Asianet Suvarna News Asianet Suvarna News

Woman Nude Video Viral: ಮಹಿಳೆಯ ನಗ್ನ ವಿಡಿಯೋ ವೈರಲ್‌ ಮಾಡಿದ ಬಿಜೆಪಿ ಮುಖಂಡ

*    ಉಮೇಶ ಸಾರಂಗ ವಿರುದ್ಧ ದೂರು ದಾಖಲು
*    ಮಹಿಳೆಯ ಬಳಿ ಬೆತ್ತಲೆಯಾಗಿರುವ ವಿಡಿಯೋ ಕೊಡುವಂತೆ ಒತ್ತಾಯಿಸುತ್ತಿದ್ದ ಆರೋಪಿ
*    ಬಿಜೆಪಿಗೆ ಮುಜುಗರ

BJP Leader  Umesh Saranga Made Woman Nude Video Viral in Social Media grg
Author
Bengaluru, First Published Dec 20, 2021, 7:35 AM IST
  • Facebook
  • Twitter
  • Whatsapp

ಹೊನ್ನಾವರ(ಡಿ.20): ಮಹಿಳೆಯೊಬ್ಬಳು(Woman)ನಗ್ನವಾಗಿ ಸ್ನಾನ ಮಾಡುತ್ತಿರುವ ವಿಡಿಯೋ ವೈರಲ್‌(Video Viral) ಮಾಡಿದ ಆರೋಪ ತಾಲೂಕು ಬಿಜೆಪಿಯ(BJP) ನಗರ ಘಟಕದ ಅಧ್ಯಕ್ಷನೋರ್ವನ ಮೇಲೆ ಕೇಳಿಬಂದಿದೆ. ತಾಲೂಕಿನಾದ್ಯಂತ ನೂರಾರು ಮಂದಿಯ ಮೊಬೈಲ್‌ನಲ್ಲಿ ಮಹಿಳೆಯ(Woman) ನಗ್ನ ವಿಡಿಯೋ(Nude Video) ಹರಿದಾಡಿದೆ. ಬಿಜೆಪಿ ಹೊನ್ನಾವರ ನಗರ ಘಟಕದ ಅಧ್ಯಕ್ಷ ಉಮೇಶ ಸಾರಂಗ(Umesh Saranga) ವಿರುದ್ಧ ಸಂತ್ರಸ್ತ ಮಹಿಳೆ ಹೊನ್ನಾವರ(Honnavara) ಪೊಲೀಸ್‌ ಠಾಣೆಗೆ ದೂರು(Complaint) ನೀಡಿದ್ದಾಳೆ.

ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಈತ, ಒಮ್ಮೆ ತನ್ನ ಆಟೋ ಹತ್ತಿದ್ದ ಮಹಿಳೆಯ ಫೋನ್‌ ನಂಬರ್‌ ಪಡೆದುಕೊಂಡು ಸಲುಗೆಯಿಂದ ನಡೆದುಕೊಳ್ಳುತ್ತಿದ್ದ ಎನ್ನಲಾಗಿದೆ. ಇಬ್ಬರ ನಡುವಿನ ಸಲುಗೆಯನ್ನು ಬಳಸಿಕೊಂಡು ಮಹಿಳೆಯ ಬಳಿ ಬೆತ್ತಲೆಯಾಗಿರುವ ವಿಡಿಯೋ ಕೊಡುವಂತೆ ಒತ್ತಾಯಿಸುತ್ತಿದ್ದ ಎನ್ನಲಾಗಿದೆ.

ಶಾಲಾ ಗ್ರೂಪ್‌ನಲ್ಲಿ ಅಶ್ಲೀಲ ವಿಡಿಯೋ.. ಮಕ್ಕಳು-ಪೋಷಕರು ಕಂಗಾಲು!

ಬ್ಲ್ಯಾಕ್‌ಮೇಲ್‌…?:

ಮೊದಮೊದಲು ಈತನ ಬೇಡಿಕೆಯನ್ನು ತಿರಸ್ಕರಿಸಿದ್ದಾಗಿ ದೂರಿನಲ್ಲಿ ಹೇಳಿಕೊಂಡಿರುವ ಸಂತ್ರಸ್ತೆ, ತಮ್ಮಿಬ್ಬರ ನಡುವಿನ ಸಲುಗೆಯನ್ನು ನಿನ್ನ ಗಂಡನಿಗೆ ಹೇಳಿ ನಿನ್ನ ಮರ್ಯಾದೆ ತೆಗೆಯುತ್ತೇನೆ ಎಂದು ಹೆದರಿಸಿದಾಗ ತಾನು ಬೆತ್ತಲೆಯಾಗಿ ಸ್ನಾನ ಮಾಡುತ್ತಿರುವ ವಿಡಿಯೋ ಮಾಡಿ ಆತನಿಗೆ ವಾಟ್ಸ್‌ಆ್ಯಪ್‌(WhatsApp) ಮೂಲಕ ಕಳುಹಿಸಿಕೊಟ್ಟಿದ್ದೆ. ಅದನ್ನು ಆತ ವೈರಲ್‌ ಮಾಡಿದ್ದಾನೆ. ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾಳೆ.

ಬಿಜೆಪಿಗೆ ಮುಜುಗರ:

ಕಾಂಗ್ರೆಸ್‌(Congress) ಆಡಳಿತಾವಧಿಯಲ್ಲಿ ತಾಪಂ ಅಧ್ಯಕ್ಷನೊಬ್ಬ ಪರಸ್ತ್ರೀ ಜತೆ ಸಿಕ್ಕಿಬಿದ್ದ ಪ್ರಸಂಗವೊಂದು ನಡೆದಿತ್ತು. ಈ ವೇಳೆ ಬಿಜೆಪಿಗರು ಆ ವಿಷಯವನ್ನು ಮುಂದಿಟ್ಟು ಅಧ್ಯಕ್ಷನನ್ನು ಹುದ್ದೆಯಿಂದ ಕೆಳಗಿಳಿಸುವಲ್ಲಿ ಸಫಲರಾಗಿದ್ದರು. ಇದೀಗ ಇಂತಹ ಘಟನೆ ಬಿಜೆಪಿಯಲ್ಲಿ ನಡೆದಿರುವುದು ಬಿಜೆಪಿ ಮುಖಂಡರು ಮುಜುಗರಕ್ಕೆ ಒಳಗಾಗುವಂತಾಗಿದೆ. ಈ ಘಟನೆಗೆ ಜಿಲ್ಲಾ ಬಿಜೆಪಿ ಕ್ರಮ ಜರುಗಿಸುತ್ತಾ ಕಾದು ನೋಡಬೇಕಿದೆ. ಇನ್ನು ನಗ್ನ ವಿಡಿಯೋ ಪ್ರಕರಣ ಮುನ್ನೆಲೆಗೆ ಬಂದ ಹಿನ್ನಲೆ ಪ್ರಕರಣದ ಆರೋಪಿ ಉಮೇಶ್‌ ಸಾರಂಗ ನಾಪತ್ತೆಯಾಗಿದ್ದಾನೆ.

ತಪ್ಪು ಮಾಡಿದವರ ಉಚ್ಚಾಟನೆ:

ಎಲ್ಲ ಪಕ್ಷದಲ್ಲಿರುವವರು ಮನುಷ್ಯರು ಉಪ್ಪು ಹುಳಿ, ಕಾರ ತಿನ್ನುವವರೇ, ರಾಜಕೀಯಕ್ಕೆ(Politics) ಬಂದಾಗ ಎಲ್ಲವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ತಪ್ಪು ಯಾರೇ ಮಾಡಿದರೂ ಸರಿ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತೇವೆ ಎಂದು ಶಾಸಕ ದಿನಕರ ಶೆಟ್ಟಿಹೇಳಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅವರು, ಮನುಷ್ಯ ಎಂದ ಮೇಲೆ ಎಲ್ಲ ವಿಷಯದಲ್ಲಿ ಆಸಕ್ತಿ ಇರುತ್ತದೆ. ಅದು ಅವರ ವೈಯಕ್ತಿಕ ವಿಚಾರ. ರಾಜಕೀಯಕ್ಕೆ ಬಂದಮೇಲೆ ಇವೆಲ್ಲವನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಅಂಥವರಿಗೆ ನಮ್ಮ ಪಕ್ಷದಲ್ಲಿ ಜಾಗವಿಲ್ಲ. ಅವರನ್ನು ಪಕ್ಷದಿಂದ ಉಚ್ಚಾಟಿಸುತ್ತೇವೆ ಎಂದರು.

ಆರೋಪಿತನನ್ನು(Accused) ಪ್ರಕರಣದಿಂದ ಬಚಾವ್‌ ಮಾಡಲು ಬೇರೆಡೆ ಶಿಫ್ಟ್‌ ಮಾಡಿರುವ ಬಗ್ಗೆ ಚರ್ಚೆಯಾಗುತ್ತಿದೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಇಂತಹ ವಿಷಯಗಳು ಬಂದಾಗ ಸಹಾಯ ಮಾಡಿದರೂ ಮಾತನಾಡುತ್ತಾರೆ. ಸಹಾಯ ಮಾಡದಿದ್ದರೂ ಮಾತನಾಡುತ್ತಾರೆ. ಆದರೆ, ವಿಷಯ ನನ್ನ ಗಮನಕ್ಕೆ ಬಂದಾಗ ಇದರಲ್ಲಿ ಹಸ್ತಕ್ಷೇಪ ಮಾಡಿಲ್ಲ. ಇದರಲ್ಲಿ ಭಾಗಿಯಾದರೆ ನಮಗೆ ಕೆಟ್ಟಹೆಸರು ಬರುತ್ತದೆ ಎಂದು ಆಪ್ತರೊಬ್ಬರು ಕರೆ ಮಾಡಿ ಸಲಹೆ ನೀಡಿದ್ದು ಬಿಟ್ಟರೆ ಪ್ರಕರಣದ ಪರವಾಗಿ ಸಹಾಯಕೋರಿ ಯಾರೂ ಕರೆ ಮಾಡಿಲ್ಲ. ಅಂಥವರಿಗೆ ಯಾವುದೇ ಕಾರಣಕ್ಕೂ ಸಹಾಯ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸೆಕ್ಸ್ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ : ಯುವಕ ಆತ್ಮಹತ್ಯೆ

ತೀರದ ದಾಹ, ಮದುವೆ ಮಂಟಪದಲ್ಲೇ ಮದುಮಗನಿಗೆ ಬಿಸಿ ಬಿಸಿ ಕಜ್ಜಾಯ!

ವರದಕ್ಷಿಣೆಗೆ (Dowry)ಹೆಚ್ಚಿನ ಡಿಮ್ಯಾಂಡ್ ಮಾಡಿದ ಮಹಾಪುರುಷನಿಗೆ ಮದುವೆ (Marriage) ಮಂಟಪದಲ್ಲಿಯೇ ಬಿಸಿ ಬಿಸಿ ಕಜ್ಜಾಯ ಸಿಕ್ಕಿದೆ. ಮದುಮಗನ ಮೇಲೆ ವಧುವಿನ (Bride) ಸಂಬಂಧಿಕರು ಎರಗಿರುವ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿತ್ತು.

ಉತ್ತರ ಪ್ರದೇಶದ (Uttar Pradesh)ಗಾಜಿಯಾಬಾದ್ ಜಿಲ್ಲೆಯ ಸಾಹಿಬಾಬಾದ್ ನಿಂದ ಘಟನೆ ವರದಿಯಾಗಿದೆ. ಮದುವೆಯಾಗಬೇಕಿದ್ದ ವರ ಹೆಚ್ಚಿನ ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಇದರಿಂದ ರೊಚ್ಚಿಗೆದ್ದ ವಧುವಿನ ಕುಟುಂಬಸ್ಥರು ಮದುವೆ ನಡೆಯುತ್ತಿದ್ದ ಸಾಹಿಬಾಬಾದ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿಯೇ ವರನಿಗೆ  ಕಜ್ಜಾಯ (Attack) ನೀಡಿದ್ದಾರೆ. ವರನಿಗೆ ಮಾತನಾಡಲು ಬಿಡದೆ ಹಲ್ಲೆ ಮಾಡಲಾಗಿದೆ. ವರನ ಸಂಬಂಧಿ ಮಹಿಳೆಯೊಬ್ಬರು ಕೊನೆಗೆ ಆತನ ರಕ್ಷಣೆ ಮಾಡಿದ್ದಾರೆ. ಇನ್ನೊಂದು ಕಡೆ ವರನ ವಿರುದ್ಧ ವರದಕ್ಷಿಣೆ ಬೇಡಿಕೆ ದೂರು ದಾಖಲಾಗಿತ್ತು. 
 

Follow Us:
Download App:
  • android
  • ios