ಚಿತ್ರದುರ್ಗ(ಮೇ 18)  ಚಿತ್ರದುರ್ಗ ನಗರಸಭೆಯ SDC ಶಶಿಕುಮಾರ್ ವಿಡಿಯೋ ಮಾಡಿ ನಂತರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ನಗರಸಭೆಯ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿ ಘಟನೆ ನಡೆದಿದೆ.

ನಗರಸಭೆಯ ಮ್ಯಾನೇಜರ್, ಕಮೀಷನರ್ ವಿರುದ್ಧ ವಿಡಿಯೋದಲ್ಲಿ ಆರೋಪ ಮಾಡಿದ್ದಾರೆ. ಲಾಕ್ ಡೌನ್ ವೇಳೆ ಕೆಲಸಕ್ಕೆ  ಬಾರದಿದ್ದಕ್ಕೆ ಗೈರು ಹಾಕದ್ದಾರೆ.  ಸಂಬಳ ಕಡಿತ ಮಾಡಿ  ಜನರೆದುರು ನಿಂದಿಸಿ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನೇಣು ಹಾಕಿಕೊಂಡ ನಟನಿಗೆ ಕೊರೋನಾ ಇದೆಯೆಂದು ನೆರವಿಗೆ ಬಾರದ ಪಕ್ಕದ ಮನೆಯವರು

ಹಾಜರಿ‌ ತಿದ್ದುಪಡಿ ಮಾಡಿ ಅಮಾನತ್ತುಗೊಳಿಸುವ ಬೆದರಿಕೆವೊಡ್ಡಿದ್ದಾರೆ ಎಂದಿರುವ ಶಶಿನೆಯವರುಕುಮಾರ್ ಅಮ್ಮ, ದೊಡ್ಡಮ್ಮ, ಚಿಕ್ಕಮ್ಮ,‌ ಅಣ್ಣ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.  ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ವಿಡಿಯೋ ಇದಾಗಿದೆ.

ಅಸ್ವಸ್ಥಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಿಲ್ಲ.  ಚಿತ್ರದುರ್ಗ ನಗರ ಠಾಣೆ ವ್ಯಾಪ್ತಿಯಲ್ಲಿ‌ ನಡೆದ ಪ್ರಕರಣ ದಾಖಲಾಗಿದೆ.