ಕುಡಿದು ಬಂದು ಹೆಂಡತಿ ಮಕ್ಕಳನ್ನೇ ಮುಗಿಸಿದ ಕೀಚಕ! ರಕ್ತ ಸಿಕ್ತ ದೇಹದಲ್ಲೇ ಪೊಲೀಸ್ ಠಾಣೆಗೆ ಎಂಟ್ರಿ!
ಪೀಣ್ಯದಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಆರೋಪಿ ಗಂಗಾರಾಜು ಮತ್ತು ಮೃತ ಭಾಗ್ಯ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಭಾಗ್ಯಳ ಮೊಬೈಲ್ ಬಳಕೆ ಬಗ್ಗೆ ಅನುಮಾನಗೊಂಡ ಗಂಗಾರಾಜು, ಭಾಗ್ಯ, ಆಕೆಯ ಮಗಳು ಮತ್ತು ಸ್ನೇಹಿತೆಯನ್ನು ಕೊಲೆಗೈದಿದ್ದಾನೆ.
ಬೆಂಗಳೂರು (ಜ.10): ಬೆಂಗಳೂರಿನ 42 ವರ್ಷದ ಹೋಮ್ ಗಾರ್ಡ್ ತಮ್ಮ ಕುಟುಂಬದ ಮೂವರನ್ನು ಹತ್ಯೆಗೈದು ಜನವರಿ 8ರ ಬುಧವಾರ ಸಂಜೆ ಪೀಣ್ಯ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ಆರೋಪಿ ಗಂಗರಾಜು ಎಂಬಾತ ಕೊಲೆ ಶಂಕಿತ ಮಾರಕಾಸ್ತ್ರ ಹಿಡಿದುಕೊಂಡು ಠಾಣೆಗೆ ನುಗ್ಗಿ ಪತ್ನಿ ಭಾಗ್ಯ (36), ಮಗಳು ನವ್ಯಾ (19), ಸೊಸೆ ಹೇಮಾವತಿ (23) ಅವರನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾನೆ. ಜಾಲಹಳ್ಳಿ ಕ್ರಾಸ್ ಬಳಿಯ ಚೊಕ್ಕಸಂದ್ರದಲ್ಲಿರುವ ಕುಟುಂಬದ ಬಾಡಿಗೆ ಮನೆಯಲ್ಲಿ ಸಂಜೆ 5.15ರ ಸುಮಾರಿಗೆ ಘಟನೆ ನಡೆದಿದೆ.
ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ನಿಯೋಜನೆಗೊಂಡಿದ್ದ ಗಂಗರಾಜು ಅವರು ಸಂಜೆ 4 ಗಂಟೆಗೆ ತುರ್ತು ಸಹಾಯವಾಣಿ ಸಂಖ್ಯೆ 112 ಗೆ ಕರೆ ಮಾಡಿ ಮೂವರನ್ನು ಕೊಂದಿರುವುದಾಗಿ ಹೇಳಿದಾಗ ಅಪರಾಧ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೆಗೆ ಸ್ಪಂದಿಸಿದ ಪೊಲೀಸ್ ಗಸ್ತು ವಾಹನಗಳು ಘಟನಾ ಸ್ಥಳಕ್ಕೆ ಧಾವಿಸಿ ನೋಡಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮೃತದೇಹಗಳು ಪತ್ತೆಯಾಗಿವೆ. ಅಧಿಕಾರಿಗಳು ಸ್ಥಳಕ್ಕೆ ಬರುವಷ್ಟರಲ್ಲಿ ಗಂಗರಾಜು ಮನೆಯಿಂದ ಹೊರಬಂದು ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದರು.
ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್:
ತ್ರಿವಳಿ ಕೊಲೆ ಪ್ರಕರಣಕ್ಕೆ ಕುತೂಹಲಕಾರಿ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಗಂಗಾರಾಜು (42) ಎಂಬಾತನ ಪತ್ನಿ ಎನ್ನಲಾದ 36 ವರ್ಷದ ಮೃತ ಭಾಗ್ಯ ಆತನೊಂದಿಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿದ್ದಳು.
ರಾಜು ಮದುವೆಯಾಗಿ ಪತ್ನಿಯಿಂದ ಬೇರ್ಪಟ್ಟಿದ್ದರೆ, ಭಾಗ್ಯ ಕೂಡ ಪತಿಯಿಂದ ಬೇರ್ಪಟ್ಟು ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ತನ್ನ 19 ವರ್ಷದ ಮಗಳು ನವ್ಯಾಳೊಂದಿಗೆ ಇದ್ದಳು. ಮೃತ ಮಹಿಳೆ 23 ವರ್ಷದ ಹೇಮಾವತಿ ವಿಚ್ಛೇದಿತಳಾಗಿದ್ದು, ಆಕೆಯ ಚಿಕ್ಕಮ್ಮ ಭಾಗ್ಯಾಳ ಮನೆಯಲ್ಲಿ ವಾಸವಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಳು.
ಕೊಲೆ ಆರೋಪಿ ರಾಜು ಅವರು ಗಾರ್ಮೆಂಟ್ ಕಾರ್ಖಾನೆಯ ಉದ್ಯೋಗಿಯಾಗಿ ಭಾಗ್ಯಳನ್ನು ಭೇಟಿ, ಪರಿಚಯವಾಗಿ ಹತ್ತಿರವಾಗಿದ್ದರು. ರಾಜು ಮತ್ತು ಭಾಗ್ಯ ಅವರು ಜಾಲಹಳ್ಳಿ ಕ್ರಾಸ್ ಬಳಿಯ ಚೊಕ್ಕಸಂದ್ರದಲ್ಲಿ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸಿಸಲು ಪ್ರಾರಂಭಿಸಿದ್ದರು
ಬೆಂಗಳೂರು: ಎಂಟು ಮದುವೆ ಆಗಿದ್ದ ಮಹಿಳೆಯಿಂದ ಪತಿಗೆ ಕಿರುಕುಳ!
ಭಾಗ್ಯ ಯಾವಾಗಲೂ ತನ್ನ ಮೊಬೈಲ್ ಫೋನ್‌ನಲ್ಲಿ ಬ್ಯುಸಿಯಾಗಿರುತ್ತಿದ್ದರಿಂದ ಗಂಗರಾಜು ಹತಾಶನಾಗಿದ್ದ. ಹೀಗಾಗಿ ಭಾಗ್ಯಳ ಮೇಲೆ ಅನುಮಾನಿಸಲು ಪ್ರಾರಂಭಿಸಿದ್ದ ಗಂಗರಾಜು. ಯಾವಾಗ ಕರೆ ಮಾಡಿದರೂ ಭಾಗ್ಯಳ ಮೊಬೈಲ್ ಎಂಗೇಜ್ ಆಗುತ್ತಿತ್ತು. ನವ್ಯಾ ಮತ್ತು ಹೇಮಾವತಿ ಭಾಗ್ಯಳ ಬೆಂಬಲಕ್ಕೆ ನಿಂತಿದ್ದು ಗಂಗರಾಜು ಪಿತ್ತನೆತ್ತಿಗೇರಿಸಿತ್ತು. ಇದೇ ಕಾರಣಕ್ಕೆ ಬುಧವಾರ ಮೂವರನ್ನು ಮುಗಿಸಲು ಸ್ಕೆಚ್ ಹಾಕಿದ್ದ ಗಂಗರಾಜು, ಬರ್ಬರವಾಗಿ ಕೊಂದ ಬಳಿಕ ರಾಜು ಸಂಜೆ 5 ಗಂಟೆ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ, ಕೊಲೆಗೈದ ಮಾರಕಾಸ್ತ್ರದೊಂದಿಗೆ ಪೀಣ್ಯ ಪೊಲೀಸ್ ಠಾಣೆಯಲ್ಲಿ ಹಂತಕ ಶರಣಾಗಿದ್ದಾನೆ.
ಕೊಲೆಗೆ ಮುನ್ನ ನಡೆದಿದ್ದೇನು?
ಕೊಲೆಗೆ ಮುನ್ನ ಕಂಠಪೂರ್ತಿ ಕುಡಿದು ಬಂದು ಗಲಾಟೆ ಶುರು ಮಾಡಿದ್ದ ಹಂತಕ. ಈ ವೇಳೆ ಹೆಂಡತಿ ಇಬ್ಬರ ಮಕ್ಕಳ ಜೊತೆ ಬೈದಾಡಿದ್ದ. ಆದರೆ ಈ ವೇಳೆ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡ್ತೀಯಾ ಅಂತಾ ಮೂವರು ಮಹಿಳೆಯರು ಸೇರಿ ಗಂಗರಾಜುಗೆ ಹಿಗ್ಗಾಮುಗ್ಗಾ ಥಳಿಸಿದ್ದರು. ಪೊಲೀಸ್ ಠಾಣೆಗೂ ಹೋಗಿ ದೂರು ನೀಡಲು ಮುಂದಾಗಿದ್ದ ಗಂಗರಾಜು. ಅದೇ ವಿಚಾರದಲ್ಲಿ ಮತ್ತೆ ಸಂಜೆ ಕುಡಿದು ಬಂದಿದ್ದ ಗಂಗರಾಜು. ಈ ವೇಳೆ ಮನೆಯಲ್ಲಿ ಇಬ್ಬರೇ ಹೆಣ್ಣುಮಕ್ಕಳು ಇದ್ದ ವೇಳೆ ಇಬ್ಬರನ್ನು ಕೊಚ್ವಿ ಕೊಲೆ ಮಾಡಿದ್ದಾನೆ. ಇಬ್ಬರ ತಲೆಯನ್ನು ಕಡಿದು ಅಡುಗೆ ಮನೆಯಲ್ಲಿ ಬಿಸಾಡಿದ್ದ ರಾಕ್ಷಸ. ಈ ವೇಳೆ ಭಾಗ್ಯಮ್ಮ ಮನೆಗೆ ಸಾಮಗ್ರಿ ತರಲು ಹೊರಗೆ ಹೋಗಿದ್ದರು. ಮನೆಗೆ ಎಂಟ್ರಿ ಅಗುತ್ತಿದ್ದಂತೆ ರಕ್ತದ ಮಡುವಿನಲ್ಲಿ ಮಚ್ಚು ಹಿಡಿದು ಕುಳಿತಿದ್ದ ಗಂಗರಾಜು, ಭಾಗ್ಯ ಮೇಲೆಯೂ ಎರಗಿ ಮಚ್ಚಿನಿಂದ ಮನಸೋ ಇಚ್ಛೆ ಕೊಚ್ಚಿಹಾಕಿರುವ ಆರೋಪಿ.
ಭಾಗ್ಯಮ್ಮ-ಗಂಗರಾಜು ಲಿವಿಂಗ್ ಟುಗೆದರ್!
ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಮುಂದೆ ಹೆಂಡತಿ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಗಂಗರಾಜು ಕತೆ ಕಟ್ಟಿದ್ದಾನೆ. ಪೊಲೀಸ್ ಅಧಿಕಾರಿಗಳು ಹೇಳುವಂತೆ ಕೊಲೆಯಾದ ಭಾಗ್ಯಮ್ಮ ಮತ್ತು ಆರೋಪಿ ಗಂಗರಾಜು ಇಬ್ಬರಿಗೂ ಎರಡನೇ ಮದುವೆ. ಮೊದಲ ಪತ್ನಿ ಹಾಗೂ ಮೊದಲ ಪತಿಯಿಂದ ಡಿವೋರ್ಸ್ ಪಡೆಯದೆ ಲೀವಿಂಗ್ ಇನ್ ರಿಲೇಷನ್ ನಲ್ಲಿದ್ದ ಭಾಗ್ಯಮ್ಮ ಮತ್ತು ಗಂಗರಾಜು. ಭಾಗ್ಯಮ್ಮಗೆ ಮಗಳಿದ್ದ ವಿಚಾರ ತಿಳಿದಿದ್ರೂ ಸಹ , ಸಹ ಜೀವನಕ್ಕೆ ಒಪ್ಪಿದ್ದ ಗಂಗರಾಜು. ಭಾಗ್ಯಮ್ಮ ಸೇರಿ ಇಬ್ಬರು ಹೆಣ್ಣುಮಕ್ಕಳ ಮೇಲೂ ಸಾಕಷ್ಟು ಅನುಮಾನ ಪಡ್ತಿದ್ದ ಆರೋಪಿ. ಪತ್ನಿ ಜೊತೆ ಮಗಳಿಗೂ ಅಕ್ರಮ ಸಂಬಂಧವಿದೆ ಎಂದು ಅನುಮಾನ ಪಡ್ತಿದ್ದ. ಇದರ ನಡುವೆ ಇತ್ತೀಚೆಗೆ ಮನೆಗೆ ಬಂದಿದ್ದ ಮೃತ ಭಾಗ್ಯಮ್ಮ ಅಕ್ಕನ ಮಗಳು ಹೇಮಾವತಿ ನಡತೆ ಮೇಲೂ ಅನುಮಾನ ಪಡಲು ಶುರುಮಾಡಿದ್ದ ಆರೋಪಿ. ಇದೇ ಕಾರಣಕ್ಕೆ ಗಲಾಟೆಯಾಗಿದೆ. ಗಲಾಟೆ ಬಳಿಕ ರೊಚ್ಚಿಗೆದ್ದು ಹೆಸರಘಟ್ಟಕ್ಕೆ ಹೋಗಿದ್ದ ಆರೋಪಿ ಗಂಗರಾಜು, ಅಲ್ಲಿನ ಸಂತೆಯಲ್ಲಿ ೫೦೦ ರೂ. ಕೊಟ್ಟು ರೈತರು ಬಳಸುವ ಹರಿತವಾದ ಮಚ್ಚು ಖರೀದಿಸಿದ್ದಾನೆ. ಆ ಬಳಿಕ ನೇರವಾಗಿ ಮನೆಗೆ ಬಂದಿದ್ದು, ಮೂವರನ್ನ ಕೊಲೆ ಮಾಡಿ ಶರಣಾಗತಿಗೆ ಪ್ಲಾನ್ ಮಾಡಿದ್ದ ಪಾಪಿ!
ಕಾಡಲ್ಲೇ ಪ್ರೇಮ, ಮದುವೆಯಾದ್ರೂ ತಾಳಿ ಕಟ್ಟಲ್ಲ, ನಕ್ಸಲರ ವಿವಾಹ ರಹಸ್ಯ ಬಯಲು, ಇಲ್ಲಿದೆ ಇಂಟರೆಸ್ಟಿಂಗ್ ಲವ್ ಸ್ಟೋರಿ!!
ಭಾಗ್ಯ ಮನೆಯಲ್ಲಿಲ್ಲದ ವೇಳೆ ಸ್ಕೆಚ್!
ಪತ್ನಿ ಅಡುಗೆ ಸಾಮಾನು ತರಲು ಹೊರಗೆ ಹೋಗಿದ್ದ ಸಮಯ ಹೊಂಚುಹಾಕಿ ಒಬ್ಬೊಬ್ಬರನ್ನೇ ಕೊಲೆ ಮಾಡಲು ಪ್ಲಾನ್ ಮಾಡಿದ್ದ ಆರೋಪಿ. ಹೀಗೆ ಮನೆಗೆ ಬರ್ತಿದ್ದಂತೆ ಮತ್ತೆ ಗಲಾಟೆ ತೆಗೆದು ಮಗಳಾದ ನವ್ಯಳ ಕತ್ತಿಗೆ ಮಚ್ಚು ಬೀಸಿದ್ದಾನೆ. ಈ ವೇಳೆ ಅಡ್ಡ ಬಂದ ಸಂಬಂಧಿ ಹೇಮಾವತಿ ಮೇಲೂ ಮಚ್ಚು ಬಿಸಿ ಇಬ್ಬರ ರುಂಡ ಅಡುಗೆ ಮನೆಯಲ್ಲಿ ಬಿಸಾಡಿರುವ ಹಂತಕ ಗಂಗರಾಜು. ಆ ಬಳಿಕ ಪತ್ನಿ ಮನೆಗೆ ಬಂದಿದ್ದು ರಕ್ತದ ಮಡುವಿನಲ್ಲಿದ್ದ ಮಗಳ ನೋಡಿ ಕಿರುಚಾಡಿದ್ದ ಭಾಗ್ಯಮ್ಮ. ಇದೇ ವೇಳೆ ಬಾಗಿಲ ಹಿಂದೆ ಅಡಗಿ ಪತ್ನಿಯ ಮೇಲೆ ಸಿನಿಮೀಯ ರೀತಿಯಲ್ಲಿ ಅಟ್ಯಾಕ್ ಮಾಡಿ ಹತ್ಯೆ ಮಾಡಿದ್ದಾನೆ.
ಸದ್ಯ ಆರೋಪಿ ಗಂಗರಾಜುನನ್ನ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.