Asianet Suvarna News Asianet Suvarna News

ಯುವತಿಯರೂ ಬೆತ್ತಲಾದರೂ ಎಂದು  ಬೆಂಗಳೂರು ಟೆಕ್ಕಿಯೂ ಬೆತ್ತಲಾದ..ಆಮೇಲೆ!

ಡೇಟಿಂಗ್ ವೆಬ್ ಆ್ಯಪ್ ಯುಸ್ ಮಾಡೋ ಮುನ್ನ ಎಚ್ಚರ..! ಎಚ್ಚರ..!/ ನೀವು ಸ್ವಲ್ಪ ಯಾಮಾರಿದ್ರು ನಿಮಗೆ ಮಾಡ್ತಾರೆ ಬ್ಲಾಕ್ ಮೇಲ್/ ನಿಮ್ಮದೇ ಪೋಟೋಸ್‌  ಮತ್ತು ವಿಡಿಯೋ ತೋರಿಸಿ ಲಕ್ಷ-ಲಕ್ಷ ಪೀಕ್ತಾರೆ ಸೈಬರ್ ಖದೀಮರು/ ನಿಮ್ಮ ಮೊಬೈಲ್ ನಂಬರ್ ಗೆ ವಾಟ್ಸಪ್ ವಿಡಿಯೋ ಕಾಲ್ ಮಾಡುತ್ತಾರೆ ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಯುವತಿಯರು ಬೆತ್ತಲಾಗ್ತಾರೆ

Bengaluru Techie loses Rs 16 lakh to dating scam mah
Author
Bengaluru, First Published Dec 20, 2020, 9:11 PM IST

ಬೆಂಗಳೂರು(ಡಿ. 20)  ಡೇಟಿಂಗ್ ವೆಬ್ ಆ್ಯಪ್ ಯುಸ್ ಮಾಡೋ ಮುನ್ನ ಎಚ್ಚರ..! ಎಚ್ಚರ..! ನೀವು ಸ್ವಲ್ಪ ಯಾಮಾರಿದ್ರು ನಿಮಗೆ ಮಾಡ್ತಾರೆ ಬ್ಲಾಕ್ ಮೇಲ್.. ನಿಮ್ಮದೇ ಪೋಟೋಸ್‌ & ವಿಡಿಯೋ ತೋರಿಸಿ ಲಕ್ಷ-ಲಕ್ಷ ಪೀಕ್ತಾರೆ ಸೈಬರ್ ಖದೀಮರು...

ಹೌದು.. ಇಲ್ಲಿ ಚಾಲಾಕಿ ಯುವತಿಯರು ಭರ್ಜರಿ ಆಪರೇಷನ್ ಮಾಡಿದ್ದಾರೆ. ಮೊಬೈಲ್ ನಂಬರ್ ಗೆ ವಾಟ್ಸಪ್ ವಿಡಿಯೋ ಕಾಲ್ ಮಾಡುತ್ತಾರೆ ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಯುವತಿಯರು ಬೆತ್ತಲಾಗ್ತಾರೆ. ಆ ಅಶ್ಲೀಲ ವಿಡಿಯೋ ನೋಡಿ ಕಣ್ತುಂಬಿಕೊಳ್ಳಲು ಹೋದ್ರೆ ಕಥೆ !

ಡೇಟಿಂಗ್ ಆ್ಯಪ್ ಮೂಲಕ‌ ಬ್ಲಾಕ್ ಮೇಲ್ ಗೆ ಒಳಗಾಗಿ  16 ಲಕ್ಷ ಹಣ ಕಳೆದುಕೊಂಡ ಯುವಕನ ಪಾಡು ಯಾರಿಗೂ ಬೇಡವಾಗಿದೆ. ವೈಟ್ ಫೀಲ್ಡ್ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಹಣ ಕಳೆದುಕೊಂಡ ಯುವಕ. ಇತ್ತೀಚೆಗೆ ಡೇಟಿಂಗ್ ಆ್ಯಪ್ ಯುಸ್ ಮಾಡುತ್ತಿದ್ದ  ಯುವಕ‌ ಶ್ವೇತಾ ಎಂಬ ಯುವತಿಯನ್ನ ಪರಿಚಯ ಮಾಡಿಕೊಂಡು ಆಕೆಯೊಂದಿಗೆ ತನ್ನ ಮೊಬೈಲ್ ನಂಬರ್ ಹಂಚಿಕೊಂಡಿದ್ದ.

ಬೆತ್ತಲೆಯಾಗಿ ತೋಟದಲ್ಲಿ ಮಲಗಿದ್ದ ಮಾಡೆಲ್ ಕಂಡ ಪೊಲೀಸ್ ಪೇದೆ!

ಬಳಿಕ ಆ ಯುವತಿ ನಮ್ಮ ಸೇವೆ ಬೇಕಾದರೆ 2 ಸಾವಿರ ಹಣವನ್ನ ಅನ್ ಲೈನ್ ನಲ್ಲಿ ಟ್ರಾನ್ಸ್‌ಫರ್ ಮಾಡುವಂತೆ ತಿಳಿಸಿದ್ದಳು‌‌. ಇದಕ್ಕೆ ಒಪ್ಪಿದ ಟೆಕ್ಕಿ 2 ಸಾವಿರ ಹಣವನ್ನ ಯುವತಿಗೆ ಅನ್ ಲೈನ್ ಟ್ರಾನ್ಸ್ ಫರ್ ಮಾಡಿದ್ದ. ಬಳಿಕ ಆ ಯುವತಿ ಟೆಕ್ಕಿಗೆ ಕರೆ ಮಾಡಿ ನಿಕಿತಾ ಎಂಬಾಕೆ ನಿಮ್ಮ ಸೇವೆ ಗೆ ಬರುತ್ತಾಳೆ ಎಂದಿದ್ದಾಳೆ. ಇದಾದ ಕೇಲವೇ ನಿಮಿಷಗಳಲ್ಲಿ ‌ನಿಕಿತಾ ಎಂಬ ಯುವತಿ ಕರೆ ಮಾಡಿ ಟೆಕ್ಕಿ ಜೊತೆ ಸಂಭಾಷಣೆ ನಡೆಸಿದ್ದಳು.

ಬಳಿಕ ಟೆಕ್ಕಿಗೆ ವಿಡಿಯೋ ಕಾಲ್ ಮಾಡುವಂತೆ ತಿಳಿಸಿದ್ದಳು. ಅದನ್ನೆ ಕಾಯುತ್ತಿದ್ದ ಟೆಕ್ಕಿ ಯುವತಿಯ ನಂಬರ್ ಗೆ  ವಿಡಿಯೋ ಕಾಲ್ ಮಾಡಿದ್ದ. ಈ ವೇಳೆ ವಾಟ್ಸಪ್ ವಿಡಿಯೋ ಕಾಲ್ ನಲ್ಲಿ ಆ ಯುವತಿಯರಿಬ್ಬರು ಬೆತ್ತಲೆಯಾಗಿದ್ದರು ಆನಂತರ ಟೆಕ್ಕಿಯನ್ನ ಬಟ್ಟೆ ಬಿಚ್ಚುವಂತೆ ಪ್ರಚೋದನೆ  ಮಾಡಿದರು. ಆ ಯುವತಿಯರ ಮಾತಿಗೆ ಮರುಳಾಗಿ ಟೆಕ್ಕಿ ಬಟ್ಟೆ ಬಿಚ್ಚಿದ್ದ ಈ ವೇಳೆ ಆ ಯುವತಿಯರು ಟೆಕ್ಕಿಯ ಬೆತ್ತಲೆ ವಿಡಿಯೋ ರೆಕಾರ್ಡ್  ಮಾಡಿಕೊಂಡು  ಸ್ಕ್ರೀನ್ ಶಾಟ್ ತೆಗೆದುಕೊಂಡಿದ್ದಾರೆ.

ಕರೆ ಕಟ್ ಮಾಡಿದ ಯುವತಿಯರು ಸ್ವಲ್ಪ ಸಮಯದ ನಂತರ ಟೆಕ್ಕಿ ವಾಟ್ಸಪ್ ನಂಬರ್ ಗೆ ಮತ್ತೆ ಕರೆ  ಬಂದಿದ.  ಟೆಕ್ಕಿಯ ಬೆತ್ತಲೆ ವಿಡಿಯೋ ಹಾಗೂ ಪೋಟೋ ಕಳಿಸಿ ಬ್ಲಾಕ್ ಮೇಲ್ ಮಾಡಲು ಶುರು ಹಚ್ಚಿಕೊಂಡಿದ್ದಾರೆ. ಹಣ ವರ್ಗಾವಣೆ ಮಾಡದಿದ್ದರೆ ಫೇಸ್ ಬುಕ್ , ಟ್ವಿಟರ್, ಇನ್ ಸ್ಟಾಗ್ರಾಮ್ ನಲ್ಲಿ ಬೆತ್ತಲೆ ವಿಡಿಯೋ ಪೋಟೋ ಅಪ್ಲೋಡ್ ಮಾಡೋದಾಗಿ ಬೆದರಿಕೆ ಹಾಕಿದ್ದಾರೆ. 

ಭಯಗೊಂಡು ಆನ್ ಲೈನ್ ನಲ್ಲಿ ಟೆಕ್ಕಿ ಹಣ ಹಾಕಿದ್ದಾರೆ. ಹಂತ ಹಂತವಾಗಿ 10 ದಿನಗಳಲ್ಲಿ ಟೆಕ್ಕಿಯಿಂದ  ಬರೋಬ್ಬರಿ 16 ಲಕ್ಷ  ಹಣ ಲಲನೆಯರ ಪಾಲಾಗಿದೆ. ವಂಚನೆಗೊಳಾಗಾದ ಟೆಕ್ಕಿ ನೊಂದು ವೈಟ್ ಫೀಲ್ಡ್ ಠಾಣೆಗೆ ದೂರು ನೀಡಿದ್ದಾನೆ. 

Follow Us:
Download App:
  • android
  • ios