Asianet Suvarna News Asianet Suvarna News

ಶೋರೂಮ್‌ಗೆ ನುಗ್ಗಿದ್ದ ಕಳ್ಳರು, ಒನ್ಲಿ ಬ್ರಾಂಡೆಡ್ ಬಟ್ಟೆ ಮಾತ್ರ ಕದ್ದರು..!

ಕೈಗೆ ಸಿಕ್ಕ ವಸ್ತುಗಳನ್ನು ದೋಚುವ ಕಳ್ಳರನ್ನು ನೋಡಿದ್ದೇವೆ. ಆದ್ರೆ, ಇದೀಗ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬ್ರಾಂಡೆಡ್ ಬಟ್ಟೆ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ. 

branded clothes stolen In  Show room at bangaluru rbj
Author
Bengaluru, First Published Jan 23, 2021, 3:16 PM IST

 ಬೆಂಗಳೂರು, (ಜ.23): ಆಟೋದಲ್ಲಿ ಬಂದ ಕಳ್ಳರು ಬಟ್ಟೆ ಶೋರೂಮ್ ಶೆಟರ್ ಮುರಿದು ಬ್ರಾಂಡೆಡ್ ಬಟ್ಟೆಗಳ ಕಳವು ಮಾಡಿರುವ ಘಟನೆ ಬೆಂಗಳೂರಿನ ಕತ್ರಿಗುಪ್ಪೆಯ ಫೇವರೆಟ್ ಸಾಚ್ ಬಟ್ಟೆ ಶೋರೂಮ್‌ನಲ್ಲಿ ನಡೆದಿದೆ.

ಕಳೆದ ಜನವರಿ 21 ರ ಬೆಳಗಿನ ಜಾವ 5ರ ಸುಮಾರಿಗೆ ಅಂಗಡಿಗೆ ಎಂಟ್ರಿಕೊಟ್ಟಿರೋ ಕಳ್ಳರು, ಕಬ್ಬಿಣದ ರಾಡ್ ಬಳಸಿ ಅಂಗಡಿಯ ಶೆಟರ್ ಮುರಿದು ಒಳಗೆ ನುಸುಳಿದ್ದಾರೆ. 

ನಂತರ ಬಟ್ಟೆ ಶೋ ರೋಂ ಒಳಗೆ ಮೊಬೈಲ್ ಟಾರ್ಚ್ ಬಳಸಿ ಕ್ಯಾಶ್ ಬಾಕ್ಸ್​ನಲ್ಲಿದ್ದ 20 ಸಾವಿರ ನಗದು ಹಾಗೂ ಲಕ್ಷ ರೂ ಬೆಲೆಬಾಳುವ ಬ್ರಾಂಡೆಡ್ ಬಟ್ಟೆಗಳನ್ನು ದೋಚಿ ಪರಾರಿಯಾಗಿದ್ದಾರೆ. 

ಕಾವಲುಗಾರನ ಕೈಕಾಲು ಕಟ್ಟಿ ಮುತ್ತೂಟ್‌ ಫೈನಾನ್ಸ್‌ಗೆ ನುಗ್ಗಿ 7 ಕೋಟಿ ದರೋಡೆ

ಆರೋಪಿಗಳು ತಮಗಿಷ್ಟವಾದ ಬಟ್ಟೆಗಳನ್ನ ಸೆಲೆಕ್ಟ್ ಮಾಡಿ, ಬ್ರಾಂಡ್​ಗಳನ್ನ ನೋಡಿ ಬಟ್ಟೆ ಕದ್ದಿರುವುದು ಅಚ್ಚರಿ ಮೂಡಿಸಿದೆ. ಕಳವು ಮಾಡಿದ ಬ್ರಾಂಡೆಡ್ ಬಟ್ಟೆಗಳನ್ನ ಮೂಟೆಯಲ್ಲಿ ತುಂಬಿಕೊಂಡು ಆಟೋದಲ್ಲಿ ಎಸ್ಕೇಪ್ ಆಗಿದ್ದಾರೆ. 

ಆರೋಪಿಗಳ ಈ ಸಂಪೂರ್ಣ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬಟ್ಟೆ ಅಂಗಡಿ ಮಾಲೀಕ ಬಾಬು ಎಂಬುವವರು ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದಾರೆ.

Follow Us:
Download App:
  • android
  • ios