ಚನ್ನಗಿರಿಯಲ್ಲಿ ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ವೈದ್ಯಕೀಯ ಅಂಗಡಿ ಮಾಲೀಕನನ್ನು ಬಂಧಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಈ ಘಟನೆ ದಾಖಲಾಗಿದ್ದು, ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ದಾವಣಗೆರೆ (ಜ.31): ಶಾಲಾ ಬಾಲಕಿ ಮೇಲೆ ಚನ್ನಗಿರಿಯ ಮೆಡಿಕಲ್ ಸ್ಟೋರ ಮಾಲೀಕ ಅತ್ಯಾಚಾರ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ಅಮ್ಜಾದ್ ಬಂಧಿತ ಆರೋಪಿ. ಎ ಎಸ್ ಐ ಶಶಿಧರ್ ಚನ್ನಗಿರಿ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇಲೆ ಆರೋಪಿ ವಿರುದ್ಧ ಕಲಂ ನಂಬರ್ 67, 67(ಎ), 67(ಬಿ) ಐಟಿ ಆಕ್ಟ್ ಮತ್ತು ಕಲಂ 77, 294, 64 BNS ACT -2023 ಹಾಗೂ ಕಲಂ 4, 6, 14, 15 ಪೋಕ್ಸೋ ಆಕ್ಟ್ 2012 ರೀತ್ಯಾ ಪ್ರಕರಣ ದಾಖಲಿಸಿ ಸಿಇಎನ್ ಪೊಲೀಸರು ನಿನ್ನೆ ಅಮ್ಜಾದ್ ಬಂಧನ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಕೂತು ದುಬೈನಲ್ಲಿದೀವಿ ಅಂತಾ ವಂಚಿಸ್ತಿದ್ದ ಖದೀಮರ ಬಂಧನ ಹೇಗೆ ವಂಚಿಸುತ್ತಿದ್ದರು ಗೊತ್ತಾ?
ಶಾಲಾ ವಿದ್ಯಾರ್ಥಿನಿಯರು, ಮಹಿಳೆಯರೇ ಟಾರ್ಗೆಟ್:
ಚನ್ನಗಿರಿಯ ದೇವರಾಜ್ ಅರಸ್ ಲೇಔಟ್‌ನಲ್ಲಿ ಅಮರ್ ಮೆಡಿಕಲ್ ಶಾಪ್ ಇಟ್ಟುಕೊಂಡಿರುವ ಆರೋಪಿ. ಔಷದಿಗಾಗಿ ಮೆಡಿಕಲ್‌ಗೆ ಬರುವ ಶಾಲಾ ಬಾಲಕಿಯರು, ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಕಾಮುಕ. ಹಲವು ಮಹಿಳೆಯರೊಂದಿಗೂ ರಾಸಲೀಲೆ ನಡೆಸಿ ಅದರ ವಿಡಿಯೋ ಮಾಡಿಕೊಟ್ಟಿರುವ ಕಾಮುಕ. ಇದೀಗ ಶಾಲಾ ಬಾಲಕಿಯೊಂದಿಗೆ ರಾಸಲೀಲೆ ನಡೆಸಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಪೋಕ್ಸೊ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಲ್ಲಿ ಆನ್‌ಲೈನ್ ವಂಚನೆ ಆಘಾತಕಾರಿ ಪ್ರಕರಣ; 1 ಅನ್ನು ಒತ್ತಿ 2 ಲಕ್ಷ ಕಳೆದುಕೊಂಡ ಮಹಿಳೆ!
ರಾಸಲೀಲೆ ವಿಡಿಯೋಗಳನ್ನ ಮೊಬೈಲ್, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿದಿರುವ ಸಾಧ್ಯತೆ. ಆರೋಪಿ ಮೊಬೈಲ್‌ನಲ್ಲಿ ಅನೇಕ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿರುವ ವಿಡಿಯೋಗಳಿವೆ ಎನ್ನಲಾಗಿದೆ. ಸದ್ಯ ನೊಂದವರ ಬಗ್ಗೆ ವಿಡಿಯೋ ಹರಡುವುದು ಅಪರಾಧವಾಗಿದ್ದು ವಿಡಿಯೋ ವೈರಲ್ ಆಗದಂತೆ ಪೊಲೀಸ್ ಸೂಚನೆ ನೀಡಿದ್ದಾರೆ.
