ್ತಿಯಲ್ಲಿ ಬರೋ ಸರ್ವೆ ನಂ 302/ಬಿ2 ನಲ್ಲಿ .82 ಸೆಂಟ್ಸ ನಕಲಿದಾಖಲೆ ಸೃಷ್ಟಿ ಮಾಡಿ ತಮ್ಮ ಹೆಸರುಗಳಿಗೆ ವರ್ಗಾಹಿಸಿ ಕೊಂಡಿದ್ದಾರೆ.

ಪ್ರಕರಣ 2 :  ಸರ್ವೆ ನಂ 148 ರ ಸಂಕ್ಲಾಪುರ ದ  2.17 ಏಕರೆ ಭೂಮಿ ನಕಲಿದಾಖಲೆ ಸೃಷ್ಟಿಸಿ  ತಮ್ಮ ಹೆಸರಿಗೆ ಹಸ್ತಾಂತರ ಮಾಡಿಕೊಂಡಿದ್ದಾರೆ.
ಈ ಎರಡು ಪ್ರಕರಣದಲ್ಲಿ  ಮಾಜಿ ನಗರಸಭೆ ಸದಸ್ಯ ಡಿ. ವೇಣುಗೋಪಾಲ, & ಗ್ಯಾಂಗ್ ನ ತಂಡದವರಾದ ಮಲ್ಲಿಕಾರ್ಜುನ, ಚೇಟ್ ರಾಮ್, ಟಿ.ಸೋಮಪ್ಪ, ಬೆಳಗೋಡ ಅಂಬಣ್ಣ, ಗಣೇಶ, ತಾಯಪ್ಪ ಹಾಗೂ ಡಿ.ಪಾರ್ವತಿ ವಿರುದ್ಧ ದೂರು ದಾಖಲಾದೆ.

ಇನ್ನೂ ಮತ್ತೆರಡು ಪ್ರಕರಣಗಳಲ್ಲಿ ನಗರಸಭೆಯ ನಿವೃತ್ತ ಪೌರಾಯುಕ್ತ  ಬಿ.ಸಿ.ಪೂಜಾರ್,  ಕಂದಾಯ ಅಧೀಕ್ಷಕ ಬಿ.ಎಸ್. ಅಜಿತ್ ಸಿಂಗ್, ಕರ ವಸೂಲಾಧಿಕಾರಿ ನೀಲಕಂಠ, ಮಂಜುನಾಥ ದಳವಾಯಿ, ನಾಗರಾಜ್, ರಮೇಶ್, ಎಸ್.ಸುರೇಶ್ ದೂರು ದಾಖಲಾಗಿದೆ. 

ರೈತರಿಗೆ ಗುಡ್‌ನ್ಯೂಸ್: ತುಂಗಭದ್ರ ಜಲಾಶಯಕ್ಕೆ ದಾಖಲೆ ಪ್ರಮಾಣದಲ್ಲಿ ಹರಿದುಬಂದ ನೀರು

ಸದ್ಯ ಹಾಲಿ ಪೌರಾಯುಕ್ತ ರಮೇಶ್ ಶರಣಪ್ಪ ಅವರಿಂದ ದೂರು ದಾಖಲು ಮಾಡಿದ್ದು ಈ ಬಗ್ಗೆ ಸಮಗ್ರ ತನಿಖೆ ಮಾಡೋದಾಗಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ತಿಳಿಸಿದ್ದಾರೆ.

ಹೊಸಪೇಟೆಯಲ್ಲಿ ಭೂಮಿಗೆ ಬಂಗಾರದ ಬೆಲೆ

ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಬರೋ ಭೂಮಿಗೆ ಸದ್ಯಕ್ಕೆ ಬಂಗಾರದ ಬೆಲೆ ಇದೆ. ಜಿಲ್ಲೆಯಾದ ಬಳಿಕ ಇಲ್ಲಿ ವ್ಯಾಪಾರ ವಹಿವಾಟು ವೃದ್ಧಿಸಿದ್ದಲ್ಲದೇ, ಎಲ್ಲ ಸರ್ಕಾರಿ ಇಲಾಕೆ ಕಚೇರಿಗಳು ಅಧಿಕಾರಿಗಳು ಬರುತ್ತಿರೋ ಹಿನ್ನೆಲೆ ಇಲ್ಲಿ ಬಾಡಿಗೆ ಹೆಚ್ಚಳವಾಗೋದ್ರ ಜೊತೆ 30x40 ಸೈಜಿನ ಸೈಟ್ ದರ ಮೂವತ್ತು ಲಕ್ಷ ದಾಟಿದೆ. ಹೀಗಾಗಿ ಇಲ್ಲಿಯ ಕೆಲ ಮಾಜಿ ನಗರಸಭೆ ಸದಸ್ಯರು ಸೇರಿದಂತೆ ಸರ್ಕಾರಿ ಅಧಿಕಾರಿಗಳು ಸರ್ಕಾರಿ ಸ್ಥಳವನ್ನು ಒತ್ತುವರಿ ಮಾಡೋ ಮೂಲಕ ಅದನ್ನು ಕಬಳಿಸಿ ರಾತ್ರೋರಾತ್ರಿ ಕೋಟಿಗಟ್ಟಲೇ ದುಡಿಯಲು ಮುಂದಾಗಿದ್ದಾರೆ.
 

Latest Videos
Follow Us:
Download App:
  • android
  • ios