Asianet Suvarna News Asianet Suvarna News

ಬಿಬಿಎಂಪಿ ಕಸದ ಲಾರಿಗೆ ಮತ್ತೊಂದು ಬಲಿ: ಮುಗಿಲು ಮುಟ್ಟಿದ ಪೋಷಕರ ಆಕ್ರಂದನ

ನಿಂತಿದ್ದ ಬಿಬಿಎಂಪಿ ಕಸದ ಲಾರಿಗೆ ಬೈಕ್ ಡಿಕ್ಕಿಯಾಗಿದ್ದು, ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ತಡರಾತ್ರಿ 12 ಗಂಟೆ ಸುಮಾರಿಗೆ ಜಯನಗರ ಮೆಟ್ರೋ ನಿಲ್ದಾಣದ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. 

bike collided bbmp garbage lorry and one died at bengaluru gvd
Author
First Published Sep 25, 2023, 8:05 AM IST

ಬೆಂಗಳೂರು (ಸೆ.25): ನಿಂತಿದ್ದ ಬಿಬಿಎಂಪಿ ಕಸದ ಲಾರಿಗೆ ಬೈಕ್ ಡಿಕ್ಕಿಯಾಗಿದ್ದು, ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ತಡರಾತ್ರಿ 12 ಗಂಟೆ ಸುಮಾರಿಗೆ ಜಯನಗರ ಮೆಟ್ರೋ ನಿಲ್ದಾಣದ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದೆ. ಯಶವಂತ್ (26) ಮೃತ ದುರ್ದೈವಿ. ಮೆಟ್ರೋ ನಿಲ್ದಾಣದ ಕೆಳಭಾಗದಲ್ಲಿ ಅವೈಜ್ಞಾನಿಕವಾಗಿ ಲಾರಿ ಚಾಲಕರು ಪಾರ್ಕಿಂಗ್ ಮಾಡಿದ್ದರು.  

ಈ ವೇಳೆ ಬನಶಂಕರಿ ಮಾರ್ಗದಿಂದ ಸೌತ್ ಎಂಡ್ ಸರ್ಕಲ್ ಕಡೆ ಹೊರಟಿದ್ದ ಮೃತ ಯುವಕ. ಹೀಗಿರುವಾಗ ಜಯನಗರ ಮೆಟ್ರೋ ನಿಲ್ದಾಣದ ಸ್ಥಳದಲ್ಲಿ ವೇಗವಾಗಿ ಬಂದಿದ್ದು ನಿಯಂತ್ರಣ ಸಿಗದೆ ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಿದ್ದು, ಅದರ ರಭಸಕ್ಕೆ ಲಾರಿ ಹಿಂಬದಿ ಬೈಕ್ ಸಮೇತ ಯುವಕ ಸಿಲುಕಿಕೊಂಡಿದ್ದಾನೆ.  ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಜಯನಗರ ಸಂಚಾರಿ ಪೊಲೀಸರು ದೌಡಾಯಿಸಿದ್ದು, ಸುಮಾರು 3-4 ಗಂಟೆಗಳ ಕಾಲ ಬಾಡಿ ಹೊರತೆಗೆಯಲು ಪೊಲೀಸರಿಂದ ಹರಸಾಹಸಪಟ್ಟಿದ್ದಾರೆ. 

ಮೃತ ಯುವಕ ಯಲಚೇನಹಳ್ಳಿ ನಿವಾಸಿಯಾಗಿದ್ದು ಇತ್ತೀಚೆಗಷ್ಟೇ ಮದುವೆಯಾಗಿದ್ದ. ಸತತ ಪ್ರಯತ್ನದ ಬಳಿಕ ಬೆಳಗ್ಗಿನ ಜಾವ ಮೂರು ಗಂಟೆಗೆ ಪೊಲೀಸರು ಮೃತದೇಹ ಹೊರತೆಗೆದರು. ಮೃತದೇಹ ಹೊರತೆಗೆಯುತ್ತಲೇ ಸ್ಥಳಕ್ಕೆ ಮೃತ ಯಶವಂತ್ ತಾಯಿ ಮತ್ತು ಸಹೋದರ ಧಾವಿಸಿದ್ದು, ಯಶವಂತ್ ಸ್ಥಿತಿ ಕಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.ಬಳಿಕ ಆ್ಯಂಬುಲೆನ್ಸ್ ಮೂಲಕ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. 

ಕಾವೇರಿ ವಿಷಯದಲ್ಲಿ ಪ್ರಧಾನಿ ಮೋದಿ ಮೌನ ಸರಿಯಲ್ಲ: ಸಚಿವ ರಾಮಲಿಂಗಾರೆಡ್ಡಿ

ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಯಶವಂತ್, ಆರು ತಿಂಗಳ ಹಿಂದಷ್ಟೇ ಹೊಸ ಕಂಪನಿ ಸೇರಿದ್ದ. ಹೆಂಡತಿ ಮತ್ತು ಎಂಟು ತಿಂಗಳ ಮಗುವನ್ನು ಅಗಲಿರುವ ಯಶವಂತ್, ಯಾವುದೇ ಬ್ಯಾಡ್ ಹ್ಯಾಬಿಟ್ ಇರೋ ಹುಡುಗ ಅಲ್ಲ ಎಂದು ಅವನ ಸ್ನೇಹಿತರು ಪೊಲೀಸರಿಗೆ ಹೇಳಿದ್ದಾರೆ. ಆ ಏರಿಯಾಕೆ ಯಶವಂತ್ ಯಾಕೆ ಬಂದ ಅನ್ನುವುದೂ ಸ್ನೇಹಿತರಿಗೆ ಗೊಂದಲವಾಗಿದ್ದು, ಯಾರೋ ಬೆನ್ನಟ್ಟಿ ಬಂದಿರಬಹುದು ಅಂತ ಆತನ ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios