ಮದುವೆಯಾಗುವುದಾಗಿ ನಂಬಿಸಿ ಮಗು ಕೊಟ್ಟು ಜೈಲು ಸೇರಿರೋ ಬಿಜೆಪಿ ಮುಖಂಡನ 20 ವರ್ಷದ ಪುತ್ರನಿಗಾಗಿ ಯುವತಿ ಕಣ್ಣೀರು ಹಾಕುತ್ತಿದ್ದಾಳೆ. ಅವಳು ಹೇಳಿದ್ದೇನು ಕೇಳಿ...
ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ 20 ವರ್ಷಕ್ಕೇ ಅಪ್ಪನಾದ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಮತ್ತು ಅವರ ಪುತ್ರ ಕೃಷ್ಣ ಜೆ. ರಾವ್ ವಿಷ್ಯ ಎಲ್ಲರಿಗೂ ತಿಳಿದದ್ದೇ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿರುವ ಲವ್-ಸೆ*ಕ್ಸ್-ದೋಖಾ ಪ್ರಕರಣ ಇದಾಗಿದೆ. ಈಗಾಗಲೇ ಅಪ್ಪ-ಮಗ ಇಬ್ಬರೂ ಜೈಲಿನಲ್ಲಿ ಇದ್ದಾರೆ. ತಾನು ಗರ್ಭಿಣಿಯಾದ ಬಳಿಕ ಮದುವೆಯಾಗಲು ನಿರಾಕರಿಸಿದ್ದ ಕಾರಣಕ್ಕೆ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ದೂರು ದಾಖಲಾಗ್ತಿದ್ದಂತೆಯೇ, ಜಗನ್ನಿವಾಸ್ ರಾವ್ ಮಗನನ್ನು ಮಾಯ ಮಾಡಿದ್ದರು. ಕೊನೆಗೂ ಮೈಸೂರಿನಲ್ಲಿ ಆತ ಸಿಕ್ಕು ಬಂಧಿಸಲಾಗಿದೆ. ತಪ್ಪಿಸಿಕೊಳ್ಳಲು ಸಹಾಯ ಮಾಡಿರುವ ಕಾರಣಕ್ಕೆ ಜಗನ್ನಿವಾಸ್ ರಾವ್ ಅವರನ್ನೂ ಬಂಧಿಸಿರುವ ಘಟನೆ ಇದು.
ಇದೀಗ ಘಟನೆ ನಡೆದು ಒಂದು ತಿಂಗಳಾದರೂ, ಕಂದಮ್ಮನನ್ನು ನೋಡಲು ಯಾರೂ ಬರಲಿಲ್ಲ. ತಾನೇ ಮಗುವನ್ನು ನೋಡಿಕೊಳ್ಳಬೇಕಿದೆ ಎಂದು ಯುವತಿ ಕಣ್ಣೀರು ಹಾಕುತ್ತಿದ್ದಾಳೆ. ಪಬ್ಲಿಕ್ ಇಂಪ್ಯಾಕ್ಟ್ ಮೀಡಿಯಾಗೆ ಆಕೆ ನೀಡಿರುವ ಸಂದರ್ಶನದಲ್ಲಿ, ಇದೀಗ ಮಗುವಿಗೆ ಒಂದು ತಿಂಗಳಾಗಿದೆ. ಆದರೆ, ಇನ್ನೂ ಯಾರೂ ನೋಡಲು ಬರಲಿಲ್ಲ. ಅವನು ತಪ್ಪು ಮಾಡಿದ್ದಾನೆ. ಮಗುವಿಗೆ ಯಾಕೆ ಶಿಕ್ಷೆ ಕೊಡಬೇಕು ಎಂದು ಪ್ರಶ್ನಿಸಿದ್ದಾಳೆ. ಅವರ ಮನೆಗೆ ಹೋದಾಗ, ಅವರು ರೂಡ್ ಆಗಿ ಮಾತನಾಡಿ ಕಳಿಸಿದ್ರು. ಮಗು ಅಲ್ಲಿಯೇ ಇದ್ದರೂ ಅದನ್ನು ನೋಡಲಿಲ್ಲ. ನಾನು ಅವರ ಮನೆಗೆ ಹೋಗುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ಹುಡುಗಿಯನ್ನು ಒಳಗೆ ಬರಲು ಬಿಡಬೇಡಿ ಎಂದಿದ್ದರು. ನನಗೆ ಬೇಜಾರಾಯಿತು ಎಂದಿದ್ದಾಳೆ.
ಈ ಹಿಂದೆ ಯುವತಿಯ ಅಮ್ಮ ಕೂಡ ನೊಂದು ಮಾತನಾಡಿದ್ದರು. ಆತ ಪದೇ ಪದೇ ತಮ್ಮ ಮಗಳನ್ನು ದೈಹಿಕವಾಗಿ ಬಳಸಿಕೊಳ್ಳುತ್ತಿದ್ದ. ಮದುವೆಯಾಗುವುದಾಗಿ ನಂಬಿಸಿದ್ದ. ಆದರೆ ಈಗ ಮೋಸ ಮಾಡಿದ್ದಾನೆ ಎಂದು ಹೇಳಿದ್ದರು. ಇನ್ನು ಈ ಪ್ರಕರಣದ ಬಗ್ಗೆ ಹೇಳುವುದಾದರೆ, ಇವರದ್ದು ಹೈಸ್ಕೂಲ್ನಲ್ಲಿಯೇ ಲವ್ ಶುರುವಾದದ್ದು. ಬಳಿಕ ಯುವತಿಯನ್ನು ಲೈಂಗಿಕ ಸಂಪರ್ಕಕ್ಕೆ ಆತ ಬಳಸಿಕೊಂಡಿದ್ದಾನೆ ಎನ್ನಲಾಗಿದೆ. ಮದುವೆಯಾಗುವುದಾಗಿ ಹೇಳಿ ಈ ಕ್ರಿಯೆ ನಡೆಸಿದ್ದ. ಅದನ್ನು ಯುವತಿ ನಂಬಿದ್ದಳು ಎಂಬ ಆರೋಪವಿದೆ.
ಇಂಜಿನಿಯರಿಂಗ್ ಓದುತ್ತಿದ್ದ ಕೃಷ್ಣ, 2024ರ ಅಕ್ಟೋಬರ್ 11ರಂದು ತನ್ನ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ನಡೆಸಿರುವುದಾಗಿ ಆಕೆಯೂ ಹೇಳಿಕೆ ಕೊಟ್ಟಿದ್ದಳು. ಮತ್ತೆ 2025ರ ಜನವರಿಯಲ್ಲಿ ಕೃಷ್ಣನಿಂದ ದೈಹಿಕ ಸಂಪರ್ಕ ನಡೆದಿದೆ. ಆ ಬಳಿಕ ಯುವತಿ ಗರ್ಭವತಿಯಾಗಿದ್ದಾಳೆ. ಆದರೆ, ಮದುವೆಯಾಗಲು ಕೃಷ್ಣ ನಿರಾಕರಿಸಿದ್ದಾನೆ ಎನ್ನಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಯುವತಿಯ ಪರವಾಗಿ ಬಿಜೆಪಿ ಕೂಡ ನಿಂತಿದೆ. ಬಿಜೆಪಿ ಹಾಗೂ ಪರಿವಾರ ಸಂಘಟನೆಯ ನಿಲುವು ಸ್ಪಷ್ಟಪಡಿಸಲಾಗಿದ್ದು, ಸಂತ್ರಸ್ತೆಯ ಪರವಾಗಿ ತಾವು ನಿಲ್ಲುವುದಾಗಿ ಹೇಳಲಾಗಿದೆ.
