ಹೆಲ್ಕೆಟ್ ಹಾಕದೆ ಬೈಕ್‌ ಚಾಲನೆ | ಫೋಟೋ ತೆಗೆದ ಮುಖ್ಯ ಪೇದೆ ಮೊಬೈಲ್ ಕಸಿದು ಪರಾರಿ ಯತ್ನ । ಬೆನ್ನಟ್ಟಿದಾಗ ಬೆರಳು ಕಚ್ಚಿ ನಿಂದನೆ, ಸೆರೆ

ಬೆಂಗಳೂರು(ಫೆ.13): ಹೆಲೈಟ್ ಧರಿಸದೆ ಬರುವಾಗ ಫೋಟೋ ತೆಗೆಯಲು ಮುಂದಾದ ಕರ್ತವ್ಯ ನಿರತ ಸಂಚಾರ ಪೊಲೀಸ್ ಹೆಡ್‌ಕಾನ್‌ಸ್ಟೇಬಲ್‌ಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆರಳು ಕಚ್ಚಿ, ಹಲ್ಲೆಗೈದು ಬೆದರಿಕೆ ಹಾಕಿದ ದ್ವಿಚಕ್ರ ವಾಹನ ಸವಾರನನ್ನು ವಿಲ್ಸನ್‌ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ.

ಬಿಟಿಎಂ ಲೇಔಟ್‌ನ ಸೈಯದ್ ಸೂಫಿ (28) ಬಂಧಿತ. ಆರೋಪಿ ವಿರುದ್ಧ ವಿಲ್ಸನ್‌ ಗಾರ್ಡನ್ ಸಂಚಾರ ತಾಣೆ ಮುಖ್ಯಪೇದೆ ಸಿದ್ರಾಮೇಶ್ವರ ಕೌಜಲಗಿ ನೀಡಿದ ದೂರಿನ ಮೇರೆಗೆ ವಿಲ್ಸನ್‌ ಗಾರ್ಡನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದಾರೆ.

ಚಿಕ್ಕಬಳ್ಳಾಪುರ: ತರಕಾರಿ ತರಲು ಹೋದ ಮಗಳು ಕೊಳೆತ ಶವವಾಗಿ ಸಿಕ್ಕಳು

ಏನಿದು ಘಟನೆ?:

ಎಲ್ಸನ್ ಗಾರ್ಡನ್ ಸಂಚಾರ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಗಳಾದ ಸಿದ್ರಾಮೇಶ್ವರ ಕೌಜಲಗಿ ಮತ್ತು ಲೋಕೇಶ್ ಅವರು ಸೋಮವಾರ ಡಾ| ಮರೀಗೌಡ ರಸ್ತೆಯ 10ನೇ ಕ್ರಾಸ್ ಜಂಕ್ಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಆರೋಪಿ ಸೈಯದ್ ಸಫಿ ಹೆಲೈಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡಿಕೊಂಡು ಅದೇ ಮಾರ್ಗದಲ್ಲಿ ಬಂದಿದ್ದಾನೆ. ಇದನ್ನು ನೋಡಿದ ಸಿದ್ರಾಮೇಶ್ವರ ಕೌಜಲಗಿ ಅವರು ತಮ್ಮ ಮೊಬೈಲ್ ಫೋನ್‌ನಲ್ಲಿ ಫೋಟೋ ಕ್ಲಿಕ್ಕಿಸಿ ಫೀಲ್ಡ್‌ ವೈಯಲೇಷನ್ ರಿಪೋರ್ಟ್ (ಎಫ್ ಟಿವಿಆರ್) ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಇದನ್ನು ನೋಡಿದ ಆರೋಪಿ ಸೈಯದ್ ಸಹಿ, ಸಿದ್ರಾಮೇಶ್ವರ ಕೌಜಲಗಿ ಅವರ ಬಳಿ ಬಂದು, 'ಬಯ್, ನನ್ನ ಫೋಟೋ ಏಕೆ ತೆಗೆಯುತ್ತಿರುವೆ? ಬಿಚ್ಚಿಕೊಡುವೆ. ಎಷ್ಟು ಕೇಸ್ ಹಾಕುವೆ ಹಾಕು' ಎಂದು ಮೊಬೈಲ್ ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ, ಕೌಜಲಗಿ ಮತ್ತು ಲೋಕೇಶ್ ಅವರು ಬೆನ್ನಟ್ಟಿ ಸೈಯದ್ ಸೈಯದ್ ಸಫಿಯನ್ನು ಹಿಡಿದು ನಿಲ್ಲಿಸಿದ್ದಾರೆ.

ರಾಯಚೂರು: ಸಹಾಯಕ ಆಯುಕ್ತರ ನೌಕರ ಆತ್ಮಹತ್ಯೆ, ಕಾರಣ ನಿಗೂಢ?

ಕಿಯೋಸ್ಕ್‌ಗೆ ಬೆಂಕಿ ಹಾಕುವುದಾಗಿ ಬೆದರಿಕೆ

ಆರೋಪಿಯು ದ್ವಿಚಕ್ರ ವಾಹನವನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ, ಕೂಗಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸಿದ್ದಾನೆ. ಈ ವೇಳೆ ದ್ವಿಚಕ್ರ ವಾಹನ ಪಕ್ಕಕ್ಕೆ ನಿಲಿಸು ಎಂದು ಕೌಜಲಗಿ ಹೇಳಿದಾಗ, ಆರೋಪಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ವಿಲ್ಸನ್ ಗಾರ್ಡನ್ 10ನೇ ಕ್ರಾಸ್‌ನಲ್ಲಿರುವ ಅಂಬೋಲಾ (ಕಿಯೋಸ್) ಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದಾನೆ.

ಕೈ ಬೆರಳು ಕಚ್ಚಿ ಗಾಯ: 

ಮುಖ್ಯ ಪೇದೆ ಕೌಜಲಗಿ ಅವರ ಎಡಗೈ ಹಿಡಿದು ಬೆರಳನ್ನು ಕಚ್ಚಿ ರಕ್ತಗಾಯ ಗೊಳಿಸಿದ್ದಾನೆ. ಆದರೂ ಕೌಜಲಗಿ ಅವರು ಆರೋಪಿ ಸಫಿಯನ್ನು ಹಿಡಿದು, ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ಕರೆತಂದು ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.