ಮಾದಕ ವಸ್ತು ಮಾರಾಟ ವ್ಯವಹಾರದಿಂದಲೇ ಕೋಟಿಗಟ್ಟಲೆ ಆಸ್ತಿ ಗಳಿಸಿದ್ದ ಬಿಹಾರ ಮೂಲದ ಅಂಜಯ್ ಕುಮಾರ್ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿರುವ ಯಾವ ಆಸ್ತಿಯನ್ನೂ ತನ್ನ ಹೆಸರಿ ನಲ್ಲಿ ಹೊಂದಿರಲಿಲ್ಲ

ಬೆಂಗಳೂರು (ಸೆ.05): ಮಾದಕ ವಸ್ತು ಮಾರಾಟ ವ್ಯವಹಾರದಿಂದಲೇ ಕೋಟಿಗಟ್ಟಲೆ ಆಸ್ತಿ ಗಳಿಸಿದ್ದ ಬಿಹಾರ ಮೂಲದ ಅಂಜಯ್ ಕುಮಾರ್, ಪೊಲೀಸರು ಮುಟ್ಟುಗೋಲು ಹಾಕಿಕೊಂಡಿರುವ ಯಾವ ಆಸ್ತಿಯನ್ನೂ ತನ್ನ ಹೆಸರಿ ನಲ್ಲಿ ಹೊಂದಿರಲಿಲ್ಲ ಎಂಬ ಸಂಗತಿ ಬಯಲಾಗಿದೆ. ಡ್ರಗ್ಸ್ ದಂಧೆಯಿಂದ ಆರೋಪಿ ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿಯಲ್ಲಿ ಮೂರು ನಿವೇಶನ, ಫ್ಲ್ಯಾಟ್ ಖರೀದಿ ಮಾಡಿದ್ದ. ಈ ಆಸ್ತಿಗಳೆಲ್ಲ ಪತ್ನಿ ಶೀಲಾದೇವಿ ಹೆಸರಿನಲ್ಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. 

ಡ್ರಗ್ಸ್ ದಂಧೆಯಲ್ಲಿ ಈತ ಚರಾಸ್ತಿಗಳನ್ನು ಸಂಪಾ ದನೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಡ್ರಗ್ಸ್ ದಂಧೆ ಹೊರತುಪಡಿಸಿ ಯಾವುದೇ ವ್ಯವಹಾರದಲ್ಲಿ ಆರೋಪಿ ತೊಡಗಿರಲಿಲ್ಲ. ಇನ್ನು ಸಂಬಂಧಿಕರ ಹೆಸರಿನಲ್ಲಿಯೂ ಆರೋಪಿ ಆಸ್ತಿ ಸಂಪಾದನೆ ಮಾಡಿದ್ದಾನೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಆರೋಪಿ ಆಸ್ತಿ ಬಗ್ಗೆ ಆದಾಯ ತೆರಿಗೆ ಇಲಾಖೆಗೂ ಮಾಹಿತಿ ನೀಡಲಾಗಿದೆ ಎಂದು ಐಜಿಪಿ ಚಂದ್ರಶೇಖರ್ ಸುದ್ದಿಗಾರರಿಗೆ ತಿಳಿಸಿದರು.

ಡ್ರಗ್‌ ಪೆಡ್ಲರ್‌ ಆಸ್ತಿ ಜಪ್ತಿ: ರಾಜ್ಯದಲ್ಲಿ ಇದೇ ಮೊದಲು!

2016ರಲ್ಲಿ ಬೆಂಗಳೂರಿಗೆ: ಆರೋಪಿ ಅಂಜಯ್ ಕುಮಾರ್ ಮೂಲತಃ ಬಿಹಾರ ರಾಜ್ಯದ ಆರಾದ್ ಮಸಾದ್ ಗ್ರಾಮದವನಾಗಿದ್ದಾನೆ. 2016ರಲ್ಲಿ ಅಂಜಯ್ ಕುಮಾರ್ ಕುಟುಂಬ ಸಮೇತ ರಾಜ್ಯಕ್ಕೆ ಬಂದು ಬೆಂಗಳೂರಿನ ಹೊರ ವಲಯದಲ್ಲಿ ನೆಲೆಸಿದ್ದ. ಪೊಲೀಸರ ಕೈಗೆ ಸಿಗದೇ ಮಾದಕ ವಸ್ತು ಮಾರಾಟ ದಂಧೆಯಲ್ಲಿ ತೊಡಗಿದ್ದ. ಈತನ ವಿರುದ್ಧ ಬಿಹಾರ, ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಮಾದಕ ವಸ್ತು ಮಾರಾಟ ದಂಧೆ ಪ್ರಕರಣಗಳಿವೆ. ಬಿಹಾರದಲ್ಲಿ 2009ರಲ್ಲಿ ಡ್ರಗ್ಸ್ ಪ್ರಕರಣದಲ್ಲಿ ನಾಲ್ಕು ವರ್ಷ ಶಿಕ್ಷೆಗೆ ಒಳಗಾಗಿದ್ದ. ಜೈಲಿನಿಂದ ಹೊರ ಬಂದ ಬಳಿಕ ಅಂಜಯ್ ಕುಮಾರ್ ಕುಟುಂಬ ಸಮೇತ ಕರ್ನಾಟಕಕ್ಕೆ ಬಂದು ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನೆಲೆಸಿದ್ದ. 

ಒಡಿಶಾದ ಶೇಖರ್ ಹಾಗೂ ವಿಶಾಖಪಟ್ಟಣದ ಜಾಧವ್ ಅಲಿಯಾಸ್ ಮಟ್ಟಿ ಎಂಬಾತನ ಮೂಲಕ ಗಾಂಜಾ ತರಿಸಿಕೊಂಡು ನಗರದ ಹೊರ ವಲಯದ ಹಾಗೂ ನಗರದಲ್ಲಿ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ. ತನ್ನದೇ ಆದ ವ್ಯವಸ್ಥಿತ ಜಾಲ ಸೃಷ್ಟಿಸಿಕೊಂಡಿದ್ದ. ಆರೋಪಿ ಐದಾರು ವರ್ಷಗಳಿಂದ ರಾಜ್ಯದಲ್ಲಿ ಈ ಕೃತ್ಯದಲ್ಲಿ ಭಾಗಿಯಾಗಿದ್ದ. ಅಂಜಯ್‌ಕುಮಾರ್ ತನ್ನ ಸಹೋದರನ ಪುತ್ರ ರಾಹುಲ್ ಹಾಗೂ ತನ್ನ ಕಾರು ಚಾಲಕ ಮುರಳೀಧರ್ ನನ್ನು ಬಳಸಿಕೊಂಡು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಏನೇನು ಆಸ್ತಿ ಜಪ್ತಿ? ಬ್ಯಾಗಡದೇನಹಳ್ಳಿಯಲ್ಲಿ 30ಗಿ40 ನಿವೇ ಶನ 60ಗಿ40ಯ ಎರಡು ನಿವೇಶನ, ಸತ್ಕೀರ್ತಿ ಅಪಾರ್ಟ್‌ಮೆಂಟ್‌ನಲ್ಲಿ ಒಂದು ಫ್ಲ್ಯಾಟ್ ನ್ನು ಖರೀದಿ ಮಾಡಿದ್ದ. ಈ ಆಸ್ತಿಗಳೆಲ್ಲ ಪತ್ನಿ ಶೀಲಾದೇವಿ ಹೆಸರಿನಲ್ಲಿವೆ. ಸ್ಕಾರ್ಪಿಯೋ ಕಾರು, ಜಂಟಿ ಬ್ಯಾಂಕ್ ಖಾತೆಯಲ್ಲಿದ್ದ ₹9.75 ಲಕ್ಷ ಹಣ ಜಪ್ತಿ ಮಾಡಲಾಗಿದೆ.

ರಾಜ್ಯಕ್ಕೆ ಬಂದಾಗಲೇ ತಪ್ಪಿ ಸಿಕೊಂಡಿದ ್ದ! ಐದು ವರ್ಷಗಳ ಹಿಂದೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿ ಕೂದಲೆಳೆಯ ಅಂತರದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡಿದ್ದ. 2019ರಲ್ಲಿ ಅಂಜಯ್‌ಕುಮಾರ್ ಸಿಂಗ್‌ನ ಸಹಚರರನ್ನು ಬಂಧಿಸಿ, ಇನ್‌ಸ್ಪೆಕ್ಟರ್ ಬಿ.ಕೆ.ಶೇಖರ್ ಅವರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಬಳಿಕ ಎಸ್ಪಿ ಡಾ.ಕೆ.ವಂಶಿಕೃಷ್ಣ ಹಾಗೂ ಎಸ್ಪಿ ಲಕ್ಷ್ಮೀ ಗಣೇಶ್ ಅವರ ನೇತೃತ್ವದಲ್ಲಿ ಡಿವೈಎಸ್ಪಿ ಮಲ್ಲೇಶ್ ಹಾಗೂ ಶೇಖರ್ ಅವರು ಅಂಜಯ್ ಆಸ್ತಿ ಬಗ್ಗೆ ಮಾಹಿತಿ ಕಲೆ ಹಾಕತೊಡಗಿದ್ದರು. ಈ ವೇಳೆ ಆರೋಪಿ ಬಳಿ ಯಾವುದೇ ಆದಾಯದ ಮೂಲ ಇಲ್ಲದಿರುವುದು ಕಂಡು ಬಂದಿತ್ತು. ಆದರೆ ಈಗ ಇಷ್ಟು ಆಸ್ತಿಯನ್ನು ಡ್ರಗ್‌ಸ್ ದಂಧೆಯಿಂದ ಸಂಪಾದಿಸಿರುವುದು ಗೊತ್ತಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದರು.