Asianet Suvarna News Asianet Suvarna News

ಪ್ರಿಯತಮೆಯ ಮದುವೆಯಲ್ಲಿ ಕತ್ತು ಕೊಯ್ದುಕೊಂಡ ಮಾಜಿ ಪ್ರಿಯಕರ: ಮುರಿದು ಬಿದ್ದ ಮದುವೆ

ಪ್ರೀತಿಸಿದ ಹುಡುಗಿಯ ಮದುವೆ ತಡೆಯಲು ಮದುವೆ ಮಂಟಪಕ್ಕೆ ನುಗಿದ್ದ ಪಾಗಲ್‌ ಪ್ರೇಮಿ
ಮದುವೆ ನಿಲ್ಲಿಸಲು ಬಂದವನಿಗೆ ಥಳಿಸಿದ ಹುಡುಗಿ ಕುಟುಂಬಸ್ಥರು
ಗಲಾಟೆಯನ್ನು ನೋಡಿ ಮದುವೆಯನ್ನೇ ಮುರಿದುಕೊಂಡ ವಧು
 

Bengaluru young man slit his throat on lover Marriage hall sat
Author
First Published Mar 16, 2023, 7:07 PM IST

ಬೆಂಗಳೂರು (ಮಾ.16): ಪ್ರೀತಿಸಿದ ಯುವತಿ ಬೆರೊಬ್ಬನ ಜೊತೆ ಮದುವೆ ಆಗುತ್ತಿರುವುದನ್ನು ತಡೆಯಲು ಗಲಾಟೆ ಮಾಡಿದ ಪಾಗಲ್‌ ಪ್ರೇಮಿಯೊಬ್ಬ, ತನ್ನ ಪ್ರೇಯಸಿಯ ಮದುವೆ ನಡೆಯುತ್ತಿದ್ದ ಮಂಟಪದ ಮುಂದೆಯೇ ಕತ್ತು ಕೊಯ್ದುಕೊಂಡು ಮದುವೆಯನ್ನು ನಿಲ್ಲಿಸಿದ ಘಟನೆ ಮದುವೆ ನಡೆಯುತ್ತಿದ್ದ ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಮಣ್ಯದ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ಹೌದು, ಪ್ರೀತಿಸಿದ ಹುಡುಗಿ ಅಥವಾ ಹುಡುಗ ತನಗೇ ಬೇಕು ಎಂದು ಹುಚ್ಚಾಟ ಮಾಡುವುದನ್ನು ನಾಡು ನೋಡಿದ್ದೇವೆ. ಇನ್ನು ಹಲವು ಪ್ರಕರಣಗಳಲ್ಲಿ ಮದುವೆಯನ್ನು ನಿಲ್ಲಿಸಲಾಗದೇ ಮಮನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳೂ ನಡೆದಿವೆ. ಆದರೆ, ಇಲ್ಲೊಬ್ಬ ಪಾಗಲ್‌ ಪ್ರೇಮಿ ತಾನು ಪ್ರೀತಿಸಿದ ಹುಡುಗಿ ತನ್ನನ್ನು ನಿರಾಕರಿಸಿ ಬೇರೊಬ್ಬ ಹುಡುಗನ ಜೊತೆ ಮದುವೆ ಆಗಿವುದನ್ನು ಸಹಿಸಿಕೊಳ್ಳದೇ ಮಾಡಬಾರದ ಅವಾಂತರ ಮಾಡಿದ್ದಾನೆ. ಮದುವೆ ನಡೆಯುತ್ತಿದ್ದ ಮಂಟಪಕ್ಕೆ ತೆರಳಿ ತನ್ನ ಪ್ರೇಯಸಿಯ ಮುಂದೆಯೇ ಕತ್ತು ಕೊಯ್ದುಕೊಂಡಿದ್ದಾನೆ. 

ಬೆಳ್ಳಿ ತೆರೆಮೇಲೆ ಬರಲಿದ್ದಾರೆ ಉರಿಗೌಡ ನಂಜೇಗೌಡ: ಒಕ್ಕಲಿಗ ವೀರರ ಬಗ್ಗೆ ಮುನಿರತ್ನ ಸಿನಿಮಾ ನಿರ್ಮಾಣ

ಮದುವೆ ಮಂಟಪದ ಎದುರೇ ಕತ್ತು ಕೊಯ್ದುಕೊಂಡ:  ದೊಡ್ಡ ಬಳ್ಳಾಪುರದ ಘಾಟಿ ಸುಬ್ರಮಣ್ಯದ ಕಲ್ಯಾಣಮಂಟಪದಲ್ಲಿ ಹುಚ್ಚಾಟ ಮಾಡಿದ ಯುವಕನನ್ನು ಬೆಂಗಳೂರು ಮೂಲದ ನಿತೀಶ್ ಎಂದು ಗುರುತಿಸಲಾಗಿದೆ. ತಾನು ಪ್ರೀತಿಸಿದ ಹುಡುಗಿ ಬೇಕು ಕಲ್ಯಾಣ ಮಂಟಪದ ಬಳಿ ಬಂದು ಮದುವೆ ನಿಲ್ಲಿಸಲು ಗಲಾಟೆ ಮಾಡಿದ್ದಾನೆ. ಈ ವೇಳೆ ಹುಡುಗಿ ಕುಟುಂಬಸ್ಥರು ಆತನನ್ನು ಥಳಿಸಿ ಮಂಟಪದಿಂದ ಹೊರಗೆ ಹಾಕಿದ್ದಾರೆ. ನಂತರ, ಹುಡುಗಿ ಮದುವೆ ನಡೆಯುತ್ತಿದ್ದ ಮಂಟಪದ ಎದುರಿನಲ್ಲೇ ಚಾಕುವನ್ನು ತೆಗೆದುಕೊಂಡು ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. 

ಮುರಿದು ಬಿದ್ದ ಮದುವೆ: ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ಕರೆತಂಡು ವಿಕ್ಟೋರಿಯಾ ಆಸ್ವತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಗಲಾಟೆಯ ಹಿನ್ನೆಲೆಯಲ್ಲಿ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಮುರಿದು ಬಿದ್ದಿದೆ. ನಂತರ ಕೆಲವೇ ಕ್ಷಣಗಳಲ್ಲಿ ಮದುವೆ ಮಂಟಪವನ್ನು ಗಂಡು ಮತ್ತು ಹೆಣ್ಣಿನ ಕಡೆಯವರು ಖಾಲಿ ಮಾಡಿಕೊಂಡು ತೆರಳಿದ್ದಾರೆ. ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

 

ಬೆಂಗಳೂರಲ್ಲಿ ಹೆತ್ತ ಮಗಳನ್ನೇ ಕೊಲೆಗೈದ ದುಷ್ಟ ತಂದೆ: ದೊಣ್ಣೆಯಿಂದ ಹಲ್ಲೆ

ಜೆ.ಜೆ.ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದ ಯುವತಿ: ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಅವರು, ಇವತ್ತು ಯುವತಿಯ ಮದುವೆ ಆಗಬೇಕಿತ್ತು. ಕಲ್ಯಾಣ ಮಂಟಪದಲ್ಲಿ ವಧು-ವರ ಕಡೆಯವರು ಸೇರಿದ್ದರು. ಈ ವಿಚಾರ ತಿಳಿದು ನಿತೀಶ್ ಬಂದು ಗಲಾಟೆ ಮಾಡಿದ್ದಾನೆ. ಹಲವು ದಿನಗಳಿಂದ ಆರೋಪಿ ಯುವತಿ ಹಿಂದೆ ಬಿದ್ದಿದ್ದನು. ಇಬ್ಬರೂ ಬೆಂಗಳೂರು ಸಿಟಿ ನಿವಾಸಿಗಳು ಆಗಿದ್ದಾರೆ. ಈ ಬಗ್ಗೆ ಜೆ.ಜೆ ನಗರ ಠಾಣೆಗೆ ಯುವತಿ ದೂರು ಕೂಡ ಕೊಟ್ಟಿದ್ದಳು. ಪೊಲೀಸರು ಒಮ್ಮೆ ಕರೆದು ಯುವಕನಿಗೆ ಎಚ್ಚರಿಕೆ ನೀಡಿದ್ದರು. ನಿನ್ನೆ ಮತ್ತೆ ಕಲ್ಯಾಣ ಮಂಟಪ ಬಳಿ ಬಂದು ಗಲಾಟೆ ಮಾಡಿದ್ದಾನೆ. ಈ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

Follow Us:
Download App:
  • android
  • ios