ಪುಷ್ಪ ಸಿನಿಮಾದ ಮಾದರಿಯಲ್ಲಿಯೇ, ಬೆಂಗಳೂರಿನಲ್ಲಿ 2.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸಾಗಣೆ ಮಾಡಲು ತಮ್ಮ ಕಾರನ್ನೇ ಮಾಡಿಫೈ ಮಾಡಿ ಸ್ಮಗ್ಲಿಂಗ್‌ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಮಾ.16): ದೇಶಾದ್ಯಂತ ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದ ಸಿನಿಮಾಗಳಲ್ಲಿ ಒಂದಾಗಿರುವ ತೆಲುಗು ಸ್ಟಾರ್‌ ನಟ ಅಲ್ಲು ಅರ್ಜುನ್‌ ಅವರ ಪುಷ್ಪ ಸಿನಿಮಾದ ಮಾದರಿಯಲ್ಲಿಯೇ, ಬೆಂಗಳೂರಿನಲ್ಲಿ 2.5 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಸಾಗಣೆ ಮಾಡಲು ತಮ್ಮ ಕಾರನ್ನೇ ಮಾಡಿಫೈ ಮಾಡಿ ಸ್ಮಗ್ಲಿಂಗ್‌ ಮಾಡುತ್ತಿದ್ದ ಗ್ಯಾಂಗ್‌ ಅನ್ನು ಪೊಲೀಸರು ಬಂಧಿಸಿದ್ದಾರೆ.

ಸಿನಿಮಾಗಳನ್ನು ಹಾಗೂ ಸಿನಿಮಾ ನಟರನ್ನು ಅನುಕರಣೆ ಮಾಡುವುವವರ ಸಂಖ್ಯೆ ದೊಡ್ಡ ಮಟ್ಟದಲ್ಲಿಯೇ ಇದೆ. ಮುಖ್ಯವಾಗಿ ಸಿನಿಮಾದಲ್ಲಿರುವ ಒಳ್ಳೆಯ ಅಂಶಗಳನ್ನು ಮಾತ್ರ ಅನುಕರಣೆ ಮಾಡಿಕೊಂಡರೆ ಸಮಾಜ ಮತ್ತು ವ್ಯಕ್ತಿಗೂ ಅನುಕೂಲ ಆಗಲಿದೆ. ಆದರೆ, ಸಿನಿಮಾದಲ್ಲಿರುವ ಕೆಟ್ಟ ಅಂಶಗಳನ್ನು ಅಳವಡಿಸಿಕೊಂಡಲ್ಲಿ ಖಳನಾಯಕರು ಶಿಕ್ಷೆಯಾಗುವ ಮಾದರಿಯಲ್ಲಿ ತಮಗೂ ಶಿಕ್ಷೆ ಆಗುತ್ತದೆ ಎಂಬುದನ್ನೇ ಮರೆತುಬಿಟ್ಟಿರುತ್ತಾರೆ. ವಿದೇಶಗಳಿಂದ ಬಂದು ಬೆಂಗಳೂರಲ್ಲಿ ವಾಸವಿದ್ದ ವಿದೇಶಿ ಪ್ರಜೆಗಳು ಸ್ಮಗ್ಲಿಂಗ್‌ ಮಾಡಲು ತೆಲುಗಿನ ಅಲ್ಲು ಅರ್ಜುನ್‌ ಅವರ ಪುಷ್ಪ ಸಿನಿಮಾ ಮಾದರಿಯಲ್ಲಿ ತಮ್ಮ ಕಾರನ್ನು ಮಾರ್ಪಾಡು ಮಾಡಿರುವುದು ಬೆಳಕಿಗೆ ಬಂದಿದೆ. ಈಗ ಸ್ಮಗ್ಲಿಂಗ್‌ ವಸ್ತುಗಳ ಸಮೇತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಚಿತ್ರ ನಿರ್ಮಾಪಕ ಉಮಾಪತಿ ಕೊಲೆ ಸಂಚು ಆರೋಪಿ ಬಂಧನ: ಕರಿಯಾ ರಾಜೇಶ್‌ಗೆ ಜೈಲೇ ಗತಿ

25 ಕಿಲೋಗ್ರಾಂ ಗಾಂಜಾ ಜಪ್ತಿ: ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಚಾರಣೆಯಿಂದ 2.5 ಕೋಟಿ ಮೌಲ್ಯದ ಮಾದಕ ವಸ್ತುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಪ್ರಕರಣದಡಿ ಓರ್ವ ಮಹಿಳೆ, ನಾಲ್ವರು ವಿದೇಶಿ‌ ಪ್ರಜೆಗಳು ಸೇರಿದಂತೆ 13 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ 25 ಕೆಜಿ ಗಾಂಜಾ ಹಾಗೂ 1 ಕೆಜಿ ಕಿಸ್ಟ್ರಲ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನು ದೊಡ್ಡ ಮಟ್ಟದ ಮಾದಕ ವಸ್ತುವನ್ನು ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳಿಗೆ ರವಾನೆ ಮಾಡಲಾಗುತ್ತಿತ್ತು ಎಂದು ತಿಳಿದುಬಂದಿದೆ.

ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಸರಬರಾಜು: ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಬೃಹತ್‌ ಪ್ರಮಾಣದ ಮಾದಕ ವಸ್ತುವನ್ನು ಆರೋಪಿಗಳು ಸರಬರಾಜು ಮಾಡುತ್ತಿದ್ದರು. ವರ್ಚುವಲ್ ಮೂಲಕ ಲೊಕೇಷನ್ ಹಾಕಿಸಿಕೊಂಡು ನಂತರ ಆ ಸ್ಥಳಕ್ಕೆ ತೆರಳಿ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದರು. ಗಾಂಜಾವನ್ನು ಆಂಧ್ರಪ್ರದೇಶ ಅರಕು ಪ್ರದೇಶದಿಂದ ಬೆಂಗಳೂರಿಗೆ ಪೂರೈಕೆ ಮಾಡುತ್ತಿದ್ದರು. ಪೋಸ್ಟ್ ಮ್ಯಾನ್ ಇರಬಹುದು, ಕೊರಿಯರ್ ಏಜೆನ್ಸಿ ಈ ಹಿಂದೆ ಸರಬರಾಜು ಆಗ್ತಾ ಇತ್ತು. ಆದರೆ, ಈಗ ಅದನ್ನು ಸುಧಾರಣೆ ಮಾಡಿಕೊಂಡಿರುವ ಆರೋಪಿಗಳು ಕಾರನ್ನು ಮಾಡಿಫೈ ಮಾಡಿಕೊಂಡು ಸ್ಮಗ್ಲಿಂಗ್‌ ಮಾಡಲು ಮುಂದಾಗಿದ್ದಾರೆ.

ಕಾರನ್ನು ಮಾರ್ಪಾಡು ಮಾಡಿದ್ದ ಆರೋಪಿಗಳು: ತೆಲುಗಿನ ಅಲ್ಲು ಅರ್ಜುನ್ ಪುಷ್ಪ ಸಿನಿಮಾ ಪ್ರೇರಣೆಯಿಂದ ಮಾದಕಸವಸ್ತು ಸಾಗಟ ಮಾಡಲು ಆರೋಪಿಗಳು ಸಂಚು ರೂಪಿಸಿದ್ದಾರೆ. ಇದಕ್ಕಾಗಿ ಆರೋಪಿಗಳು ಇಕೋ ಕಾರನ್ನ ಮಾದಕ ವಸ್ತು ಮಾರಾಟ ಮಾಡಲು ಮಾರ್ಪಾಡು (Modify) ಮಾಡಿಕೊಂಡಿದ್ದಾರೆ. ಕಾರಿನ ಹಿಂಭಾಗದಲ್ಲಿ ಕಾರಿನ ಚಕ್ರವನ್ನು ಇಡಲು ಹಾಗೂ ಲಗೇಜ್‌ ಇಡಲು ಇರುವ ಜಾಗವನ್ನು ಮಾದಕವಸ್ತು ಸಾಗಾಟ ಮಾಡಲು ಬಾಕ್ಸ್ ರೂಪದಲ್ಲಿ ನಿರ್ಮಿಸಿದ್ದರು.

ಬೆಂಗಳೂರಲ್ಲಿ ಹೆತ್ತ ಮಗಳನ್ನೇ ಕೊಲೆಗೈದ ದುಷ್ಟ ತಂದೆ: ದೊಣ್ಣೆಯಿಂದ ಹಲ್ಲೆ

ವಿದ್ಯಾರ್ಥಿಗಳಿಂದಲೇ ಮಾಹಿತಿ:
ಮಾದಕವಸ್ತುಗಳ ಸರಬರಾಜು ಬಗ್ಗೆ ಕೆಲವುಬಾರಿ ಕಾಲೇಜುಗಳಿಂದ ಸಹ ಮಾಹಿತಿ ಬರುತ್ತದೆ. ಈ ಪೈಕಿ ವಿದ್ಯಾರ್ಥಿಗಳೇ ಮಾಹಿತಿ ನೀಡಿದ್ದಾರೆ. ಕಳೆದ ವರ್ಷ ಮಾದಕ ವಸ್ತು ಸಾಗಣೆ ಆರೋಪದಡಿ ಹೆಚ್ಚಿನ ವಿದೇಶಿ ಪ್ರಜೆಗಳನ್ನ ಗಡಿಪಾರು ಮಾಡಲಾಗಿತ್ತು. ಈಗ ಬಂಧನವಾಗಿರುವ ಪ್ರಜೆಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತದೆ.
- ಪ್ರತಾಪ್ ರೆಡ್ಡಿ, ಬೆಂಗಳೂರು ನಗರ ಪೊಲೀಸ್ ಆಯುಕ್ತ