ಬೆಂಗಳೂರು: ತನ್ನ ತಪ್ಪಿಲ್ಲದಿದ್ದರೂ ಕಾಲೇಜಿಂದ ಸಸ್ಪೆಂಡ್, ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ
ಬನ್ನೇರುಘಟ್ಟದ ಎಎಮ್‌ಸಿ ಕಾಲೇಜಿನಲ್ಲಿ ಮೊದಲ ವರ್ಷದ ಹೋಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್‌ಗೆ ಒಂದೂವರೆ ಲಕ್ಷ ಫೀಸ್ ಕೊಟ್ಟು ವ್ಯಾಸಂಗ ಮಾಡುತ್ತಿದ್ದ ನಿಖಿಲ್. ಸದ್ಯ ಕಾಲೇಜಿನ ಮುಂಭಾಗ ಪ್ರತಿಭಟನೆ ಮಾಡಲು ನಿಖಿಲ್ ಸುರೇಶ್ ಪೋಷಕರು ನಿರ್ಧಾರ.
ಬೆಂಗಳೂರು(ಡಿ.29): ಸಸ್ಪೆಂಡ್ ಮಾಡಿದ್ದಕ್ಕೆ ಮನನೊಂದು ಕಾಲೇಜು ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗರಬಾವಿಯ ವಿನಾಯಕ ಲೇಔಟ್‌ನಲ್ಲಿ ನಿನ್ನೆ(ಗುರುವಾರ) ರಾತ್ರಿ ನಡೆದಿದೆ. ನಿಖಿಲ್ ಸುರೇಶ್ ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿ.
ಮೃತ ನಿಖಿಲ್ ಸುರೇಶ್ ಬನ್ನೇರುಘಟ್ಟದ ಎಎಮ್‌ಸಿ ಕಾಲೇಜಿನಲ್ಲಿ ಹೋಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್ ಮಾಡುತ್ತಿದ್ದನು. ಕಳೆದ 15 ದಿನಗಳ ಹಿಂದೆ ನಿಖಿಲ್ ವಿದ್ಯಾರ್ಥಿನಿಯೊಬ್ಬಳ ಜೊತೆ ಜಗಳ ಮಾಡಿಕೊಂಡಿದ್ದನಂತೆ. ತನ್ನ ತಪ್ಪಿಲ್ಲದಿದ್ದರೂ ಕಾಲೇಜು ಆಡಳಿತ ಮಂಡಳಿ ನಿಖಿಲ್‌ನನ್ನ ಸಸ್ಪೆಂಡ್ ಮಾಡಿದ್ದರು. ಇದರಿಂದ ನಿಖಿಲ್ ತಾಯಿಯೊಂದಿಗೆ ಮತ್ತೆ ಕಾಲೇಜಿಗೆ ಹೋಗಿ ಕ್ಷಮೆ ಕೇಳಿದ್ದನು. ಅಪಾಲಜಿ ಲೆಟರ್ ಬರೆದುಕೊಟ್ಟಿದ್ರು ಮತ್ತೆ ಕಾಲೇಜಿಗೆ ಬರಲು ಅವಕಾಶ ಕೊಟ್ಟಿರಲಿಲ್ಲವಂತೆ. ಅಷ್ಟೇ ಅಲ್ಲದೆ ಕಾಲೇಜು ಸಿಬ್ಬಂದಿ ಹಲ್ಲೆ ಮಾಡಿ ಬೈದು ಕಾಲೇಜಿನಿಂದ ಹೊರಹಾಕಿದ್ದಾಗಿ ಪೋಷಕರು ಆರೋಪಿಸಿದ್ದಾರೆ.
ಕುಂದಾಪುರ: 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ, ಕಾರಣ?
ಈ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಗೆ ದೂರು ನೀಡಿದರೂ ಪೊಲೀಸರು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. 15 ದಿನ ಬಿಟ್ಟು ಮತ್ತೆ ಬರೋದಾಗಿ ಪೊಲೀಸರು ಹೇಳಿದ್ದರು. ಆದ್ರೆ, ನಿಖಿಲ್ ಸುರೇಶ್ ನಿನ್ನೆ ರಾತ್ರಿ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಬನ್ನೇರುಘಟ್ಟದ ಎಎಮ್‌ಸಿ ಕಾಲೇಜಿನಲ್ಲಿ ಮೊದಲ ವರ್ಷದ ಹೋಟೇಲ್ ಮ್ಯಾನೇಜ್ ಮೆಂಟ್ ಕೋರ್ಸ್‌ಗೆ ಒಂದೂವರೆ ಲಕ್ಷ ಫೀಸ್ ಕೊಟ್ಟು ವ್ಯಾಸಂಗ ಮಾಡುತ್ತಿದ್ದ ನಿಖಿಲ್. ಸದ್ಯ ನಿಖಿಲ್ ಸುರೇಶ್ ಪೋಷಕರು ಕಾಲೇಜಿನ ಮುಂಭಾಗ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.