ಕೌಟುಂಬಿಕ ಕಲಹಕ್ಕೆ ಬೇಸತ್ತು ನೇಣಿಗೆ ಶರಣಾದ ನವ ವಿವಾಹಿತೆ

ಚಿಕ್ಕಬಳ್ಳಾಪುರ ನಗರದಲ್ಲಿ ಇತ್ತೀಚೆಗೆ ಮದುವೆಯಾಗಿದ್ದ ನವವಿವಾಹಿತೆ ಗೃಹಿಣಿ ಕೌಟುಂಬಿಕ ಕಲಹದಿಂದ ಬೇಸತ್ತು ನೇಣಿಗೆ ಶರಣಾಗಿದ್ದಾಳೆ.

Chikkaballapura newly married woman surrendered to hanging fed up with family strife sat

ಚಿಕ್ಕಬಳ್ಳಾಪುರ (ಜೂ.23): ಸಂಸಾರವೆಂದರೆ ಗಂಡ ಹೆಂಡತಿಯ ನಡುವೆ ಜಗಳ ಬರುವುದು ಸಾಮಾನ್ಯ. ಆಗ ಇಬ್ಬರಲ್ಲಿ ಒಬ್ಬರು ಸೋತು ಅನುಸರಿಸಿಕೊಂಡು ಹೋಗಬೇಕು. ಆದರೆ, ಚಿಕ್ಕಬಳ್ಳಾಪುರದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತಿದ್ದ ಗೃಹಿಣಿ ನೇಣಿಗೆ ಶರಣಾಗಿದ್ದಾಳೆ.

ಚಿಕ್ಕಬಳ್ಳಾಪುರ ನಗರದ ಕಾಟನ್‌ಪೇಟೆಯಲ್ಲಿ ಘಟನೆ ನಡೆದಿದ್ದು, ನೇಣಿಗೆ ಶರಣಾದ ಗೃಹಿಣಿಯನ್ನು ತೇಜಸ್ವಿನಿ (26) ಎಂದು ಗುರುತಿಸಲಾಗಿದೆ. ಇದರಿಂದ ಸ್ಥಳದಲ್ಲಿ  ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ವರದಕ್ಷಿಣೆ ಕಿರುಕುಳ ನೀಡಿ ಸಾಯಿಸಿದ್ದಾರೆಂದು ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ನಗರದ ಕಾಟನ್‌ಪೇಟೆ ರಸ್ತೆಯ‌ ಲೋಹಿತ್ ಗೌಡ ಅವರಿಗೆ ತೇಜಸ್ವಿನಿಯನ್ನು ಮದುವೆ ಮಾಡಿಕೊಡಲಾಗಿತ್ತು. ಆದರೆ, ಗಂಡನ ಕಿರುಕುಳದ ಬಗ್ಗೆ ಆಗಾಗ್ಗೆ ತವರು ಮನೆಯವರೊಂದಿಗೆ ಹೇಳಿಕೊಳ್ಳುತ್ತಿದ್ದ ತೇಜಸ್ವಿನಿ ಈಗ ಎಲ್ಲರನ್ನೂ ಬಿಟ್ಟು ಸಾವಿಗೆ ಶರಣಾಗಿದ್ದಾರೆ.

FRAUD: ಹಣ ಡಬ್ಲಿಂಗ್‌ ಕಂಪನಿಗೆ ಲಕ್ಷಾಂತರ ಹೂಡಿಕೆ: ಮೋಸಕ್ಕೊಳಗಾದ ಶಿಕ್ಷಕ ಆತ್ಮಹತ್ಯೆ

ಆಸ್ತಿ ವಿವಾದಕ್ಕೆ ಕುಟುಂಬದ ಮೂವರು ನೇಣಿಗೆ ಶರಣು: ಚಾಮರಾಜನಗರ (ಜೂ.23) - ಆಸ್ತಿ ವಿವಾದಕ್ಕೆ ಮನನೊಂದು ಡೆತ್ ನೋಟ್ ಬರೆದು ಕುಟುಂಬವೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸದ್ಯ ತಾತನ ಮನೆಯಲ್ಲಿ ಉಳಿದಿದ್ದ ಮತ್ತೊಬ್ಬ ಪುತ್ರಿ ಬಚಾವ್ ಆಗಿದ್ದಾಳೆ. ದಂಪತಿ- ಮಗಳು ಸೇರಿ ಮೂವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ತಾಲೂಕಿನ ಬೇಡರಪುರ ಗ್ರಾಮದಲ್ಲಿ ನಡೆದಿದೆ. ಗಂಡ-ಹೆಂಡತಿ ಹಾಗೂ ಮಗಳು ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ಮಹಾದೇವಸ್ವಾಮಿ(42), ಪತ್ನಿ ಸವಿತಾ(33) ಹಾಗೂ ಮಗಳು ಸಿಂಚನಾ(15) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಗಳು.

ಅಜ್ಜಿ ಮನೆಯಲ್ಲಿದ್ದ ಮಗಳು ಬಚಾವ್:  ಬೆಳಗ್ಗೆ ಈ ದುರ್ಘಟನೆ ನಡೆದಿದ್ದು ಡೆತ್ ನೋಟ್ ಬರೆದಿಟ್ಟಿದ್ದು ಮೃತನ ಅಕ್ಕ-ತಂಗಿಯರ ಹೆಸರು ಬರೆದಿದ್ದು ಇವರಿಗೆಲ್ಲಾ ಶಿಕ್ಷೆ ಆಗಬೇಕೆಂದು ಕೋರಿಕೊಂಡಿದ್ದಾರೆ. ಇನ್ನೂ ಮಹದೇವಸ್ವಾಮಿ ಮೂಲತಃ ಕೃಷಿಕರಾಗಿದ್ದು 10 ಎಕರೆಗೂ ಕೂಡ ಜಮೀನಿತ್ತು. ಸವಿತಾ ಟೈಲರಿಂಗ್ ಮಾಡುತ್ತಿದ್ದರಂತೆ, ಇವರಿಗೆ ಇಬ್ಬರು ಪುತ್ರಿಯರಿದ್ದು ಓರ್ವ ಪುತ್ರಿ ಕಾಲೇಜು ವ್ಯಾಸಂಗ ಮಾಡುತ್ತಿದ್ದು ತಾತನ ಮನೆಯಲ್ಲಿದ್ದಾಳೆ. ಕಿರಿಯ ಮಗಳು ಸಿಂಚನಾ 9 ನೇ ತರಗತಿ ಓದುತ್ತಿದ್ದು ಅಪ್ಪ-ಅಮ್ಮನ ಜೊತೆ ಇದ್ದಳು. 

Bengaluru: ಲಿಫ್ಟ್‌ನಲ್ಲಿ 10 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಫುಡ್‌ ಡೆಲಿವರಿ ಬಾಯ್

ಶಾಸಕ ಪುಟ್ಟರಂಗಶೆಟ್ಟಿ ಭೇಟಿ: ಸದ್ಯ,ಮೂವರು ಸಾವಿಗೆ ಶರಣಾಗಿದ್ದು ಗ್ರಾಮ ಬೆಚ್ಚಿ ಬಿದ್ದಿದೆ, ಹೃದಯ ವಿದ್ರಾವಕ ದೃಶ್ಯ ಕಂಡು ಮಮ್ಮುಲ ಮರುಗುತ್ತಿದ್ದಾರೆ. ಮೇಲ್ನೋಟಕ್ಕೆ ಹೆಂಡತಿ, ಮಗಳು ಮೊದಲು ಸಾವಿಗೆ ಶರಣಾಗಿದ್ದು ಅದಾದ ಬಳಿಕ ಮಾಹದೇವಸ್ವಾಮಿ ನೇಣಿಗೆ ಕೊರಳೊಡ್ಡಿದ್ದಾನೆ. ಆಸ್ತಿ ವಿಚಾರದಿಂದ ಸಾವು ಸಂಭವಿಸಿದೆ. ಒಟ್ನಲ್ಲಿ ಆಸ್ತಿ ವಿವಾದ ಇದೀಗ ಇಡೀ ಕುಟುಂಬವನ್ನು ಬಲಿ ಪಡೆದಿದೆ. ಸ್ಥಳಕ್ಕೆ ಪೊಲೀಸರು, ಸ್ಥಳೀಯ ಶಾಸಕ ಪುಟ್ಟರಂಗಶೆಟ್ಟಿ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ. ಡೆತ್ ನೋಟ್ ಹಾಗೂ ಸ್ಥಳ ಮಹಜರು ನಡೆಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ.

Latest Videos
Follow Us:
Download App:
  • android
  • ios