Asianet Suvarna News Asianet Suvarna News

ಚಿಕ್ಕಬಳ್ಳಾಪುರ: ತರಕಾರಿ ತರಲು ಹೋದ ಮಗಳು ಕೊಳೆತ ಶವವಾಗಿ ಸಿಕ್ಕಳು

ಮನೆಯಲ್ಲಿ ತರಕಾರಿ ತರುವುದಾಗಿ ಹೇಳಿ ಹೋದ ಮಗಳು ನಾಪತ್ತೆಯಾಗಿದ್ದಾಳೆ. ಕಾಣೆಯಾದ ಮಹಿಳೆ ಹುಡುಕಿ ಹೊರಟ ಪೊಲೀಸರಿಗೆ 5 ದಿನದ ಬಳಿಕ ಕೊಳೆತ ಸ್ಥಿತಿಯಲ್ಲಿ ಶವವಾಗಿ ಸಿಕ್ಕಿದ್ದಾಳೆ.

Chikkaballapur lady missing and she dead body found after 5 days in lover house sat
Author
First Published Feb 11, 2024, 1:39 PM IST

ಚಿಕ್ಕಬಳ್ಳಾಪುರ (ಫೆ.11): ಚಿಕ್ಕಬಳ್ಳಾಪುರದಲ್ಲಿ ವಾಸವಾಗಿದ್ದ ಮಹಿಳೆ ಸಂಜೆ ವೇಳೆ ಮನೆಗೆ ತರಕಾರಿ ತರುತ್ತೇನೆ ಎಂದು ಅಪ್ಪನಿಗೆ ಹೇಳಿ ಹೊರಗೆ ಹೋದವಳು ಬಂದೇ ಇಲ್ಲ. ಮಗಳು ಕಾಣೆಯಾಗಿದ್ದಾಳೆ ಎಂದು ತಂದೆ ದೂರು ನೀಡಿದ್ದಾರೆ. ಜಾಡು ಹಿಡಿದ ಪೊಲೀಸರಿಗೆ ಮತ್ತೊಂದು ಏರಿಯಾದ ಕೋಣೆಯೊಂದರಲ್ಲಿ ದೀಪಾ ಕೊಲೆಯಾಗಿ, ಕೊಳೆತ ಶವವಾಗಿ ಸಿಕ್ಕಿದ್ದಾಳೆ. 

ದೀಪಾ ಹಾಗೂ ದಿವಾಕರ್ ನಡುವೆ ಅನೈತಿಕ ಸಂಬಂಧವಿತ್ತು ಎಂದು ಹೇಳಲಾಗುತ್ತಿದೆ. ಇವರಿಬ್ಬರ ನಡುವೆ ಹಣ ಹಾಗೂ ಸಂಬಂಧದ ವಿಚಾರಕ್ಕಾಗಿ ಕೊಲೆ ನಡೆದಿದೆ ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ಪೊಲೀಸರ ತನಿಖೆ ನಂತರವೇ ಸತ್ಯಾಂಶ ಹೊರ ಬೀಳಲಿದೆ. ಕೊಲೆಯಾದ ಮಹಿಳೆಯನ್ನು ಚಿಕ್ಕಬಳ್ಳಾಪುರ ನಗರದ ವಾಪಸಂದ್ರದ ನಿವಾಸಿ ದೀಪಾ(35) ಎಂದು ಗುರುತಿಸಲಾಗಿದೆ. 

ಅವನಿಗಿತ್ತು ತನ್ನ ಹೆಂಡತಿಯನ್ನ ಕೊಂದ ಅನುಭವ..! ಸೂಸೈಡ್ ಅಂತ ಬಂದ್ರು, ಆದ್ರೆ ಅದು ಕೊಲೆ..!

ದೀಪಾ ಕಳೆದ 5 ದಿನಗಳಿಂದ ಕಾಣೆಯಾಗಿದ್ದಳು. ಈ ಬಗ್ಗೆ ಚಿಕ್ಕಬಳ್ಳಾಪುರ ನಗರ ಠಾಣೆಯಲ್ಲಿ ಆಕೆಯ ತಂದೆ ಸುಬ್ಬಾನಾಯ್ಡು ದೂರು ನೀಡಿದ್ದರು. ಇನ್ನು ದೀಪಾಳನ್ನು ಹುಡುಕಿ ಹೊರಟ ಪೊಲೀಸರಿಗೆ ಚಾಮರಾಜಪೇಟೆಯ ದಿವಾಕರ್ ಎಂಬುವವರ ಬಾಡಿಗೆ ಕೋಣೆಯಲ್ಲಿ ಬರ್ಬರವಾಗಿ ಕೊಲೆಯಾಗಿ ಕೊಳೆತ ಸ್ಥಿತಿಯಲ್ಲಿ ಸಿಕ್ಕಿದ್ದಾಳೆ. ಫೆ.7ರಂದೇ ದೀಪಾಳನ್ನು ಚಾಕುವಿನಿಂದ ಕತ್ತು ಸೀಳಿ ಬರ್ಬರವಾಗಿ ಹತ್ತೆ ಮಾಡಲಾಗಿದೆ. ಆದರೆ, ನಾಲ್ಕು ದಿನಗಳ ನಂತರ ಘಟನೆ ಬೆಳಕಿಗೆ ಬಂದಿದೆ. 

ಇನ್ನು ದಿವಾಕರ್ ರೂಮಿನಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣಕ್ಕೆ ಸ್ಥಳೀಯರು ಕೂಡ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕಾಗಮಿಸಿದ ಪೊಲೀಸರು ಮನೆಯ ಬಾಗಿಲು ಒಡೆದು ನೋಡಿದ್ದಾರೆ. ಈ ವೇಳೆ ದೀಪಾಳ ಮೃತದೇಹವು ಕೊಳತೆ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್‌ಪಿ ಡಿ.ಎಲ್.ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ರೂಮಿನ ಮಾಲೀಕರಿಂದ ಹೆಚ್ಚಿನ ಮಾಹಿತಿ ಪಡೆದು ವಿಚಾರಣೆಯನ್ನು ನಡೆಸುತ್ತಿದ್ದಾರೆ. ಇದಾದ ನಂತರ ಬಂದು ನೋಡಿದಾಗ ಕಾಣೆಯಾದ ಪ್ರಕರಣಕ್ಕೂ ಕೊಲೆಯಾದ ಪ್ರಕರಣಕ್ಕೂ ಸಂಬಂಧ ಸಿಕ್ಕಿದೆ. 

ಕಾಂಗ್ರೆಸ್ ಹೈಕಮಾಂಡ್‌ಗೆ ಗುಲಾಮನಲ್ಲ, ನಾನು ವಿಧೇಯನಾಗಿದ್ದೇನೆ ಅಷ್ಟೇ: ಸಚಿವ ಕೆ.ಎನ್. ರಾಜಣ್ಣ

ಅನೈತಿಕ ಸಂಬಂಧ ವಿಚಾರ ಕೊಲೆ ಆಗಿರುವ ಶಂಕೆ ವ್ಯಕ್ತವಾಗಿದೆ. ದಿವಾಕರ್ ಹಾಗೂ ಸುರೇಶ್ ಎಂಬುವವರಿಂದ ಕೊಲೆ ಮಾಡಿರುವ ಅನುಮಾನ ಕಂಡುಬಂದಿದೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಈ ಘಟನೆಯ ಕುರಿತು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಾಗಿದೆ. ಇನ್ನು ದೂರು ನೀಡಿದ ದೀಪಾಳ ತಂದೆ ಹಾಗೂ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

Follow Us:
Download App:
  • android
  • ios