Asianet Suvarna News Asianet Suvarna News

ಬೆಂಗಳೂರು: ಗುದದ್ವಾರದಲ್ಲಿ ಮೊಬೈಲ್‌, ಕೈದಿ ವಿರುದ್ಧ ಕೇಸ್‌ ದಾಖಲು

ರಘುವೀರ್ ಎಂಬ ಆರೋಪಿಯು ಈ ಕೃತ್ಯ ಎಸಗಿದ್ದು, ಪ್ರಕರಣ ಸಂಬಂಧ ವಿಚಾರ ಣೆಗಾಗಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ ವಾಪಸ್ ಜೈಲಿಗೆ ಕರೆದೊಯ್ಯುವ ವೇಳೆ ಮೊಬೈಲ್ ಕೊಂಡೊಯ್ಯುವ ಯತ್ನ ನಡೆಸಲಾಗಿದೆ. 

case against the prisoner for Mobile in the anus in bengaluru grg
Author
First Published Jul 4, 2024, 12:49 PM IST

ಬೆಂಗಳೂರು(ಜು.04): ಪರಪ್ಪನ ಅಗ್ರಹಾರದೊಳಗೆ ಅಕ್ರಮವಾಗಿ ಆರೋಪಿಯೊಬ್ಬ ಮೊಬೈಲ್ ಕೊಂಡೊಯ್ಯುವ ಪ್ರಯತ್ನ ನಡೆಸಿದ ಘಟನೆ ನಡೆಸಿದ್ದು, ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 

ರಘುವೀರ್ ಎಂಬ ಆರೋಪಿಯು ಈ ಕೃತ್ಯ ಎಸಗಿದ್ದು, ಪ್ರಕರಣ ಸಂಬಂಧ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿ ವಾಪಸ್ ಜೈಲಿಗೆ ಕರೆದೊಯ್ಯುವ ವೇಳೆ ಮೊಬೈಲ್ ಕೊಂಡೊಯ್ಯುವ ಯತ್ನ ನಡೆಸಲಾಗಿದೆ. ಗುದದ್ವಾರದಲ್ಲಿ ಮೊಬೈಲ್ ಇಟ್ಟುಕೊಂಡು ಹೋಗುತ್ತಿದ್ದ ಎಂದು ಹೇಳಲಾಗಿದೆ. ಜೈಲಿನೊಳಗೆ ಕಳುಹಿಸುವ ಮುನ್ನ ಸ್ಕ್ಯಾನರ್‌ನಲ್ಲಿ ತಪಾಸಣೆ ಮಾಡಿದಾಗ ಎಲೆಕ್ಟ್ರಾನಿಕ್ ವಸ್ತು ಇರುವುದು ಗೊತ್ತಾಗಿದೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ದು ಎಕ್ಸ್‌ ಮಾಡಿದಾಗ ಮೊಬೈಲ್ ಇರುವುದು ಗೊತ್ತಾಗಿದೆ ಎಂದು ಹೇಳಲಾಗಿದೆ.

ತುಮಕೂರು: ಏಳು ಪೊಲೀಸರನ್ನು ‌ಹತ್ಯೆ ಮಾಡಿದ್ದ ನಕ್ಸಲ್‌ ಚಂದ್ರ ಬಂಧನ

ಆರೋಪಿ ರಘುವೀರ್ ಜೈಲಿನೊಳಗೆ ಮೊಬೈಲ್ ತೆಗೆದುಕೊಂಡು ಹೋಗಿ ಲಕ್ಷಾಂತರ ರು. ಸಂಪಾದನೆ ಮಾಡುತ್ತಿದ್ದ ಎನ್ನಲಾಗಿದೆ. ಅಕ್ರಮವಾಗಿ ಜೈಲಿನೊಳಗೆ ಮೊಬೈಲ್ ಮಾರಾಟ ಮಾಡಿ ಹಣ ಗಳಿಕೆ ಮಾಡುತ್ತಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಪ್ರಕರಣ ಕುರಿತು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Latest Videos
Follow Us:
Download App:
  • android
  • ios