ಮಗು ಅಪಹರಣ ಪ್ರಕರಣ ಭೇದಿಸಿದ ಮುನಿರಾಬಾದ್ ಪೊಲೀಸರು
ಸಮೀಪದ ಪುಣ್ಯಕ್ಷೇತ್ರ ಶ್ರೀಹುಲಿಗೆಮ್ಮ ದೇವಸ್ಥಾನದ ತಂಗುದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಗುವನ್ನು ಅಪಹರಿಸಿದ ಪ್ರಕರಣವನ್ನು ಪೊಲೀಸರು ವಾರದಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮುನಿರಾಬಾದ್ (ಜು.2) : ಸಮೀಪದ ಪುಣ್ಯಕ್ಷೇತ್ರ ಶ್ರೀಹುಲಿಗೆಮ್ಮ ದೇವಸ್ಥಾನದ ತಂಗುದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಮಗುವನ್ನು ಅಪಹರಿಸಿದ ಪ್ರಕರಣವನ್ನು ಪೊಲೀಸರು ವಾರದಲ್ಲಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜೂ.23ರಂದು ಬಾಲಕ ಸಂತೋಷ ತನ್ನ ತಾಯಿಯೊಂದಿಗೆ ಹುಲಿಯಮ್ಮ ದೇವಿ ದರ್ಶನಕ್ಕೆ ಬಂದು ತಂಗುದಾಣದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾಗ ಸಂತೋಷನನ್ನು ಅಪರಿಚಿತ ಮಹಿಳೆ ಅಪಹರಿಸಿಕೊಂಡುಹೋಗಿದ್ದಳು. ಈ ಕುರಿತು ಬಾಲಕನ ತಾಯಿ ಲಕ್ಷ್ಮೇ ಎಂಬವರು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೊಪ್ಪಳ ಎಸ್ಪಿ ಯಶೋದಾ ಒಂಟಗೋಡಿ ತಂಡ ರಚಿಸಿದರು. ಎಸ್ಪಿ ಯಶೋದಾ ಹಾಗೂ ಡಿಎಸ್‌ಪಿ ಶರಣಪ್ಪ ಸುಬೇದಾರ ಮಾರ್ಗದರ್ಶನದಲ್ಲಿ ಹಾಗೂ ಕೊಪ್ಪಳ ಗ್ರಾಮೀಣ ಸಿಪಿಐ ಮಾಂತೇಶ್ ಸಜ್ಜನ್ ನೇತೃತ್ವದಲ್ಲಿ ಮುನಿರಾಬಾದ್ ಪೊಲೀಸರು ಪ್ರಕರಣವನ್ನು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಕ್ತಿ ಯೋಜನೆ ಎಫೆಕ್ಟ್: ಹುಲಿಗಿ ದೇವಸ್ಥಾನದ ಹುಂಡಿಯಲ್ಲಿ ₹99.70 ಲಕ್ಷ ಕಾಣಿಕೆ ಸಂಗ್ರಹ!
ಅಪಹರಣಗೊಳಗಾದ ನಾಲ್ಕು ವರ್ಷದ ಮಗು ಸಂತೋಷನನ್ನು ತಾಯಿ ಮಡಲಿಗೆ ಒಪ್ಪಿಸಿದ್ದಾರೆ. ಮಗುವನ್ನು ಅಪಹರಣ ಮಾಡಿದ ಚಾಲಾಕಿ ಮಹಿಳೆ ಎಲ್ಲಮ್ಮನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.