Asianet Suvarna News Asianet Suvarna News

ಉಗ್ರರು ಸಿಕ್ಕ ಏರಿಯಾದಲ್ಲೇ 28 ಗನ್ ಪತ್ತೆ: ಎತ್ತಾ ಸಾಗುತ್ತಿದೆ ಬೆಂಗ್ಳೂರು..?

ಸಿಲಿಕಾನ್ ಸಿಟಿ ಬರುಬರುತ್ತಾ ಎತ್ತಾ ಸಾಗುತ್ತಿದೆ ಅನ್ನೋದೆ ಗೊತ್ತಾಗ್ತಿಲ್ಲ. ಗುರಪ್ಪನಪಾಳ್ಯ, ಸದ್ದಗುಂಟೆ ಪಾಳ್ಯ ಕೆಲ ದಿನಗಳಿಂದ ಟಾಕ್ ಆಫ್ ದಿ ಸಿಟಿ ಆಗಿ ಹೋಗಿವೆ. ಮೊನ್ನೆ ಮೊನ್ನೆಯಷ್ಟು ಶಂಕಿತ ಉಗ್ರರು ಇದೇ ಏರಿಯಾದಲ್ಲಿ ಸಿಕ್ಕಿಬಿದ್ದಿದ್ರು. ಇದೀಗ ಅದೇ ಏರಿಯಾದಲ್ಲಿ ನಡೆದ ಒಂದು ಘಟನೆ ಇಡೀ ರಾಜಧಾನಿಯನ್ನೇ ನಲುಗಿಸಿದೆ.

CCB arrets  2 persons for possessing dummy guns at bengaluru
Author
Bengaluru, First Published Feb 15, 2020, 9:35 PM IST
  • Facebook
  • Twitter
  • Whatsapp

ಬೆಂಗಳೂರು, [ಫೆ.15]: ಭಾರೀ ಸಂಖ್ಯೆಯಲ್ಲಿ ಸಂಗ್ರಹಿಸಲಾಗಿದ್ದ ಅತ್ಯಾಧುನಿಕ, ಅತ್ಯಂತ ಮಾರಕ ಶಸ್ತ್ರಾಸ್ತ್ರಗಳನ್ನು ಬೆಂಗಳೂರು ಪೊಲೀಸರು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. 

ನಗರದ ಸುದ್ದುಗುಂಟೆಪಾಳ್ಯದ ಮನೆಯೊಂದರಲ್ಲಿ ಸಂಗ್ರಹಿಸಿಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಜುನೈದ್, ಮಹಮ್ಮದ್ ತಬ್ರೇಜ್ ಅಹಮ್ಮದ್ ಎಂಬುವರನ್ನು ಬಂಧಿಸಲಾಗಿದೆ.

CCB ಯಿಂದ ಅರೆಸ್ಟ್ ಆಗಿದ್ದ ಉಗ್ರರು ಇಂದು NIA ವಶಕ್ಕೆ

ಒಂದಲ್ಲ ಎರಡಲ್ಲ ಬರೋಬ್ಬರಿ 28 ಗನ್ ಗಳು ಸಿಸಿಬಿ ಪೊಲೀಸರಿಗೆ ಸಿಕ್ಕಿವೆ. ಈ ಪೈಕಿ 11 ಪಿಸ್ತೂಲು, 7 ಸ್ಟನ್ ಗನ್ ಗಳಿದ್ದು, 303 ಮಾದರಿಯ 10 ರೈಫಲ್ , 76 ಡಮ್ಮಿ ಬುಲೆಟ್ ಗಳನ್ನು ವಶಕ್ಕೆ ಪಡೆಯಲಾಗಿದ್ದು, ಒಂದೊಂದು ಗನ್ 25ರಿಂದ 30 ಸಾವಿರ ರೂಪಾಯಿ ಬೆಲೆ ಬಾಳುತ್ತವೆ.  ವಶಕ್ಕೆ ಪಡೆದ ಗನ್ ಗಳ ಬೆಲೆ ಒಟ್ಟಾರೆ 8 ಲಕ್ಷದ 40 ಸಾವಿರ ರೂ. ಎಂದು ಅಂದಾಜಿಸಲಾಗಿದೆ.

ಇಷ್ಟು ದೊಡ್ಡ ಮಟ್ಟದ ಶಸ್ತ್ರಾಸ್ತ್ರಗಳು ಸಂಗ್ರಹಿಸಿರುವ ಹಿಂದೆ ಭಯೋತ್ಪಾದನಾ ಕೃತ್ಯ ನಡೆಸುವ ಉದ್ದೇಶ ಇರುವ ಶಂಕೆ ಇದ್ಯಾ ಎನ್ನುವ ಅನುಮಾಗಳ ಹುಟ್ಟಿಕೊಂಡಿದ್ದು, ಈ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Follow Us:
Download App:
  • android
  • ios