ಬೆಂಗಳೂರು, (ಮಾ. 01): ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರು [ಸಿಸಿಬಿ] ಬೆಂಗಳೂರಿಲ್ಲಿ ಸೆಕ್ಸ್ ರಾಕೆಟ್ ಭೇದಿಸಿದ್ದಾರೆ. ಬೆಂಗಳೂರಿನ HSR ಲೇಔಟ್‌ನ ಸ್ಪಾವೊಂದರ ಮೇಲೆ ಇಂದು [ಭಾನುವಾರ] ದಾಳಿ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿ, 6 ಮಂದಿ ಮಹಿಳೆಯರನ್ನು ರಕ್ಷಿಸಿದ್ದಾರೆ. 

ಪೀಟರ್ ಸುನವರ್ (34), ರಾಜ್‍ಕುಮಾರ್ (48) ಬಂಧಿತ ಆರೋಪಿಗಳು. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದು, ನಾಪತ್ತೆಯಾಗಿರುವ ಸ್ಪಾ ಮಾಲೀಕನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. 

ಚಿಕ್ಕಮಗಳೂರು: ಆಸ್ಪತ್ರೆಯಲ್ಲೇ ಬೆತ್ತಲಾಗಿ ಮಲಗಿದ ಸರ್ಕಾರಿ ಡಾಕ್ಟರ್!

ಮೇಲ್ನೋಟಕ್ಕೆ ಸ್ಪಾ, ಮಸಾಜ್ ನಡೆಸುವಂತೆ ನಾಟಕವಾಡುತ್ತಾ ಒಳಗೊಳಗೆ ವೇಶ್ಯಾವಾಟಿಕೆ ನಡೆಯುತ್ತಿತ್ತು. ಈ ವಿಷಯದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸ್ ದಾಳಿ ಮಾಡಿದ್ದಾರೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೊಂದೇ ಪ್ರಕರಣವಲ್ಲ. ಸ್ಪಾ, ಮಸಾಜ್ ಸೆಂಟರ್ ಬೋರ್ಡ್ ಹಾಕಿಕೊಂಡು ಒಳಗೆ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವುದು ಎಗ್ಗಿಲ್ಲದೇ ನಡೆಯುತ್ತಿವೆ.

ಇನ್ನು ದುರದೃಷ್ಟಕರ ಅಂದ್ರೆ ಕೆಲ ಕಡೆಗಳಲ್ಲಿ ಈ ರೀತಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಪೊಲೀಸರಿಗೆ ಗೊತ್ತಿದ್ದರೂ ಕಮಿಷನ್ ಪಡೆದು ಏನು ಗೊತ್ತಿಲ್ಲದಂತೆ ತೆಪ್ಪೆಗಿದ್ದಾರೆ.