ಲಕ್ನೋ( ಫೆ. 23)   ಉತ್ತರ ಪ್ರದೇಶದಿಂದ ಮತ್ತೊಂದು ಘೋರ ಪ್ರಕರಣ ವರದಿಯಾಗಿದೆ.  ಹೆದ್ದಾರಿ ಪಕ್ಕ ಅರ್ಧ ಸುಟ್ಟ ಸ್ಥಿತಿಯಲ್ಲಿ ಯುವತಿಯೊಬ್ಬಳು ಪತ್ತೆಯಾಗಿದ್ದಾಳೆ. ಸ್ವಾಮಿ ಸುಖದೇವಾಬಂದ್ ಕಾಲೇಜಿನ ವಿದ್ಯಾರ್ಥಿನಿ ಮೇಲೆ ದುಷ್ಕರ್ಮಿಗಳು ಕ್ರೌರ್ಯ ಎಸೆಗಿದ್ದಾರೆ. 

ಅರೆಸುಟ್ಟನ ಸ್ಥಿತಿಯಲ್ಲಿ ಇದ್ದ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾಳೆ. 

ಯುವತಿ ಮಾತನಾಡುವ ಸ್ಥಿತಿಯಲ್ಲಿ ಇದ್ದುದರಿಂದ ಆಕೆಯಿಂದಲೇ ವಿವರ ಪಡೆದುಕೊಂಡು  ಕುಟುಂಬಕ್ಕೆ ವಿವರ ನೀಡಿದೆವು.  ಕಾಲೇಜಿನಿಂದ ವಾಪಸ್ ಕರೆದುಕೊಂಡು ಬರಲು ತಂದೆ ಹೊರಟಿದ್ದರು. ಆದರೆ ಮಗಳು  ಕಾಣದ ಕಾರಣ ಹುಡುಕಾಟ ಆರಂಭಿಸಿದ್ದರು.

ಒಂದು ಹುಲಿ ಹಿಡಿದಾಯ್ತು..ಮತ್ತೊಂದು ಬಂತು ಹುಲಿರಾಯನ ಕಂಡು ಬೆಚ್ಚಿದ ಯುವತಿ

ಯುವತಿಯ ಸಹಪಾಠಿಗಳನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆಹಾಕಲಾಗುತ್ತಿದೆ.  ಎಲ್ಲ ಕೋನಗಳಿಂದಲೂ ವಿಚಾರಣೆ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಆದರೆ ಯುವತಿ ಶಾಕ್ ನಲ್ಲಿ ಇದ್ದು ಆಕೆಗೆ ಹಲವು ಘಟನೆಗಳು ನೆನಪಿಲ್ಲದಿರುವುದು ತನಿಖೆಗೆ ಸಮಸ್ಯೆಯಾಗಿದೆ.

ಉತ್ತರ ಪ್ರದೇಶ, ಬಿಹಾರ ಮತ್ತು ರಾಜಸ್ಥಾನದಿಂದ ಮಹಿಳಾ ದೌರ್ಜನ್ಯದ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇವೆ. ಹತ್ರಾಸ್ ಅತ್ಯಾಚಾರ ಪ್ರಕರಣ ಸಹ ಹಲವು ತಿರುವುಗಳನ್ನು ಪಡೆದುಕೊಂಡಿತ್ತು.