ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಕಾರು: ಮದುವೆ ತಯಾರಿಯಲ್ಲಿದ್ದ ಯುವಕರ ದುರ್ಮರಣ
ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ಸೋಮವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎರಡು ಬೈಕ್‌ಗಳಿಗೆ ಕಾರು ಡಿಕ್ಕಿ ಹೊಡೆದಿದ್ದು, ಮೂವರು ಸಾವನ್ನಪ್ಪಿದ್ದಾರೆ.
ಗದಗ (ಮೇ 15): ಗದಗ ತಾಲೂಕಿನ ಅಡವಿ ಸೋಮಾಪುರ ಗ್ರಾಮದಲ್ಲಿ ಸೋಮವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಎರಡು ಬೈಕ್‌ಗಳಿಗೆ ಕಾರು ಡಿಕ್ಕಿ ಹೊಡೆದಿದೆ. ಗದಗ ನಗರಕ್ಕೆ ಮದುವೆ ತಯಾರಿಗೆ ಕೆಲವು ವಸ್ತುಗಳನ್ನು ತರಲು ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಯುವಕರು ಹಾಗೂ ಆಸ್ಪತ್ರೆಗೆ ಹೋಗುತ್ತಿದ್ದ ವ್ಯಕ್ತಿ ಸೇರಿದಂತೆ ಮೂವರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
ಗದಗನಿಂದ ಶಿರಹಟ್ಟಿಗೆ ಹೊರಟಿದ್ದ ಕಾರು ಅಡವಿ ಸೋಮಾಪುರ ಬಳಿ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಹೋಗುತ್ತಿದ್ದ ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ಇನ್ನು ಕಾರು ಗುದ್ದಿದ ರಭಸಕ್ಕೆ ಬೈಕ್ ಸವಾರರು ಸುಮಾರು 10 ರಿಂದ 29 ಮೀಟರ್ ದೂರಕ್ಕೆ ಬಿದ್ದಿದ್ದಾರೆ. ಈ ಅಪಘಾತದಲ್ಲಿ ಇಬ್ಬರಿಗೆ ತೀವ್ರ ಗಾಯಗೊಂಡ ಇಬ್ಬರು ತೀವ್ರ ರಕ್ತಸ್ರಾವ ಉಂಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ ಮತ್ತೊಬ್ಬ ಗಾಯಾಳು ವ್ಯಕ್ತಿಯನ್ನು ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.
Bengaluru: ಪತ್ನಿ ಶೋಕಿಗೆ ಹಣ ಹೊಂದಿಸಲಾಗದೇ, ಮಕ್ಕಳ ಸಮೇತ ತಂದೆಯೂ ಆತ್ಮಹತ್ಯೆ!
ಗದಗ ನಗರಕಕ್ಕೆ ಹೊರಟಿದ್ದರು: ಸಿಂಗಟರಾಯನಕೆರೆ, ಡೋಣಿ ತಾಂಡಾ ದಿಂದ ಗದಗ ನಗರಕ್ಕೆ ಹೊರಟಿದ್ದ ಎರಡು ಬೈಕ್‌ಗಳಿಕೆ ಕಾರು ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಮೃತರಾದವರನ್ನು ಸಿಂಗಟರಾಯನಕೆರೆ ತಾಂಡಾದ ಶಿವಪ್ಪ ನಾಯಕ್ (50), ಡೋಣಿ ತಾಂಡಾದ ಶಿವಾನಂದ ಲಮಾಣಿ (33) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನು ಗಾಯಾಳು ಕೃಷ್ಣಪ್ಪ ಚವ್ಹಾಣ್ (32) ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತರಾಗಿದ್ದಾರೆ. ನಿಯಂತ್ರಣ ತಪ್ಪಿದ್ದ ಕಾರ್ ಎರಡೂ ಬೈಕ್ ಗೆ ಗುದ್ದಿದೆ ಎಂಬ ಮಾಹಿತಿಯಿದೆ.
ಅತಿವೇಗದ ಕಾರು ಚಾಲನೆಯಿಂದ ದುರ್ಘಟನೆ: ಅತಿ ವೇಗದ ಚಾಲನೆಯಲ್ಲಿದ್ದ ಕಾರು ಬೈಕ್ ಗಳಿಗೆ ಡಿಕ್ಕಿಯಾಗುತ್ತಿದ್ದಂತೆ ಜಖಂಗೊಂಡು ನಿಯಂತ್ರಣ ತಪ್ಪಿ ರಸ್ತೆಯ ಪಕ್ಕದಲ್ಲಿದ್ದ ಜಮೀನಿಗೆ ನುಗ್ಗಿದೆ. ಇನ್ನು ಅಪಘಾತದಲ್ಲಿ ಗಾಯಾಳು ಪ್ರಾಣ ಹೋಗುತ್ತಿರುವುದನ್ನು ನೋಡಿ ಜನರು ತನ್ನ ಮೇಲೆ ಹಲ್ಲೆ ಮಾಡಬಹುದೆಂದು ನಿರೀಕ್ಷಿಸಿ ಕಾರು ಚಾಲಕ ಅಲ್ಲಿಂದ ಪರಾರಿ ಆಗಿದ್ದಾನೆ. ಕಾರು ಜಮೀನಿನಲ್ಲಿಯೇ ಇದೆ. ಇನ್ನು ಸ್ಥಳಕ್ಕೆ ಬಂದ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಪಘಾತದಿಂದ ಮೃತಪಟ್ಟ ದೇಹಗಳನ್ನು ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಕಣ್ಮುಂದೆ ಬೆಂಕಿ ಹಚ್ಚಿಕೊಂಡ ಅಕ್ಕನ ರಕ್ಷಿಸದೇ ವೀಡಿಯೋ ಮಾಡ್ತಾ ನಿಂತ ತಮ್ಮ
ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ: ತಾಂಡಾದಿಂದ ಗದಗ ನಗರಕ್ಕೆ ಹೋಗಿ ಬರುವುದಾಗಿ ಮನೆಯಿಂದ ಹೊರಟವರು ಈಗ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮನೆಗೆ ಆಸರೆ ಆಗಿದ್ದ ವ್ಯಕ್ತಿ ಶಿವಪ್ಪ ನಾಯ್ಕ್ ಹಲ್ಲು ನೋವಿನ ಚಿಕಿತ್ಸೆ ಪಡೆಯಲು ಗದಗ ನಗರಕ್ಕೆ ಹೋಗುವಾಗ ಘಟನೆ ನಡೆದಿದ್ದು, ಕುಟುಂಬಸ್ಥರಿಗೆ ದಿಕ್ಕೇ ತೋಚತಂದಾಗಿದೆ. ಮತ್ತೊಂದೆಡೆ ಮೃತರಲ್ಲಿ ಇಬ್ಬರು ಮದುವೆಗೆ ಬೇಕಾಗಿದ್ದ ವಸ್ತುಗಳನ್ನು ಖರೀದಿಗೆ ಹೊರಟಿದ್ದರು. ಈಗ ಶಾಶ್ವತವಾಗಿ ಮಸಣ ಸೇರಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.