ಚೆನ್ನೈ( ಫೆ.  20)   ಈತ ಅಂತಿಂಥ ಕ್ರೂರಿ ವೈದ್ಯನಲ್ಲ.  ಪತ್ನಿಯನ್ನು ಗಂಟಲು ಸೀಳಿ ಆಕೆಯ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿದ್ದಾನೆ. ಕೀರ್ತನಾ(28)  ಗಂಡನಿಂದಲೇ ಹತ್ಯೆಯಾಗಿದ್ದಾಳೆ.  ಆರೋಪಿ ವೈದ್ಯ ಪತ್ನಿ ಹತ್ಯೆ ಮಾಡಿ ಮಾವನ ಕೊಲೆಗೂ ಯತ್ನಿಸಿದ್ದಾನೆ. ಅಲ್ಲಿಂದ ಪರಾರಿಯಾಗಬೇಕಿದ್ದರೆ ದುಷ್ಟ ವೈದ್ಯನ  ಕಾರು ಅಪಘಾತಕ್ಕೆ  ಗುರಿಯಾಗಿದೆ.

ಕೀರ್ತನಾ ಕಾಂಚಿಪುರಂನ ಆಸ್ಪತ್ರೆಯೊಂದರಲ್ಲಿ ಎಚ್‌ಆರ್ ಆಗಿ ಕೆಲಸ ಮಾಡುತ್ತಿದ್ದರು.  ಲಾಕ್ ಡೌನ್  ಬಳಿಕ ವೈದ್ಯ ಪತಿ ಕೆಲಸಕ್ಕೆ ಹೋಗುವುದನ್ನು  ನಿಲ್ಲಿಸಿದ್ದ.  ಕೀರ್ತನಾ ಹಿರಿಯಕ್ಕ ಮತ್ತು ವೈದ್ಯನ ಅಣ್ಣ ಮದುವೆಯಾಗಿದ್ದರು. ಇದೇ ಮದುವೆಯಲ್ಲಿ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. 

ಸೈನಿಕನ ಹೆಂಡತಿ...ಅಕ್ರಮ ಸಂಬಂಧದ ಬೆಳಗಾವಿ ದುರಂತ ಕತೆ

ಮದುವೆ ಬಳಿಕ ಸಂಸಾರ ಆನಂದ ನಗರದಲ್ಲಿ ವಾಸವಿತ್ತು. ಅಕ್ಕಪಕ್ಕದವರು ಹೇಳುವಂತೆ ದಂಪತಿ ಮಧ್ಯೆ ಪ್ರತಿದಿನ ಜಗಳ ನಡೆಯುತ್ತಿತ್ತು.  ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ಇಬ್ಬರು ಒಂದೇ ಮನೆಯಲ್ಲಿ ಉಳಿದುಕೊಂಡಿದ್ದರು.

ಶುಕ್ರವಾರ ಇಬ್ಬರ ನಡುವೆ ಮತ್ತೆ ಜಗಳ ಆರಂಭವಾಗಿದೆ. ಸಿಟ್ಟಿಗೆದ್ದ ವೈದ್ಯ ಹೆಂಡತಿಯ ಕತ್ತು ಸೀಳಿದ್ದಾನೆ . ಈ ವೇಳೆ ತಡೆಯಲು ಬಂದ ಕೀರ್ತನಾರ ತಂದೆ ಮೇಲೆಯೂ ದಾಳಿ ಮಾಡಿದ್ದಾನೆ.  ನಂತರ  ಕಾರಿನಲ್ಲಿ ಪರಾರಿಯಾಗಲು ಯತ್ನ ಮಾಡಿದ್ದು ಹೆದ್ದಾರಿಯಲ್ಲಿ ಪೊಲೀಸರು ತಡೆಯಲು ಮುಂದಾದಾಗ ಅಪಘಾತ ಮಾಡಿಕೊಂಡಿದ್ದಾನೆ. ಗಂಭೀರ ಗಾಯಗೊಂಡ ವೈದ್ಯನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.