Asianet Suvarna News Asianet Suvarna News

ಸ್ತ್ರೀಯರ ಮೇಲೆ ಆ್ಯಸಿಡ್‌ ದಾಳಿ: ಬೆಂಗ್ಳೂರು ನಂ.1!; ಎನ್‌ಸಿಆರ್‌ಬಿ ವರದಿಯಲ್ಲಿ ಆಘಾತಕಾರಿ ಅಂಶ ಬೆಳಕಿಗೆ

7 ಆ್ಯಸಿಡ್‌ ದಾಳಿ ಪ್ರಕರಣಗಳನ್ನು ದಾಖಲಿಸಿರುವ ರಾಜಧಾನಿ ದೆಹಲಿ ನಂ.2 ಮತ್ತು 5 ಪ್ರಕರಣಗಳೊಂದಿಗೆ ಗುಜರಾತ್‌ನ ಅಹಮದಾಬಾದ್‌ 3ನೇ ಸ್ಥಾನದಲ್ಲಿವೆ. ಇದಲ್ಲದೆ ದೆಹಲಿಯಲ್ಲಿ 7, ಬೆಂಗಳೂರಿನಲ್ಲಿ 3, ಅಹಮದಾಬಾದ್‌ ಮತ್ತು ಹೈದರಾಬಾದ್‌ಗಳಲ್ಲಿ ತಲಾ 2 ಆ್ಯಸಿಡ್‌ ದಾಳಿ ಯತ್ನ ಪ್ರಕರಣ ದಾಖಲಾಗಿವೆ.

bengaluru tops cities with highest number of acid attacks ash
Author
First Published Dec 11, 2023, 8:49 AM IST

ನವದೆಹಲಿ (ಡಿಸೆಂಬರ್ 11, 2023): 2022ರಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ನಡೆದ ಅತಿ ಹೆಚ್ಚು ಆ್ಯಸಿಡ್‌ ದಾಳಿ ನಡೆದ ನಗರಗಳ ಪೈಕಿ ಕರ್ನಾಟಕದ ರಾಜಧಾನಿ ಬೆಂಗಳೂರು ಮೊದಲನೇ ಸ್ಥಾನದಲ್ಲಿದೆ ಎಂಬ ಆತಂಕಕಾರಿ ಅಂಶವನ್ನು ರಾಷ್ಟ್ರೀಯ ಅಪರಾಧಗಳ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ವರದಿ ತಿಳಿಸಿದೆ. ಎನ್‌ಸಿಆರ್‌ಬಿ ಬಿಡುಗಡೆ ಮಾಡಿದ ವರದಿ ಅನ್ವಯ ದೇಶದ 19 ಮಹಾನಗರಗಳ ಪೈಕಿ 2022ರಲ್ಲಿ ಬೆಂಗಳೂರಿನಲ್ಲಿ ಮಹಿಳೆಯರ ಮೇಲಿನ 8 ಆ್ಯಸಿಡ್‌ ದಾಳಿ ಪ್ರಕರಣಗಳು ದಾಖಲಾಗಿವೆ. ಇದು ಆ ವರ್ಷದಲ್ಲಿ ದೇಶದಲ್ಲಿ ಅತಿ ಹೆಚ್ಚು.

ಉಳಿದಂತೆ 7 ಆ್ಯಸಿಡ್‌ ದಾಳಿ ಪ್ರಕರಣಗಳನ್ನು ದಾಖಲಿಸಿರುವ ರಾಜಧಾನಿ ದೆಹಲಿ ನಂ.2 ಮತ್ತು 5 ಪ್ರಕರಣಗಳೊಂದಿಗೆ ಗುಜರಾತ್‌ನ ಅಹಮದಾಬಾದ್‌ 3ನೇ ಸ್ಥಾನದಲ್ಲಿವೆ. ಇದಲ್ಲದೆ ದೆಹಲಿಯಲ್ಲಿ 7, ಬೆಂಗಳೂರಿನಲ್ಲಿ 3, ಅಹಮದಾಬಾದ್‌ ಮತ್ತು ಹೈದರಾಬಾದ್‌ಗಳಲ್ಲಿ ತಲಾ 2 ಆ್ಯಸಿಡ್‌ ದಾಳಿ ಯತ್ನ ಪ್ರಕರಣ ದಾಖಲಾಗಿವೆ.

ಇದನ್ನು ಓದಿ: ಆ್ಯಸಿಡ್‌ ದಾಳಿ ಸಂತ್ರಸ್ತೆಗೆ ತಮ್ಮದೇ ಕಚೇರಿಯಲ್ಲಿ ನೌಕರಿ ಕೊಟ್ಟ ಸಿಎಂ ಸಿದ್ದರಾಮಯ್ಯ

ತನ್ನನ್ನು ಮದುವೆಯಾಗಲು ನಿರಾಕರಿಸಿದಳು ಎಂಬ ಕಾರಣಕ್ಕೆ ಕಳೆದ ವರ್ಷ ಏಪ್ರಿಲ್‌ 28ರಂದು ಬೆಂಗಳೂರಿನಲ್ಲಿ 24 ವರ್ಷದ ಯುವತಿಯ ಮೇಲೆ ವ್ಯಕ್ತಿಯೊಬ್ಬ ಆ್ಯಸಿಡ್‌ ಎರಚಿದ ಪ್ರಕರಣ ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಸಂತ್ರಸ್ತೆಗೆ ಕೆಲಸ ನೀಡೋದಾಗಿ ಸರ್ಕಾರ ಭರವಸೆ ನೀಡಿತ್ತು. ಈ ವರ್ಷ ಜುಲೈನಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2022 ರಲ್ಲಿ ದಾಳಿಗೊಳಗಾದ ಆ್ಯಸಿಡ್‌ ದಾಳಿಯಿಂದ ಬದುಕುಳಿದವರಿಗೆ ತಮ್ಮ ಸಚಿವಾಲಯದಲ್ಲಿ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಇದನ್ನು ಓದಿ: ಬೆಂಗಳೂರಿಗರೇ ಎಚ್ಚರ, ಮಕ್ಕಳ ಕಿಡ್ನಾಪ್‌ ಕೇಸ್‌ಗಳಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿದೆ ಉದ್ಯಾನನಗರಿ!

Latest Videos
Follow Us:
Download App:
  • android
  • ios