ತುಮಕೂರು, (ಜೂನ್.14): ತುಮಕೂರಿನ ಶಿರಾದ ಕೊರೋನಾ ಸೋಂಕಿತ  P-5813 ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಸೇವಾ ಸಿಂಧುನಲ್ಲಿ ನೋಂದಾಣಿ ಮಾಡಿಕೊಳ್ಳದೇ ಸರ್ಕಾರದ ನಿಯಮ ಮೀರಿ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಹಿಂದೂಪುರಕ್ಕೆ ಹೋಗಿ ವಾಪಸ್ ಆಗಿದ್ದಾರೆ.

ಸೋಂಕಿತ ವ್ಯಕ್ತಿ ಜೂನ್ 2ರಂದು ಹಿಂದೂಪುರಕ್ಕೆ ಹೋಗಿ ಹೆಂಡತಿ ಮತ್ತು ಮಕ್ಕಳನ್ನು ಕರೆದುಕೊಂಡು ವಾಪಸ್ ಶಿರಾಕ್ಕೆ ವಾಪಸ್‌ ಆಗಿದ್ದ.  ಬಳಿಕ ಆತನಿಗೆ ಕೊರೋನಾ ಲಕ್ಷಣಗಳು ಕಾಣಿಸಿಕೊಂಡಿದೆ. ಬಳಿಕ ಆತನನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೋನಾ ಇರುವುದು ದೃಢಪಟ್ಟಿದೆ.

ಡಾ. ಸುಧಾಕರ್ ಬಿಚ್ಚಿಟ್ಟ 'ಆಗಸ್ಟ್ ಸ್ಫೋಟ'ದ ರಹಸ್ಯ

ತದನಂತರ ಸೋಂಕಿತ ವ್ಯಕ್ತಿ, ತನ್ನ ಪತ್ನಿ, ಮಕ್ಕಳು ಸೇರಿ ಒಂದೇ ಕುಟುಂಬದ 6 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದೀಗ ಶಿರಾ ನಗರದ ಮೊಹಲ್ಲಾ ಏರಿಯಾವನ್ನು ಕಂಟೈನ್ಮೆಂಟ್ ಝೋನ್‌ಗಳೆಂದು ಘೋಷಣೆ ಮಾಡಲಾಗಿದೆ.

ಸೋಂಕಿತ P-5813 ಸರ್ಕಾರಿ ಆದೇಶ ಉಲ್ಲಂಘಿಸಿದಲ್ಲದೇ ಬೇರೊಬ್ಬರಿಗೂ ಸೋಂಕು ತಗಲಲು ಕಾರಣನಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಆತನ ಮೇಲೆ ಶಿರಾ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188,269 ಅಡಿಯಲ್ಲಿ ದೂರು ದಾಖಲಾಗಿದೆ.