ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ: ಪೋಲಿಸ್ ಹೆಡ್ ಕಾನ್‌ಸ್ಟೇಬಲ್ ಸ್ಥಳದಲ್ಲೇ ಸಾವು!
ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾగి ಪೋಲಿಸ್ ಹೆಡ್ ಕಾನ್‌ಸ್ಟೇಬಲ್ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು- ಹಾಸನ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಶ್ರೀನಿವಾಸ್ ಮೃತ ಪೋಲಿಸ್ ಹೆಡ್ ಕಾನ್‌ಸ್ಟೇಬಲ್.

ಬೆಂಗಳೂರು (ಅ.06): ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾగి ಪೋಲಿಸ್ ಹೆಡ್ ಕಾನ್‌ಸ್ಟೇಬಲ್ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಬೆಂಗಳೂರು- ಹಾಸನ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಶ್ರೀನಿವಾಸ್ ಮೃತ ಪೋಲಿಸ್ ಹೆಡ್ ಕಾನ್‌ಸ್ಟೇಬಲ್. ಸೋಲೂರು ಮೂಲದ ಮೃತ ಪೋಲಿಸ್ ಹೆಡ್ ಕಾನ್‌ಸ್ಟೇಬಲ್ ಬೆಂಗಳೂರಿನ ಉಪ್ಪಾರಪೇಟೆ ಪೋಲಿಸ್ ಠಾಣೆಯಲ್ಲಿ ಕೆಲಸ ಮಾಡ್ತಿದ್ದರು. ಸದ್ಯ ಡ್ಯೂಟಿ ಮುಗಿಸಿ ಮನೆಗೆ ಹೋಗ್ತಿದ್ದ ವೇಳೆ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಹೆಡ್ ಕಾನ್‌ಸ್ಟೇಬಲ್ ಶ್ರೀನಿವಾಸ್ ಸ್ಥಳದಲ್ಲೇ ಸಾವನಪ್ಪಿದ್ದು, ಕುದೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತದಲ್ಲಿ ಅವಿವಾಹಿತ ಸಾವು: ಬೈಕ್-ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅವಿವಾಹಿತ ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಹುಲಿಹೈದರ್ ಗ್ರಾಮದ ಕಲ್ಯಾಣಿ ಬಾವಿ ಸಮೀಪ ನಡೆದಿದೆ. ಹನುಮನಗೌಡ ಮಾಲಿ ಗೌಡ್ರು ದುರ್ದೈವಿ. ಸಿಂಧನೂರು ತಾಲೂಕಿನ ಊಮಲೂಟಿ ಗ್ರಾಮದಲ್ಲಿ ಡಿಸೆಂಬರ್ ೧೫ಕ್ಕೆ ಮದುವೆ ನಿಶ್ಚಯವಾದ ಹಿನ್ನೆಲೆಯಲ್ಲಿ ತಯಾರಿಗಾಗಿ ಹನುಮನಗೌಡ ಓಡಾಟ ನಡೆಸಿದ್ದರು.
5000 ತಾಂಡಾಗಳಿಗೆ ಕಂದಾಯ ಗ್ರಾಮ ಪಟ್ಟ: ಸಿಎಂ ಸಿದ್ದರಾಮಯ್ಯ
ಬುಧವಾರ ಸ್ವಗ್ರಾಮ ಹನುಮನಾಳದಿಂದ ಹುಲಿಹೈದರ್ ಮಾರ್ಗವಾಗಿ ಊಮಲೂಟಿ ಕಡೆ ಹೋರಟಾಗ ಎದುರಿಗೆ ಬಂದ ಕಾರೊಂದು ನೇರವಾಗಿ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಚಾಲಕ ಹನುಮನಗೌಡನಿಗೆ ತಲೆಗೆ, ದೇಹಕ್ಕೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಕಾರು ಚಾಲಕ ಮಹೇಶ್ವರಸ್ವಾಮಿ ಎಂಬಾತನಿಗೂ ತಲೆಗೆ, ಕೈಗೆ ಗಾಯಗಳಾಗಿವೆ. ಗಂಗಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನಾ ಸ್ಥಳಕ್ಕೆ ಪಿಐ ಜಗದೀಶ ಕೆಜೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಕನಕಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ, 2 ಮಕ್ಕಳು ಸಜೀವ ದಹನ: ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕ ಎಗರಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದು ಬೆಂಕಿ ಹೊತ್ತಿಕೊಂಡು ಉರಿದು ಮಹಿಳೆ ಹಾಗೂ ಇಬ್ಬರು ಮಕ್ಕಳು ಸಜೀವ ದಹನವಾಗಿರುವ ದಾರುಣ ಘಟನೆ ಮಂಗಳವಾರ ಮುಂಜಾನೆ ಬೆಂಗಳೂರಿನ ನೈಸ್ ರಸ್ತೆಯಲ್ಲಿ ನಡೆದಿದೆ. ರಾಮಮೂರ್ತಿನಗರದ ವಿಜಿನಾಪುರ ನಿವಾಸಿಗಳಾದ ಸಿಂಧೂ(31) ಹಾಗೂ ಆಕೆಯ ಇಬ್ಬರು ಮಕ್ಕಳಾದ ಕುಶವಿ(2) ಮತ್ತು ಪ್ರಣವಿ(6) ಮೃತರು. ಕಾರು ಚಾಲನೆ ಮಾಡುತ್ತಿದ್ದ ಪತಿ ಮಹೇಂದ್ರನ್(35) ಗಂಭೀರವಾಗಿ ಗಾಯಗೊಂಡಿದ್ದಾರೆ.
ಸರ್ಕಾರ ಹಿಂದೂ ವಿರೋಧಿ ಮಾತ್ರವಲ್ಲ, ಮಹಿಳೆಯ ವಿರೋಧಿ ಸರ್ಕಾರ: ನಳೀನ್ ಕುಮಾರ್ ಕಟೀಲ್
ತಮಿಳುನಾಡಿನ ಸೇಲಂ ಮೂಲದ ಮಹೇಂದ್ರನ್ ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ. ವಿಜಿನಾಪುರದಲ್ಲಿ ನೆಲೆಸಿದ್ದರು. ಟಾಟಾ ನೆಕ್ಸಾನ್ ಕಾರಿನಲ್ಲಿ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಮಂಗಳವಾರ ಬೆಳಗಿನ ಜಾವ 2.50ರ ಸುಮಾರಿಗೆ ನೈಸ್ ರಸ್ತೆಯಲ್ಲಿ ಬರುತ್ತಿದ್ದರು. ನಿಯಂತ್ರಣ ತಪ್ಪಿದ ಕಾರು, ರಸ್ತೆ ವಿಭಜಕ ಹತ್ತಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಲಾರಿ ಉರುಳಿ ಬಿದ್ದರೆ, ಕಾರು ಬೆಂಕಿ ಹೊತ್ತಿಕೊಂಡು ಉರಿಯಲು ಆರಂಭಿಸಿದೆ. ಈ ವೇಳೆ ಪತ್ನಿ ಸಿಂಧೂ ಮತ್ತು ಪುತ್ರಿ ಕುಶವಿ ಸಜೀವ ದಹನವಾಗಿದ್ದಾರೆ. ಪ್ರಣವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.