ಬಹುತೇಕರು ಲಿಂಕ್ಡ್‌ಇನ್ ಸೋಶಿಯಲ್ ಮೀಡಿಯಾ ಬಳಸುತ್ತಾರೆ. ಉದ್ಯೋಗಕ್ಕಾಗಿ, ಕಾರ್ಪೋರೇಟ್, ಬ್ಯೂಸಿನೆಸ್ ಸೇರಿದಂತೆ ಹಲವು ಕಾರಣಗಳಿಂದ ಲಿಂಕ್ಡ್ಇನ್ ಅತೀ ಹೆಚ್ಚು ಬಳಕೆಯಾಗುತ್ತಿದೆ. ಆದರೆ ಈ ಲಿಂಕ್ಡ್‌ಇನ್ ಟಾರ್ಗೆಟ್ ಮಾಡಿರುವ ವಂಚಕರು ಇದೀಗ ಪ್ರೊಫೈಲ್ ಬಾಡಿಗೆ ವಂಚನೆ ಆರಂಭಿಸಿದ್ದಾರೆ. ಏನಿದು ಲಿಂಕ್ಡ್ಇನ್ ಪ್ರೊಫೈಲ್ ಬಾಡಿಗೆ ವಂಚನೆ?

ಬೆಂಗಳೂರು(ಫೆ.17) ಸ್ಯಾಲರಿ ಕ್ಲಾಸ್, ಕಾರ್ಪೋರೇಟ್, ಬ್ಯೂಸಿನೆಸ್‌ಮನ್‌ನಿಂದ ಹಿಡಿದು ವಿದ್ಯಾರ್ಥಿಗಳು ಸೇರಿ ಹಲವರು ಲಿಂಕ್ಡ್ಇನ್ ಪ್ಲಾಟ್‌ಫಾರ್ಮ್ ಬಳಕೆ ಮಾಡುತ್ತಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಮೂಲಕ ವಂಚನೆ ಮಾಡುತ್ತಿರುವ ಪ್ರಕರಣ ಹೆಚ್ಚಾಗಿದೆ. ಆದರೆ ಜನರು ಅಷ್ಟೇ ಜಾಗೃತ ವಹಿಸುತ್ತಿದ್ದಾರೆ. ಪ್ರಮುಖವಾಗಿ ಫೇಸ್‌ಬುಕ್, ಇನ್‌ಸ್ಟಾಗ್ರಾಂ ಮೂಲಕ ನಡೆಯುತ್ತಿದ್ದ ವಂಚನೆ ಕುರಿತು ಬಳಕೆದಾರರು ಅರಿತುಕೊಂಡಿದ್ದಾರೆ. ಇದೀಗ ವಂಚಕರು ಲಿಂಕ್ಡ್ಇನ್ ಬಳಕೆದಾರರ ಟಾರ್ಗೆಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇದೀಗ ಲಿಂಕ್ಡ್ಇನ್ ಪ್ರೊಫೈಲ್ ಬಾಡಿಗೆ ವಂಚನೆ ಪತ್ತೆಯಾಗಿದೆ.

ವಂಚಕರು ಇದೀಗ ಲಿಂಕ್ಡ್ಇನ್ ಬಳಕೆದಾರರನ್ನು ಟಾರ್ಗೆಟ್ ಮಾಡಿ ಸಂಪರ್ಕಿಸುತ್ತಾರೆ. ನಿಮ್ಮ ಪ್ರೊಫೈಲ್ ಕೆಲ ದಿನಗಳ ಕಾಲ ಬಾಡಿಗೆಗೆ ಕೇಳುತ್ತಾರೆ. ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್‌ ಐಡಿ, ಪಾಸ್‌ವರ್ಡ್ ಬಾಡಿಗೆಗೆ ನೀಡಬೇಕು. ಇದಕ್ಕೆ ವಾರಕ್ಕೆ ಅಥವಾ 10 ದಿನಕ್ಕೆ ಇಂತಿಷ್ಟು ಎಂದು ಪಾವತಿಸುತ್ತಾರೆ. 7 ದಿನಕ್ಕೆ ಕನಿಷ್ಠ ಅಂದರೆ 20 ಅಮೆರಿಕನ್ ಡಾಲರ್ ಅಂದರೆ ಸರಿಸುಮಾರು 1737 ರೂಪಾಯಿ. ಒಪ್ಪಂದ ಎಷ್ಟು ದಿನ ಮಾಡಿಕೊಳ್ಳುತ್ತೀರಿ ಅನ್ನೋದರ ಮೇಲೆ ಮೊತ್ತ ನಿಗದಿಯಾಗುತ್ತದೆ. 

ಜ್ಯೂನಿಯರ್ ಪತ್ನಿಗಾಗಿ ಜಾಹೀರಾತು,ಅನುಭವ ಬೇಡ, ಆಕರ್ಷಕ ವೇತನ; ಲಿಂಕ್ಡ್ಇನ್ ಪೋಸ್ಟ್ ವೈರಲ್!

ಈ ಕುರಿತು ಬೆಂಗಳೂರು ಮಹಿಳೆ ಹೇಳಿಕೊಂಡಿದ್ದಾರೆ. ಬಹುತೇಕರು ನನ್ನಂತೆ ಕಾರ್ಪೋರೇಟ್ ಕಚೇರಿಯಲ್ಲಿ ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದೀರಿ. ಜೊತೆಗೆ ಬಾಡಿಗೆ ಮನೆಯಲ್ಲಿ ವಾಸ. ಒಂದಷ್ಟು ಮಂದಿ ಪಾರಂಪರಿಕ ಆಸ್ತಿ, ಕುಟುಂಬದ ಆಸ್ತಿ ಹೀಗೆ ಅಂತಸ್ತು ಇದ್ದವರು ಸ್ವಂತ ಮನೆಯಲ್ಲಿದ್ದುಕೊಂಡು, ಮನೆಯನ್ನು ಬಾಡಿಗೆಗೂ ನೀಡಿರುತ್ತಾರೆ. ಆದರೆ ನೀವು ಲಿಂಕ್ಡ್ಇನ್ ಪ್ರೊಫೈಲ್ ಬಾಡಿಗೆ ನೀಡುವುದು ಕೇಳಿದ್ದೀರಾ ಎಂದು ಬೆಂಗಳೂರು ಮಹಿಳೆ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಎಜೆನ್ಸಿ ಹೆಸರು ಹೇಳಿ ಕೆಲವರು ಸಂಪರ್ಕಿಸಿದ್ದರು. ಅವರ ಮಾತು ಕೇಳಿ ಅಚ್ಚರಿಯಾಗಿತ್ತು. ಲಿಂಕ್ಡ್ಇನ್ ಪ್ರೊಫೈಲ್ ರೆಂಟ್ ನೀಡುವಂತೆ ಸೂಚಿಸಿದ್ದರು. ಒಂದಷ್ಟು ಮೊತ್ತ ನೀಡಿ ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ದಿನ ಬಾಡಿಗೆ ಪಡೆಯುತ್ತಾರೆ. ಇದರ ಜೊತೆಗೆ ಕೆಲ ಕಂಡೀಷನ್ ಇದೆ. ಲಿಂಕ್ಡ್ಇನ್ ಪ್ರೊಫೈಲ್ ಮಾಹಿತಿ ಬದಲಾಯಿಸುವಂತಿಲ್ಲ. ಪಾಸ್ವರ್ಡ್ , ಮೊಬೈಲ್ ನಂಬರ್ ಸೇರಿದಂತೆ ಇತರ ಮಾಹಿತಿ ಬದಲಾಯಿಸುವಂತಿಲ್ಲ ಎಂದು ಹೇಳಿದ್ದಾರೆ. ಕುತೂಹಲಕ್ಕಾಗಿ ಮಹಿಳೆ, ಏನಿದು ರೆಂಟಿಂಗ್ ಎಂದು ಪ್ರಶ್ನಿಸಿದ್ದರೆ. ಇದಕ್ಕೆ ವಂಚಕರು, ಕೆಲ ಕಂಪನಿಗಳು ಲಿಂಕ್ಡ್ಇನ್ ಪ್ರೊಫೈಲ್ ಬಳಸಿ ಮಾರ್ಕೆಟಿಂಗ್ ಮಾಡುತ್ತಿದ್ದಾರೆ. ಇದಕ್ಕಾಗಿ ಬೇಕು ಎಂದಿದ್ದಾರೆ. 

ಪಾಸ್‌ವರ್ಡ್ ಇಲ್ಲದೆ, ಯಾರು ಎಂಬುದೇ ಗೊತ್ತಿಲ್ಲದಿದ್ದರೂ ಈಗಿನ ಕಾಲದಲ್ಲಿ ಹ್ಯಾಕ್ ಮಾಡಿ, ಸೈಬರ್ ದಾಳಿ ಮೂಲಕ ಎಲ್ಲಾ ಮಾಹಿತಿ ಕದಿಯುತ್ತಿರುವ, ಸೋರಿಕೆ ಮಾಡುತ್ತಿರುವ ಘಟನೆ ಹಲವಿದೆ. ಇನ್ನು ಪಾಸ್‌ವರ್ಡ್ ಸೇರಿ ಎಲ್ಲಾ ಮಾಹಿತಿಯನ್ನು ಸಾವಿರ ರೂಪಾಯಿಗೆ ಬಾಡಿಗೆ ನೀಡಿ ಇಲ್ಲದ ಅನಾಹುತ ಮೈಮೇಲೆ ಎಳೆದುಕೊಳ್ಳುವುದು ಯಾಕೆ? ಇದು ಹೊಸ ರೀತಿಯ ವಂಚನೆ ಎಂದು ಅರಿಯಲು ಮಹಿಳೆಗೆ ಹೆಚ್ಚು ಹೊತ್ತು ಬೇಕಾಗಿರಲಿಲ್ಲ. 

Viral News: ಕನ್ಸಲ್ಟಂಟ್ ಆಗಿ ಕೆಲಸ ಮಾಡೋದಂದ್ರೆ ಸ್ನೇಹಿತರನ್ನ ಮಾಡ್ಕೊಳ್ಳೋದಾ? ಲಿಂಕ್ಡಿನ್ ಪ್ರೊಫೈಲ್ ಹೀಗಂತಿದೆ