ಬೋಂದೆಲ್‌ನಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುವ ರೂಟ್ ನಂಬರ್‌ 19ರ ‘ಆಶೆಲ್’ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದಾಗ ವಕೀಲೆ ಜತೆ ಅತಿರೇಕದಿಂದ ವರ್ತಿಸಿ ಮಾನಸಿಕ ಕಿರುಕುಳ ನೀಡಿದ್ದ ನಿರ್ವಾಹಕ 

ಮಂಗಳೂರು(ಅ.15):  ನಗರದ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಕೀಲೆ ಮುಫೀದಾ ರಹ್ಮಾನ್ ಅವರಿಗೆ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ಖಾಸಗಿ ಬಸ್ಸೊಂದರ ನಿರ್ವಾಹಕ ಭರತ್ ಸಾಲ್ಯಾನ್ ಮತ್ತು ಚಾಲಕ ಶಿವಕುಮಾರ್ ಎಂಬವರನ್ನು ಕದ್ರಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ದೇರಳಕಟ್ಟೆ ಸಮೀಪದ ಜಲಾಲ್‌ಬಾಗ್ ನಿವಾಸಿಯಾಗಿರುವ ವಕೀಲೆ ಮುಫೀದಾ ರಹ್ಮಾನ್ ಕಳೆದ ಸೋಮವಾರ ಮಧ್ಯಾಹ್ನ ಪಿವಿಎಸ್ ಸರ್ಕಲ್ ಬಳಿ ನಿಂತಿದ್ದರು. 

Video viral: ಹಮಾಸ್ ಉಗ್ರರನ್ನು 'ದೇಶಪ್ರೇಮಿಗಳು' ಎಂದು ಕರೆದ ಮಂಗಳೂರು ವ್ಯಕ್ತಿ!

ಬೋಂದೆಲ್‌ನಿಂದ ಸ್ಟೇಟ್‌ಬ್ಯಾಂಕ್ ಕಡೆಗೆ ತೆರಳುವ ರೂಟ್ ನಂಬರ್‌ 19ರ ‘ಆಶೆಲ್’ ಎಂಬ ಹೆಸರಿನ ಖಾಸಗಿ ಬಸ್ಸಿಗೆ ಹತ್ತುವ ವೇಳೆ ಚಾಲಕನು ಅಜಾಗರೂಕತೆಯಿಂದ ಮುಂದಕ್ಕೆ ಚಲಾಯಿಸಿದಾಗ ವಕೀಲೆ ಜತೆ ನಿರ್ವಾಹಕ ಅತಿರೇಕದಿಂದ ವರ್ತಿಸಿ ಮಾನಸಿಕ ಕಿರುಕುಳ ನೀಡಿದ್ದ ಎಂದು ದೂರಿನಲ್ಲಿ ತಿಳಿಸಲಾಗಿತ್ತು.