ಹಿಂದೂ ಅಂಗಡಿಯಲ್ಲಿ ಖರೀದಿಗೆ ಹೋದ ಮುಸ್ಲಿಂ ಮಹಿಳೆಗೆ ಬೆದರಿಕೆ: ರೇಣುಕಾಚಾರ್ಯ ಕೊಟ್ರು ಎಚ್ಚರಿಕೆ
ಅನ್ಯಕೋಮಿನ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ ಮುಸ್ಲಿಂ ಮಹಿಳೆಗೆ ಬೆದರಿಕೆ ಹಾಕಿರುವ ಪ್ರಕರಣವನ್ನು ಸಿಎಂ ರಾಜಕೀಯ ಕಾರ್ಯದರ್ಶಿ ಖಂಡಿಸಿದ್ದಾರೆ.
ದಾವಣಗೆರೆ, (ಮೇ.18): ಹಿಂದೂ ಅಂಗಡಿಯಲ್ಲಿ ವ್ಯಾಪಾರ ಮಾಡದಂತೆ ಯುವಕರ ಗುಂಪು ಮುಸ್ಲಿಂ ಮಹಿಳೆಗೆ ಬೆದರಿಕೆ ಹಾಕಿರುವುದಕ್ಕೆ ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳ್ಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಖಂಡಿಸಿದ್ದಾರೆ.
ದಾವಣಗೆರೆ ನಗರದ ಅಕ್ಕಮಹಾದೇವಿ ರಸ್ತೆಯಲ್ಲಿರುವ ಪ್ರತಿಷ್ಠಿತ ಜವಳಿ ಅಂಗಡಿಯಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಮುಸ್ಲಿಂ ಮಹಿಳೆ ಬಟ್ಟೆ ಖರೀದಿಸಿ ಹೋದಾಗ ಯುವಕರ ಗುಂಪು ಹಿಂದೂ ಅಂಗಡಿಯಲ್ಲಿ ವ್ಯಾಪಾರ ಮಾಡದಂತೆ ಬೆದರಿಕೆ ವಾಪಸ್ ಕಳುಹಿಸಿದೆ.
ಜಿಹಾದಿಗಳಿಗೆ ಎನ್‌ಕೌಂಟರೇ ಬೆಸ್ಟ್: ರೇಣು
ಈ ಪ್ರಕರಣ ಕುರಿತು ಟ್ವೀಟ್ ಮಾಡಿರುವ ರೇಣುಕಾಚಾರ್ಯ,ದಾವಣಗೆರೆಯ ಕೆಲವೆಡೆ ಹಿಂದೂ ಅಂಗಡಿಗೆ ಖರೀದಿಗೆ ತೆರಳಿದ್ದ ಮುಸಲ್ಮಾನ ಮಹಿಳೆಯರನ್ನ ತಡೆದು ವ್ಯಾಪಾರ ಮಾಡಬೇಡಿ ಎಂದು ನಿಲ್ಲಿಸಿ, ವಾಪಾಸ್ ಕಳಿಸುತ್ತಿರುವ ಘಟನೆ ಖಂಡನೀಯ.
ಹಿಂದೂಗಳು ಹೀಗೆ ಮುಸ್ಲಿಮರಿಂದ ಏನು ಕೊಳ್ಳುವುದಿಲ್ಲವೆಂದು ನಿಧ೯ರಿಸಿದರೆ ನಿಮ್ಮ ಪರಿಸ್ಥಿತಿಯನ್ನು ಆಲೋಚನೆ ಮಾಡಿ ಎಂದು ಪರೋಕ್ಷವಾಗಿ ಎಚ್ಚರಿಸಿದ್ದಾರೆ. ಕೊನೆಗೆ ಸಮಾಜದಲ್ಲಿ ಸ್ನೇಹ ಸೌಹಾರ್ದತೆ ಸಾಮರಸ್ಯದಿಂದಿರಿ ಎಂದು ಹೇಳಿದ್ದಾರೆ.
ಇಬ್ಬರು ಅರೆಸ್ಟ್
ಅನ್ಯಕೋಮಿನ ಅಂಗಡಿಯಲ್ಲಿ ಬಟ್ಟೆ ಖರೀದಿಸಿದ ಮುಸ್ಲಿಂ ಮಹಿಳೆಗೆ ಬೆದರಿಕೆ ಹಾಕಿದ್ದ ಇಬ್ಬರನ್ನು ದಾವಣಗೆರೆ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ಮಹಮ್ಮದ್(24) ಮತ್ತು ಫಯಾಜ್ ಅಹ್ಮದ್(32) ಬಂಧಿತ ಆರೋಪಿಗಳು. ಯುವಕರ ಗುಂಪು ಹಿಂದೂ ಅಂಗಡಿಯಲ್ಲಿ ವ್ಯಾಪಾರ ಮಾಡದಂತೆ ಮಹಿಳೆಗೆ ಬೆದರಿಕೆ ಹಾಕಿದ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಹನುಮಂತರಾಯ ತಿಳಿಸಿದ್ದಾರೆ.