ರಾಯಚೂರು: ಹಟ್ಟಿ ಠಾಣೆಗೆ ನುಗ್ಗಿ ಪೊಲೀಸರ ಮೇಲೆ ಹಲ್ಲೆ; 51 ಜನರ ವಿರುದ್ಧ ಪ್ರಕರಣ

ಕೊಲೆ ಶಂಕೆ ಹಿನ್ನೆಲೆ 6 ಆರೋಪಿಗಳ ಬಂಧಿಸಿ ಲಾಕಪ್‌ನಲ್ಲಿ ಇರಿಸಿದ್ದ ಪೊಲೀಸರು, ಸಾವಿನ ಕುರಿತು ದೂರು ನೀಡಿಲ್ಲವೆಂದು ಮೃತರ ತವರೂರಿನವರು ಠಾಣೆಗೆ ಮುತ್ತಿಗೆ. 

Case against 51 people For Assault on Police in Raichur grg

ಲಿಂಗಸುಗೂರು(ಮಾ.15):  ತಾಲೂಕಿನ ಹಟ್ಟಿ ಪೊಲೀಸ್‌ ಠಾಣೆಗೆ ಅಕ್ರಮವಾಗಿ ನುಗ್ಗಿ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಲಾಕಪ್‌ನಲ್ಲಿ ವಿಚಾರಣೆಗೆ ಒಳಪಡಿಸಿದ್ದ ಆರೋಪಿಗಳ ಮೇಲೂ ಹಲ್ಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 51 ಜನರ ಮೇಲೆ ಪ್ರಕರಣ ದಾಖಲಾಗಿದೆ.

ತಾಲೂಕಿನ ಹೊಸಗುಡ್ಡ ತಾಂಡಾದಲ್ಲಿ ರೇಣುಕಾ ಎಂಬ ಗೃಹಿಣಿಯನ್ನು ಆಕೆಯ ಪತಿ ಸುನೀಲ್‌ ಸೇರಿ 6 ಜನರು ಕೊಲೆ ಮಾಡಿ ಮೃತದೇಹ ಬಾವಿಗೆ ಎಸೆದಿದ್ದಾರೆ ಎಂಬ ಶಂಕೆ ಮೇಲೆ ಹಟ್ಟಿಪೊಲೀಸರು ಆರೋಪಿಗಳನ್ನು ಬಂಧಿಸಿ ಪೊಲೀಸ್‌ ಠಾಣೆ ಲಾಕಪ್‌ನಲ್ಲಿ ವಿಚಾರಣೆ ನಡೆಸಿದ್ದರು. ರೇಣುಕಾಳ ಕೊಲೆ ಮಾಡಿದ ಆರೋಪಿಗಳು ಹಟ್ಟಿಪೊಲೀಸ್‌ ಠಾಣೆಯಲ್ಲಿ ಇದ್ದಾರೆ ಎಂಬ ಸುದ್ದಿ ತಿಳಿದು ಕೊಲೆಗೀಡಾದ ರೇಣುಕಾಳ ತವರೂರು ಗೋನವಾಟ್ಲ ತಾಂಡಾದವರು ಆಕ್ರೋಶದಿಂದ ನಾವು ರೇಣುಕಾ ಸಾವಿಗೆ ಸಂಬಂಧಿಸಿದಂತೆ ದೂರು ನೀಡಿಲ್ಲ. ಆರೋಪಿಗಳನ್ನು ಏಕೆ ಬಂಧಿಸಿದ್ದೀರಿ? ಹೊರಗೆ ಬಿಡಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾ ಅಕ್ರಮವಾಗಿ ಠಾಣೆಗೆ ನುಗ್ಗಿ ಲಾಕಪ್‌ನಲ್ಲಿದ್ದ ಆರೋಪಿಗಳ ಮೇಲೆ ಹಲ್ಲೆಗೆ ಮುಂದಾದರು. ಈ ವೇಳೆ ಬಿಡಿಸಲು ಬಂದ ಪೊಲೀಸರು ಹಾಗೂ ಮಹಿಳಾ ಪೇದೆ, ಸಿಬ್ಬಂದಿ ಮೇಲೂ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ.

ಬೆಂಗಳೂರು: 1.21 ಕೋಟಿಯ ಚಿನ್ನ ದೋಚಿದ್ದು ಪೊಲೀಸರೇ..!

ಘಟನೆ ವೇಳೆ ಹಟ್ಟಿ ಪೊಲೀಸ್‌ ಠಾಣೆ ಸಿಪಿಐ ಪ್ರಕಾಶ ಮಾಳಿ ಅನ್ಯ ಕಾರ್ಯ ನಿಮಿತ್ತ ಬೇರೆಡೆ ತೆರಳಿದ್ದರು. ಜೊತೆಗೆ ಠಾಣೆಯ ಹಲವು ಪೊಲೀಸ್‌ ಸಿಬ್ಬಂದಿ ಕಾರ್ಯಕ್ರಮಗಳ ಬಂದೋಬಸ್‌್ತ ವ್ಯವಸ್ಥೆಗೆ ತೆರಳಿದ್ದು, ಬೆರಳೆಣಿಕೆಯಷ್ಟುಸಿಬ್ಬಂದಿ ಮಾತ್ರ ಕಚೇರಿಯಲ್ಲಿರುವುದು ತಿಳಿದು ಬಂದಿದೆ. ಠಾಣೆಗೆ ಅಕ್ರಮವಾಗಿ ನುಗ್ಗಿ ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಲ್ಲದೇ ಪೊಲೀಸ್‌ರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 51 ಜನರ ಮೇಲೆ ಹಟ್ಟಿಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಎಸ್ಪಿ ಭೇಟಿ:

ಪೊಲೀಸ್‌ ಠಾಣೆಗೆ ನುಗ್ಗಿ ಲಾಕಪ್‌ನಲ್ಲಿದ್ದ ಕೊಲೆ ಆರೋಪಿಗಳ ಮೇಲೆ ಹಲ್ಲೆ ನಡೆಸಿ, ಪೊಲೀಸ್‌ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ನಿಖಿಲ್‌ ಬಿ. ಹಟ್ಟಿಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸ್‌ ಠಾಣೆಗೆ ನುಗ್ಗಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ಸಿಸಿ ಕ್ಯಾಮಾರದಲ್ಲಿ ಸೆರೆಯಾದ ದೃಶ್ಯಾವಳಿಗಳ ಪರಿಶೀಲನೆ ಮಾಡಿ ಠಾಣೆಗೆ ನುಗ್ಗಿ ಹಲ್ಲೆ ಮಾಡಿದವರನ್ನು ಗುರುತಿಸಲಾಗುವುದು. ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಅಂತ ರಾಯಚೂರು ಎಸ್ಪಿ ನಿಖಿಲ್‌ ಬಿ. ತಿಳಿಸಿದ್ದಾರೆ.  

ಎಸ್ಪಿ ಯವರ ನಿರ್ದೇಶನದಂತೆ ಈಗಾಗಲೆ 51 ಜನರ ಮೇಲೆ ಅಕ್ರಮವಾಗಿ ಠಾಣೆಗೆ ನುಗ್ಗಿ, ಪೊಲೀಸ್‌ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಲಾಗಿದೆ ಎಂದು ಪ್ರಕರಣ ದಾಖಲಿಸಲಾಗಿದೆ. ಠಾಣೆಗೆ ನುಗ್ಗಿ ಪೊಲೀಸ್‌ರ ಮೇಲೆ ಹಲ್ಲೆ ಮಾಡಿದ ಆರೋಪಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಅಂತ ಹಟ್ಟಿ ಚಿನ್ನದಗಣಿ ಪೊಲೀಸ್‌ ಠಾಣೆ ಸಿಪಿಐ ಪ್ರಕಾಶ ಮಾಳಿ ಹೇಳಿದ್ದಾರೆ. 

Latest Videos
Follow Us:
Download App:
  • android
  • ios