ಮೈಸೂರು(ಫೆ.26):  ತಮ್ಮ ಆತ್ಮಹತ್ಯೆ ಮಾಡಿಕೊಂಡ ವಿಷಯ ತಿಳಿದು ಅಣ್ಣನೂ ಸಹ ಆತ್ಮಹತ್ಯೆಗೆ ಶರಣಾದ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ಇಂದು(ಶುಕ್ರವಾರ) ನಡೆದಿದೆ. ವೆಂಕಟೇಶ್(28), ಹರೀಶ್(26) ಮೃತ ಸಹೋದರರಾಗಿದ್ದಾರೆ. 

"

ರೈತನಾಗಿದ್ದ ಹರೀಶ್​ ಟ್ರ್ಯಾಕ್ಟರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ, ಹರೀಶ್​ ಟ್ರ್ಯಾಕ್ಟರ್ ರ್ಯಾಶ್ ಡ್ರೈವ್ ಮಾಡುತ್ತಿದ್ದನು. ಈ ಬಗ್ಗೆ ತಂದೆ ಚಿನ್ಮಯಿಗೌಡ ಬುದ್ದಿ ಹೇಳಿದ್ದರು. ಇನ್ನೂ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ್ ಕೂಡ ತಮ್ಮನಿಗೆ ಕರೆಮಾಡಿ ಬುದ್ಧಿವಾದ ಹೇಳಿದ್ದನು ಎಂದು ತಿಳಿದು ಬಂದಿದೆ. 

ಕಲಬುರಗಿ: ಸಾಲಗಾರರ ಕಿರುಕುಳ, ಖಾಸಗಿ ಶಿಕ್ಷಣ ಸಂಸ್ಥೆ ಮಾಲೀಕ ಆತ್ಮಹತ್ಯೆ

ಆತ್ಮೀಯನಾಗಿದ್ದ ಅಣ್ಣ ಬೈದಿದ್ದರಿಂದ ತೀವ್ರವಾಗಿ ಮನನೊಂದ ಹರೀಶ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಮ್ಮ ನೇಣು ಬಿಗಿದುಕೊಂಡಿರುವ ದೃಶ್ಯಗಳನ್ನು ಸ್ನೇಹಿತರು ಅಣ್ಣನ ಮೊಬೈಲ್ ಫೋನ್​ಗೆ ಕಳುಹಿಸಿದ್ದರು. ಹರೀಶ್ ಸಾವಿಗೆ ನಾನೇ ಕಾರಣವಾದೆ ಎಂದು ಭಾವಿಸಿದ್ದ ವೆಂಕಟೇಶ್, ಊರಿಗೆ ಬರುವ ಬದಲು ಸರಗೂರು ರಸ್ತೆ ಕಡೆ ಹೋಗಿ ತಾನೂ ಕೂಡ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಹೆಚ್.ಡಿ.ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.