ಲುಲು ಮಾಲ್‌ನಲ್ಲಿ ಪಾಕ್‌ ಧ್ವಜದ ಕುರಿತು ಪೋಸ್ಟ್‌: ಬಿಜೆಪಿ ಕಾರ್ಯಕರ್ತೆ ಶಂಕುತಲಾ ವಿರುದ್ಧ ಕೇಸ್‌

ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವ ಹಿನ್ನೆಲೆಯಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಆರೋಪದ ಮೇರೆಗೆ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ಐಪಿಸಿ 153 (ಬಿ) ಅಡಿ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲು. 

Case against BJP Worker Shakuntala Nataraj For Post about Pakistan Flag at Lulu Mall in Bengaluru grg

ತುಮಕೂರು(ಅ.15):  ಲುಲು ಶಾಪಿಂಗ್‌ ಮಾಲ್‌ನಲ್ಲಿ ಭಾರತದ ಬಾವುಟಕ್ಕಿಂತ ಎತ್ತರದಲ್ಲಿ ಪಾಕಿಸ್ತಾನ ಬಾವುಟ ಹಾರಿಸಿದ್ದಾರೆ ಎಂದು ಫೋಟೋ ಜೊತೆಗೆ ಪೋಸ್ಟ್ ಹಂಚಿಕೊಂಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ನಟರಾಜ್ ವಿರುದ್ಧ ತುಮಕೂರಿನ ಜಯನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಈ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿಸಿರುವ ಹಿನ್ನೆಲೆಯಲ್ಲಿ ಜನರ ಭಾವನೆಗಳನ್ನು ಕೆರಳಿಸುವ ಆರೋಪದ ಮೇರೆಗೆ ಐಪಿಸಿ 153 (ಬಿ) ಅಡಿ ಜಯನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಮಾಲ್‌ನಲ್ಲಿ ಭಾರತದ ತ್ರಿವರ್ಣಕ್ಕಿಂತ ಪಾಕಿಸ್ತಾನದ ದೊಡ್ಡ ಧ್ವಜ, ವೈರಲ್‌ ಚಿತ್ರಕ್ಕೆ ಲುಲು ಮಾಲ್‌ನಿಂದ ಸ್ಪಷ್ಟನೆ!

ಭಾರತದ ಬಾವುಟಕ್ಕಿಂತ ಬೇರೆ ಯಾವುದೇ ದೇಶದ ಬಾವುಟ ಎತ್ತರದಲ್ಲಿ ಇರಬಾರದು ಅನ್ನುವ ಸಾಮಾನ್ಯ ಜ್ಞಾನ ಇಲ್ಲವೇ ನಿಮ್ಮ ಮಾಲ್ ನವರಿಗೆ? @ಡಿ.ಕೆ. ಶಿವಕುಮಾರ್‌ #ಬಾಯ್ಕಾಟ್ ಲುಲುಮಾಲ್‌’ ಎಂಬ ಪೋಸ್ಟ್ ಅನ್ನು ಶಕುಂತಲಾ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕುಟುಂಬದ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ಆರೋಪದ ಮೇರೆಗೆ ಶಂಕುತಲಾ‌ ನಟರಾಜ್ ಅವರು ಬೆಂಗಳೂರು ಪೊಲೀಸರಿಂದ ಬಂಧನಕ್ಕೊಳಗಾಗಿದ್ದರು.

Latest Videos
Follow Us:
Download App:
  • android
  • ios