ಹಾಸನ, (ಡಿ.25): ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತದೇಹ ಇಂದು (ಬುಧವಾರ) ಹಾಸನದ ಹೊರವಲಯದಲ್ಲಿರುವ ಸತ್ಯವಂಗಲ ಕೆರೆಯಲ್ಲಿ ಪತ್ತೆಯಾಗಿದೆ. 

ಮಸಾಜ್ ಪಾರ್ಲರ್‌ ರೇಡ್: ಸಿಕ್ಕಿಬಿದ್ದ ಸಿಸಿಬಿ ಪೋಲಿಸ್ರು, ಡಿಸಿಪಿ ರಿಯಾಕ್ಷನ್

ಅರಕಲುಗೂಡು ತಾಲೂಕಿನ ಹೊಂಡರವಳ್ಳಿ ಗ್ರಾಮದ ಶರಣ್ಯಾ (19) ಮೃತ ವಿದ್ಯಾರ್ಥಿನಿ.  ಆದ್ರೆ, ಶರಣ್ಯಾಳ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಶರಣ್ಯಾ  ಬಿಎಸ್ಸಿ ವಿದ್ಯಾರ್ಥಿನಿಯಾಗಿದ್ದು, ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಪ್ರಕರಣ ತಿಳಿದು ಸ್ಥಳಕ್ಕೆ ಆಗಮಿಸಿದ ಕೆ.ಆರ್.ಪುರಂ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.