ಚಿತ್ರದುರ್ಗ  (ನ. 08)  ಇದೊಂದು ವಿಚಿತ್ರ ಪ್ರಕರಣ. ಚಳ್ಳಕೆರೆಯ  54   ವರ್ಷದ ವ್ಯಕ್ತಿ 120 ಮಹಿಳೆಯರು ಸೇರಿದಂತೆ ಇನ್ನೂರಕ್ಕೂ ಅಧಿಕ ಜನರಿಗೆ ಬೆತ್ತಲೆ ಪೋಟೋ ಕಳಿಸಿದ್ದಾನೆ

ಆರು ತಿಂಗಳ ಅವಧಿಯಲ್ಲಿ ಈ ಪುಣ್ಯಾತ್ಮ ನಿರಂತರವಾಗಿ ಈ ಕೆಲಸ ಮಾಡಿದ್ದಾನೆ.  ಆರೋಫಪಿ ಒ ರಾಮಕೃಷ್ಣ  ಎಂಬಾತನ ಬಂಧನ ಮಾಡಲಾಗಿದೆ. 

ವೆಬ್ ಸೀರಿಸ್‌ಗೆಂದು ಬೆತ್ತಲೆ ಪೋಟೋ ಶೂಟ್ ಮಾಡಿಸಿದರು!

ಚಳ್ಳಕೆರೆ ಭಾಗದ ನಿವಾಸಿಗಳು  ಗೊತ್ತಿಲ್ಲದ ನಂಬರ್ ನಿಂದ ಅಶ್ಲೀಲ ಚಿತ್ರಗಳೂ ಬರುತ್ತಿವೆ ಎಂದು ಆರೋಪಿಸಿದ್ದರು.  ಇದಾದ ಮೇಲೆ ಪೊಲೀಸರು ತನಿಖೆ ಆರಂಭಿಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.

ಆರಂಭದಲ್ಲಿ, ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.   ಆದರೆ, ಶುಕ್ರವಾರ ಪೋನ್ ಆನ್ ಆಗಿದೆ. ಇದೆ ಮಾಹಿತಿ ಆಧರಿಸಿ ಆರೋಪಿಯನ್ನು ಬಲೆಗೆ ಕೆಡವಲಾಗಿದೆ. 

ಒಂದಷ್ಟು ನಂಬರ್ ಗಳನ್ನು ಡಯಲ್ ಮಾಡಿ ಅಶ್ಲೀಲ ಪೋಟೋ ಕಳಿಸುತ್ತಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಯಾವ ಕಾರಣಕ್ಕೆ ಹೀಗೆ ಮಾಡಿದ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.