*  ಬೀದರ್‌ ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ನಡೆದ ಘಟನೆ*  ಹಳೆಯ ಕೇಸ್‌ನಿಂದ ಕಾಂಪ್ರಮೈಸ್ ಆಗೋದಿಲ್ಲ ಎಂದಿದ್ದಕ್ಕೆ ಹೊಡೆದಾಟ*  ಜೀವನ್ಮರಣದ ಮಧ್ಯೆ ಒದ್ದಾಡುತ್ತಿರುವ ಎರಡೂ ಕುಟುಂಬದ ಸದಸ್ಯರು 

ಬೀದರ್‌(ಮಾ.25): ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲೇ ಚಿಕಿತ್ಸೆಗೆ ಬಂದಿದ್ದ ಎರಡು ಗುಂಪುಗಳ ಮಧ್ಯ ಭೀಕರ ಮಾರಾಮಾರಿ ನಡೆದ ಘಟನೆ ನಗರದ ಬ್ರಿಮ್ಸ್(BRIMS) ಆಸ್ಪತ್ರೆಯಲ್ಲಿ ನಿನ್ನೆ(ಗುರುವಾರ) ನಡೆದಿದೆ. ಚಿಕಿತ್ಸೆಗೆ ಬಳಸುವ ಕಟರ್, ಕತ್ತರಿ, ಚಾಕು ವಾರ್ಡ್‌ನಲ್ಲಿದ್ದ ಟೆಬಲ್, ಚೇರ್‌ನಿಂದ ಮಾರಣಾಂತಿಕವಾಗಿ ಎರಡೂ ಕಡೆಯವರು ಹೊಡೆದಾಟ ಮಾಡಿಕೊಂಡಿದ್ದನ್ನ ಕಂಡು ಆಸ್ಪತ್ರೆಯಲ್ಲಿದ್ದ ರೋಗಿಗಳು, ಡಾಕ್ಟರ್, ನರ್ಸ್‌ಗಳು, ಸೆಕ್ಯೂರಿಟಿ ಗಾರ್ಡ್‌ಗಳು ಬೆಚ್ಚಿ ಬಿದಿದ್ದರು. 

ಹೀಗೆ ಆಸ್ಪತ್ರೆಯ(Hospital) ಎಮರ್ಜೆನ್ಸಿ ವಾರ್ಡ್‌ನಲ್ಲಿ(Emergency Ward) ಕೈಗೆ ಸಿಕ್ಕಿದ್ದನ್ನ ತೆಗೆದುಕೊಂಡು ನಾ ಹೊಡಿ ನಿ ಹೊಡಿ ಎಂದು ಮಾರಣಾಂತಿಕವಾಗಿ ಹೊಡೆದಾಡಿಕೊಳ್ಳುತ್ತಿರುವ ದೃಶ್ಯಗಳು ಯಾವುದೋ ಪಿಕ್ಚರ್‌ ಸೀನ್‌ಗಳಲ್ಲ. ಬೀದರ್(Bidar) ಬ್ರಿಮ್ಸ್‌ನಲ್ಲಿ ಮಧ್ಯಾಹ್ನ ಏಕಾಏಕಿ ಚಿಕಿತ್ಸೆ(Treatment) ತೆಗೆದುಕೊಳ್ಳುತ್ತಿದ್ದದವರ ಮೇಲೆ ಚಿಕಿತ್ಸೆ ಪಡೆಯಲು ಬಂದ ವ್ಯಕ್ತಿ ಮಧ್ಯ ನಡೆದ ಘನಘೋರ ಕಾಳಗ ಘಟನೆಯಲ್ಲಿ ಫಿರೋಜ್ ಎಂಬಾತನಿಗೆ ಸಣ್ಣ ಪುಟ ಗಾಯಗಳಾಗಿವೆ. ಆದರೆ ಫಿರೋಜ್ ಇಬ್ಬರು ಪುತ್ರರ ಸ್ಥಿತಿ ಗಂಭೀರವಾಗಿದೆ. ಹಲ್ಲೆಗೆ ಬಂದಿದ್ದಾನೆ ಎನ್ನಲಾದ ರೌಫ್ ಎಂಬಾತನಿಗೂ ಗಂಭೀರ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗೆಂದು ಹೈದರಾಬಾದ್‌ನ(Hyderabad) ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಆಸ್ಪತ್ರೆಗೆ ತೆರಳುವ ಮುನ್ನ ರೌಫ್ ಮಾತನಾಡುತ್ತಾ ನನಗೆ ಏನಾದರೂ ಆದರೆ ಅದಕ್ಕೆ ಫಿರೋಜ್ ಮತ್ತು ಮಕ್ಕಳೇ ಕಾರಣ ಎಂದು ಹೇಳಿಕೆ ನೀಡಿದ್ದಾರೆ. 
ರೌಫ್, ಗಲಾಟೆಯಲ್ಲಿ ಗಂಭೀರ ಗಾಯಕ್ಕೊಳಗಾದವರು.

Bengaluru: ಮನೆಯಲ್ಲಿ ಯಾರೂ ಇಲ್ಲದಾಗ ಮಹಿಳಾ ಟೆಕ್ಕಿ ಆತ್ಮಹತ್ಯೆ: ಕಾರಣ ನಿಗೂಢ..?

ಒಂದು ವರ್ಷದ ಹಿಂದೆ ಹಣಕಾಸು, ಆಸ್ತಿ ವಿಚಾರ(Land Dispute) ಸಂಬಂಧಪಟ್ಟಂತೆ ಫಿರೋಜ್‌ನ ಮಕ್ಕಳು ಮತ್ತು ರೌಫ್ ಮತ್ತು ಸಂಗಡಿಗರ ನಡುವೆ ಜಗಳವಾಗಿತ್ತು. ಅಂದು ಇಬ್ಬರು ಮೇಲೂ ಪರಸ್ಪರ ಕೇಸ್‌ಗಳು ದಾಖಲಾಗಿತ್ತು. ಇಂದು ಅದರ ವಿಚಾರಣೆಗೆಂದು ಕೋರ್ಟ್‌ನಲ್ಲಿ ಇಬ್ಬರು ಹಾಜರಾಗಿದ್ದಾಗ ರೌಫ್ ಕಾಂಪ್ರಮೈಸ್ ಮಾಡಿಕೊಳ್ಳಲು ಮನವಿ ಮಾಡಿಕೊಳ್ಳುತ್ತಾನೆ ಈ ವೇಳೆ ಫಿರೋಜ್ ಯಾವುದೇ ಕಾರಣಕ್ಕೂ ಕಾಂಪ್ರಮೈಸ್ ಆಗೋದಿಲ್ಲ ಎಂದು ಹೇಳಿಕೆ ನೀಡಿ ಬರುತ್ತಾರೆ. ಫಿರೋಜ್‌ನ ಮಕ್ಕಳಿಬ್ಬರೂ ಕೋರ್ಟ್ ವಿಚಾರಣೆ ಮುಗಿಸಿ ಮನೆ ಕಡೆಗೆ ಬರುವಾಗ ರೌಫ್ ಮತ್ತು ಫಿರೋಜ್ ಮಕ್ಕಳ ಮುಖಾಮುಖಿಯಾಗುತ್ತಾರೆ. ಅಲ್ಲಿ ಮತ್ತೆ ಮಾತಿಗೆ ಮಾತು ಬೆಳೆದು ಜಗಳ ಆಗುತ್ತದೆ. ಬಳಿಕ ಇಬ್ಬರು ಕಡೆಯವರು ಆಸ್ಪತ್ರೆಯಲ್ಲೂ ಆಗಮಿಸಿದ್ದಾಗ ವಾರ್ಡ್‌ನಲ್ಲೇ ಭೀಕರ ಯುದ್ಧ ನಡೆದಿದೆ. 

ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಬೀದರ್ ಎಸ್ಪಿ ಡೆಕ್ಕಾ ಕಿಶೋರ್ ಬಾಬು ಅವರು, ಇದು ಅವರ ಹಳೆಯ ವೈಷಮ್ಯಕ್ಕೆ ನಡೆದ ಜಗಳವಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತೇವೆ ಅಂತ ತಿಳಿಸಿದ್ದಾರೆ.

House Theft: ಚಪ್ಪಲಿ ಸ್ಟ್ಯಾಂಡಲ್ಲಿ ಕೀ ಇಡೋರ ಮನೆಗೆ ಕನ್ನ ಹಾಕ್ತಿದ್ದ ಖತರ್ನಾಕ್‌ ಕಳ್ಳಿ ಅರೆಸ್ಟ್‌..!

ಒಟ್ಟಿನಲ್ಲಿ ಕೆಲ ವರ್ಷಗಳ ಹಿಂದೆ ಹಣ ಮತ್ತು ಆಸ್ತಿ ವಿಚಾರಕ್ಕೆ ಶುರುವಾದ ಜಗಳ ಈಗ ಜೀವ ತೆಗೆಯುವಂತ ಮಟ್ಟಕ್ಕೆ ತಲುಪಿದೆ. ಎರಡೂ ಕುಟುಂಬಗಳೂ ಜೀವನ್ಮರಣದ ಮಧ್ಯೆ ಒದ್ದಾಡುತ್ತಿದ್ದಾರೆ. 

ಚಿನ್ನ ದೋಚಿದ್ದವರ ಸುಳಿವು ನೀಡಿದ ವಿಸಿಟಿಂಗ್‌ ಕಾರ್ಡ್‌!

ಬೆಂಗಳೂರು: ಇತ್ತೀಚೆಗೆ ಯಶವಂತಪುರ ಸಮೀಪ ಚಿನ್ನದ ವ್ಯಾಪಾರಿಯೊಬ್ಬರ(Gold Merchant) ಮನೆಗೆ ನುಗ್ಗಿ ಏರ್‌ಗನ್‌ ತೋರಿಸಿ ಬೆದರಿಕೆ ಹಾಕಿ ಆಭರಣ ದೋಚಿದ್ದ ಮೂವರು ಕಿಡಿಗೇಡಿಗಳು, ಕೃತ್ಯ ಎಸಗಿ ಪರಾರಿಯಾಗುವ ವೇಳೆ ತಾವು ಬೀಳಿಸಿಕೊಂಡು ಹೋಗಿದ್ದ ‘ಚೀಟಿ’ಯಿಂದ ಪೊಲೀಸರ(Police) ಬಲೆಗೆ ಬಿದ್ದಿರುವ ಕುತೂಹಲಕಾರಿ ಪ್ರಕರಣ ಇದಾಗಿದೆ.

ರಾಜಸ್ಥಾನ(Rajasthan) ರಾಜ್ಯದ ಜಲೂರು ಜಿಲ್ಲೆಯ ಮನೋಹರ್‌ ಸಿಂಗ್‌, ಆತನ ಸಹಚರರಾದ ರಮೇಶ್‌ ಹಾಗೂ ಅಮಿತ್‌ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) ನಕಲಿ ಪಿಸ್ತೂಲ್‌ ಹಾಗೂ ಆಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಯಶವಂತಪುರ ಮೊದಲ ರಸ್ತೆಯ ನಿವಾಸಿ ಕಮಲ್‌ ಸಿಂಗ್‌ ಮನೆಗೆ ನುಗ್ಗಿ ದರೋಡೆ ಎಸಗಿ ಪರಾರಿಯಾಗಿದ್ದರು. ಮರು ದಿನ ಆ ಮನೆಯಲ್ಲಿ ಪತ್ತೆಯಾದ ಹಾರ್ಡ್‌ವೇರ್‌ ಅಂಗಡಿಯೊಂದರ ವಿಳಾಸವಿದ್ದ ಚೀಟಿ ಆಧರಿಸಿ ಕಾರ್ಯಾಚರಣೆಗಿಳಿದ ಯಶವಂತಪುರ ಠಾಣೆ ಇನ್‌ಸ್ಪೆಕ್ಟರ್‌ ಕೆ.ಸುರೇಶ್‌ ನೇತೃತ್ವದ ತಂಡವು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ತಪ್ಪಿಸಿಕೊಂಡಿರುವ ಮತ್ತೊಬ್ಬ ಆರೋಪಿ ಗಜೇಂದ್ರ ಸಿಂಗ್‌ ಪತ್ತೆಗೆ ತನಿಖೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.