ತುಂಗಭದ್ರಾ ನದಿ ಕೆಸರಲ್ಲಿ ಸಿಲುಕಿ ಸಹೋದರರ ಸಾವು: ಈಜಲು ಹೋದವರು ನೀರು ಪಾಲಾದರು

ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಜಮೀನಿನ ಬಳಿಯಿದ್ದ ತುಂಗಭದ್ರಾ ನದಿಗೆ ಈಜಲು ಹೋಗಿದ್ದ ಸಹೋದರರು ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ ದುರ್ಘಟನೆ ದಡೇಸುಗೂರಿನಲ್ಲಿ ನಡೆದಿದೆ.

Brothers died getting stuck in silt of Tungabhadra river at Dadesuguru village sat

ರಾಯಚೂರು (ಮೇ 15): ಬೇಸಿಗೆಯ ಹಿನ್ನೆಲೆಯಲ್ಲಿ ಶಾಲೆ, ಕಾಲೇಜುಗಳಿಗೆ ರಜೆಯಿದ್ದು, ತಂದೆ- ತಾಯಿಗೆ ಕೃಷಿ ಕೆಲಸಕ್ಕೆ ನೆರವಾಗಲೆಂದು ಕೊಯ್ಲು ಮಾಡಿದ್ದ ಭತ್ತವನ್ನು ಒಣಗಿಸಲೆಂದು ಹೊಲಕ್ಕೆ ಹೋದ ಸಹೋದರರು ಪಕ್ಕದಲ್ಲಿಯೇ ಇದ್ದ ತುಂಗಭದ್ರಾ ನದಿಗೆ ಈಜಾಡಲು ಹೋಗಿದ್ದಾರೆ. ಆದರೆ, ನದಿಯಲ್ಲಿನ ಕೆಸರಿನಲ್ಲಿ ಸಿಕ್ಕಿಕೊಂಡು ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.

ತುಂಗಭದ್ರಾ ನದಿಗೆ ಈಜಲು ತೆರಳಿದ ಸಹೋದರರಿಬ್ಬರು ನೀರುಪಾಲು ಆಗಿರುವ ಘಟನೆ ಸೋಮವಾರ ಮಧ್ಯಾಹ್ನ ರಾಯಚೂರು ಜಿಲ್ಲೆ ‌ಸಿಂಧನೂರು ತಾಲೂಕಿನ ದಡೇಸುಗೂರು ಗ್ರಾಮದ ಬಳಿ ಸಂಭವಿಸಿದೆ. ಮೃತ ಸಹೋದರರನ್ನು ಅಮರ್ (17) ಹಾಗೂ ಮಲ್ಲಿಕಾರ್ಜುನ (15) ಎಂದು ಗುರುತಿಸಲಾಗಿದೆ. ನದಿಯಲ್ಲಿ ಈಜಲು ಹೋದಾಗ ಕೆಸರಿನಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ. ನದಿಯಲ್ಲಿ ಮುಳುಗುತ್ತಿದ್ದ ಒಬ್ಬ ಸಹೋರನನ್ನು ರಕ್ಷಣೆ ಮಾಡಲು ಹೋದ ಇನ್ನೊಬ್ಬ ಸಹೋದರನೂ ನೀರಲ್ಲಿ ಮುಳುಗಿದ್ದಾನೆ.

ಎರಡು ಬೈಕ್‌ಗಳಿಗೆ ಡಿಕ್ಕಿ ಹೊಡೆದ ಕಾರು: ಮದುವೆ ತಯಾರಿಯಲ್ಲಿದ್ದ ಯುವಕರ ದುರ್ಮರಣ

ಬಿಸಿಲಿನ ತಾಪಕ್ಕೆ ಈಜಲು ಹೋದವರು ನೀರು ಪಾಲಾದರು: ಇನ್ನು ಶಾಲೆಗೆ ರಜೆ ಇರುವ ಹಿನ್ನೆಲೆಯಲ್ಲಿ ಗದ್ದೆಯಲ್ಲಿನ ಭತ್ತವನ್ನು ಕೊಯ್ಲು ಮಾಡಿಸಲು ತೆರಳಿದ್ದ ಸಹೋದರರು ಭತ್ತದ ರಾಶಿಯನ್ನು ಒಣಗಲು ಹಾಕಿದ್ದಾರೆ. ಇನ್ನು ಮಧ್ಯಾಹ್ನ ಬಿಸಿಲಿನ ತಾಪಕ್ಕೆ ನದಿಯಲ್ಲಿ ಸ್ನಾನ ಮಾಡಿಕೊಂಡು ಬರಲು ತೆರಳಿದ್ದಾರೆ. ಜಮೀನಿನ ಪಕ್ಕದಲ್ಲಿಯೇ ಹರಿಯುತ್ತಿದ್ದ ತುಂಗಭದ್ರಾ ನದಿಗೆ ಇಬ್ಬರು ಸಹೋದರರು ಹಾಗೂ ಮತ್ತೊಬ್ ಬಾಲಕ ಸೇರಿದಂತೆ ಮೂವರು ಈಜಲು ಹೋಗಿದ್ದಾರೆ. ಈ ವೇಳೆ ನದಿಯಲ್ಲಿ ಇದ್ದ ಕೆಸರಿನಲ್ಲಿ ಸಿಲುಕಿ ಮೇಲೆ ಬರಲಾಗದೇ ಮಲ್ಲಿಕಾರ್ಜುನ ಮುಳುಗುತ್ತಿದ್ದನು. ಇದನ್ನು ಕಂಡ ಸಹೋದರ ಅಮರ್‌ ಮಲ್ಲಿಕಾರ್ಜುನನನ್ನ ರಕ್ಷಿಸಲು ಹೋಗಿ ಆತನೂ ಕೆಸರಿನಲ್ಲಿ ಸಿಲುಕಿಕೊಂಡು ಈಜಲು ಸಾಧ್ಯವಾಗದೇ ನೀರಿನಲ್ಲಿ ಮುಳುಗಿದ್ದಾರೆ.

ಪಾಲಕರು ಬರುವಷ್ಟರಲ್ಲಿ ಹೆಣವಾಗಿದ್ದ ಮಕ್ಕಳು: ಇಬ್ಬರೂ ನೀರಿನಲ್ಲಿ ಮುಳುಗಿದ್ದನ್ನು ನೋಡಿದ ಮತ್ತೊಬ್ಬ ಬಾಲಕ ಕೂಡಲೇ ಓಡಿ ಹೋಗಿ ಭತ್ತದ ರಾಶಿ ಬಳಿಯಿದ್ದ ಬಾಲಕರ ಪೋಷಕರನ್ನು ನದಿಯ ಬಳಿ ಕರೆತಂದಿದ್ದಾರೆ. ಇನ್ನು ಬಾಲಕನ ಚೀರಾಟವನ್ನು ನೋಡಿದ್ದ ಮೀನುಗಾರರು ಅಷ್ಟರಲ್ಲಾಗಲೇ ಸಹೋದರರು ಮುಳುಗಿದ್ ಜಾಗದಲ್ಲಿ ಹುಡುಕಾಟ ಆರಂಭಿಸಿದ್ದಾರೆ. ಆದರೆ, ಭತ್ತದ ರಾಶಿ ಬಳಿಯಿದ್ದ ಮಕ್ಕಳ ಪಾಲಕರು ಬರುವ ವೇಳೆಗೆ ಇಬ್ಬರೂ ಬಾಲಕರು ಸಾವನ್ನಪ್ಪಿದ್ದರು. ಸ್ಥಳೀಯ ಮೀನುಗಾರರ ಸಹಾಯದಿಂದ ಮಲ್ಲಿಕಾರ್ಜುನ ಮತ್ತು ಅಮರ್‌ ಅವರ ಮೃತದೇಹಗಳನ್ನು ನದಿಯ ಕೆಸರಿನಿಂದ ಮೇಲಕ್ಕೆ ತರಲಾಯಿತು. 

ಈಜಲು ಹೋದವರು ಶಾಶ್ವತ ದೂರಾದರು: ಇನ್ನು ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಭತ್ತರ ರಾಶಿಯ ಬಳಿ ಇರುವುದನ್ನು ಬಿಟ್ಟು ನದಿಯಲ್ಲಿ ಈಜಲು ಹೋದ ಮಕ್ಕಳು ಶಾಶ್ವತವಾಗಿ ತಮ್ಮಿಂದ ದೂರವಾಗಿದ್ದಾರೆ ಎಂದು ಅಳುತ್ತಿರುವ ಘಟನೆ ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಿತ್ತು. ಇನ್ನು ಘಟನೆಯ ನಂತರ ಸಿಂಧನೂರು ಗ್ರಾಮೀಣ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದೆ. ಸಂಜೆ ವೇಳೆ ಗ್ರಾಮಕ್ಕೆ ಆಗಮಿಸಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದಾರೆ.

Bengaluru: ಪತ್ನಿ ಶೋಕಿಗೆ ಹಣ ಹೊಂದಿಸಲಾಗದೇ, ಮಕ್ಕಳ ಸಮೇತ ತಂದೆಯೂ ಆತ್ಮಹತ್ಯೆ!

ಮಕ್ಕಳ ಬಗ್ಗೆ ಕಾಳಜಿಯಿರಲಿ: ಶಾಲೆ- ಕಾಲೇಜುಗಳಿಗೆ ರಜೆ ಇದ್ದರೆ ಮಕ್ಕಳನ್ನು ದಿನಪೂರ್ತಿ ಮನೆಯಲ್ಲಿ ಹಿಡಿದಿಡುವುದು ಕಷ್ಟಸಾಧ್ಯ. ಇನ್ನು ತಾರುಣ್ಯಾವಸ್ಥೆಗೆ ಬಂದಿರುವ (13 ವರ್ಷ ಮೇಲ್ಪಟ್ಟ) ಮಕ್ಕಳಂತೂ ತಂದೆ- ತಾಯಿ ಮಾತನ್ನು ಕೇಳದೇ ತಮಗೆ ತಿಳಿದ ಅಪಾಯಕಾರ ಆಟಗಳನ್ನು ಆಡಲು ಹೋಗುವುದು ಸಾಮಾನ್ಯವಾಗಿರುತ್ತದೆ. ಮತ್ತೊಂದೆಡೆ ಗ್ರಾಮೀಣ ಭಾಗದ ಮಕ್ಕಳು ತಂದೆ- ತಾಯಿಗೆ ಕೃಷಿ ಕಾರ್ಯಗಳನ್ನು ನೆರವಾಗಲು ಮುಂದಾಗುತ್ತಾರೆ. ಇನ್ನು ಕೃಷಿ ಕೆಲಸಗಳನ್ನು ಮಾಡುವುದು ತಪ್ಪಲ್ಲ, ಆದರೆ ತಂದೆ ತಾಯಿ ಜೊತೆಗಿರದ ವೇಳೆ ಅಪಾಯಗಳನ್ನು ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ, ಪೋಷಕರು ಹೆಚ್ಚು ನಿಗಾವಹಿಸಬೇಕು.

Latest Videos
Follow Us:
Download App:
  • android
  • ios