Chikkamagaluru: ಊರಿನ ದೇವಸ್ಥಾನಕ್ಕೆ ಬಂದ ಎಂದು ದಲಿತ ಯುವಕನ ಮೇಲೆ ಹಲ್ಲೆ ಪ್ರಕರಣ: ನಾಲ್ವರು ವಶಕ್ಕೆ!

ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದ್ರು ಇನ್ನು ನಮ್ಮ ಸಮಾಜದಲ್ಲಿ ಬಾಲ್ಯ ವಿವಾಹ ಹಾಗೂ ಜಾತಿ ಪದ್ಧತಿ ನಿರ್ಮೂಲನೆ ಕಂಡಿಲ್ಲ. ಇದಕ್ಕೆ ಉತ್ತಮ ನಿರ್ದೇಶನ ಅಂದ್ರೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರು ಮರಡಿ ಗೊಲ್ಲರಹಟ್ಟಿ ಗ್ರಾಮವೇ ಸಾಕ್ಷಿ. 

chikkamagaluru dalit youth assault case four arrested gvd

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು (ಜ.05): ಸರ್ಕಾರ ಎಷ್ಟೇ ಜಾಗೃತಿ ಮೂಡಿಸಿದ್ರು ಇನ್ನು ನಮ್ಮ ಸಮಾಜದಲ್ಲಿ ಬಾಲ್ಯ ವಿವಾಹ ಹಾಗೂ ಜಾತಿ ಪದ್ಧತಿ ನಿರ್ಮೂಲನೆ ಕಂಡಿಲ್ಲ. ಇದಕ್ಕೆ ಉತ್ತಮ ನಿರ್ದೇಶನ ಅಂದ್ರೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಗೇರು ಮರಡಿ ಗೊಲ್ಲರಹಟ್ಟಿ ಗ್ರಾಮವೇ ಸಾಕ್ಷಿ. ಹೌದು ಜನವರಿ ಒಂದರಂದು ಗ್ರಾಮಕ್ಕೆ ಜೆಸಿಬಿ ಕೆಲಸದ ನಿಮಿತ್ತ ಬಂದಿದ್ದ ದಲಿತ ಯುವಕ ಕೆಲಸ ಮಾಡುವಾಗ ಕೇಬಲ್ ಕಟ್ಟಾಗಿದ್ದಕ್ಕೆ ಗ್ರಾಮದ ಹಲವರು ಯುವಕನಿಗೆ ಥಳಿಸಿ ಆತನ ಬಳಿ ಇದ್ದ 20,000 ಹಣವನ್ನು ದಂಡವಾಗಿ ಕಟ್ಟಿಸಿಕೊಂಡಿದ್ದರು. ಇದನ್ನು ಖಂಡಿಸಿ ದಲಿತ ಸಂಘಟನೆಗಳು ಗ್ರಾಮಕ್ಕೆ ಪ್ರವೇಶ ಮಾಡಿ ಪ್ರತಿಭಟನೆ ಮಾಡಿದ್ರು. 

ವಿಶೇಷ ಸಂದರ್ಭದಲ್ಲಿ ಮಾತ್ರ ಬಾಗಿಲು ತೆರೆಯುವ ದೇವಸ್ಥಾನಕ್ಕೆ ಬೀಗ: ಜಾತ್ರೆ, ಅಮಾವಾಸ್ಯೆ, ಹುಣ್ಣಿಮೆ, ಏಕಾದಶಿ, ಹಬ್ಬಗಳಲ್ಲಿ ಮಾತ್ರ ಗೊಲ್ಲರಹಟ್ಟಿಯ ದೇವಸ್ಥಾನವನ್ನು ಬಾಗಿಲು ಓಪನ್ ಮಾಡಿ  ಪೂಜೆ ಮಾಡುವ ಪದ್ದತಿ ಇದೆ. ಇದೀಗ ಗ್ರಾಮ ಅಪವಿತ್ರ ಆಯ್ತು ಅಂತ ಭಾವಿಸಿರೋ ಗೊಲ್ಲರಹಟ್ಟಿ ಕೆಲ ಗ್ರಾಮಸ್ಥರು ದೇವಾಲಯಕ್ಕೆ ಬೀಗ ಹಾಕಿದ್ದಾರೆ.ಗ್ರಾಮದಲ್ಲಿ ಉಂಟಾದ ಪ್ರತಿಭಟನೆ, ಗಲಾಟೆ ವಿಚಾರವಾಗಿ ಪೊಲೀಸ್ ಇಲಾಖೆ ಮುಂಜ್ರಾಗತ ಕ್ರಮವಾಗಿ ಸ್ಥಳದಲ್ಲಿ ಓರ್ವ ಪೊಲೀಸನ್ನು ನಿಯೋಜನೆ ಮಾಡಿದೆ. 

ಹಲ್ಲೆ ಸಂಬಂಧ ನಾಲ್ವರನ್ನ ಬಂಧಿಸಿರುವ ಪೊಲೀಸರು: ಇನ್ನು ಈ ಪ್ರಕರಣ ತರೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದಂತೆ ತನಿಖೆ ಕೈಗೆತ್ತಿಕೊಂಡಿರೋ ಪೊಲೀಸರು ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳಿಗಾಗಿ ಬಲೇ ಬಿಸಿ ಇರೋ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇನ್ನು ಹನ್ನೊಂದು ಆರೋಪಿಗಳು ತಲೆಮರೆಸಿಕೊಂಡಿದ್ದು ಬಂಧನಕ್ಕಾಗಿ ಬಿ ವೈ ಎಸ್ ಪಿ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದೆ. 

ಕೊಡಗಿನಲ್ಲಿ 2 ದಿನಗಳಿಂದ ಅಕಾಲಿಕ ಮಳೆ: ಕಾಫಿ, ಭತ್ತ ಸೇರಿದಂತೆ ವಿವಿಧ ಬೆಳೆಗಳು ಹಾಳು, ಸಂಕಷ್ಟದಲ್ಲಿ ರೈತರು!

ದಲಿತ ಸಂಘಟನೆಗಳು ಗ್ರಾಮಕ್ಕೆ ಪ್ರವೇಶ ಮಾಡಿದ ಬಳಿಕ ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಜಾತಿ ನಿರ್ಮೂಲನೆ ಬಗ್ಗೆ ಗ್ರಾಮಸ್ಥರಿಗೆ ತಿಳುವಳಿಕೆ ಹೇಳಿದ್ದರು. ಆದರೆ ಇದನ್ನು  ಯಾವುದನ್ನು ನಂಬದ ಗೊಲ್ಲರಹಟ್ಟಿ ಗ್ರಾಮಸ್ಥರು ಇನ್ನು ಕೂಡ ಅದೇ ನಂಬಿಕೆಯಲ್ಲೇ ಇದ್ದಾರೆ,. ಒಟ್ಟಾರೆ ಸರ್ಕಾರಗಳು ಹಾಗೂ ಅಧಿಕಾರಿಗಳ ಜನ ಜಾಗೃತಿಯ ನಡುವೆಯೂ ಅಸ್ಪೃಶ್ಯತೆ ತಾಂಡವವಾಡುತ್ತಿದ್ದು, ಜಾತಿ ಪದ್ಧತಿ ಬೇರು ಮಟ್ಟದಿಂದ ನಿರ್ಮೂಲನೆ ಆಗಬೇಕಿದೆ. ನಾವು ನಮ್ಮವರು ಎಂದಾಗಲೇ ಸಮಾಜ ಪರಿಪೂರ್ಣ ಅನ್ನೋ ಅಂಶ ಪ್ರತಿಯೊಬ್ಬರು ಅರಿಯಬೇಕಿದೆ.

Latest Videos
Follow Us:
Download App:
  • android
  • ios