ಹೈದರಾಬಾದ್/ ಬೆಂಗಳೂರು(ಆ. 21)   ತಂದೆ ತಾಯಿಗೆ ತಿಳಿಸದೆ ಟೆಕ್ಕಿಯೊಂದಿಗೆ ಮದುವೆ ಮಾಡಿಕೊಂಡು 1 ವರ್ಷ  ಸಂಸಾರ ನಡೆಸಿದ್ದ ಯುವತಿಯೋರ್ವಳು ಇದೀಗ ತನಗೆ ಅನ್ಯಾಯವಾಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ಹೈದರಾಬಾದ್ ನ ನಾಗಾರ್ಜುನ ಕಾಲೋನಿಯ ನಿವಾಸಿ 30 ವರ್ಷದ ಎಸ್ ಪವನ್ ಎಂಬಾತ ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ. 2017ರಲ್ಲಿ ಈತ ಯುವತಿಯನ್ನು ಪ್ರೀತಿಸಿ ಮದುವೆಯಾಗುವ ನಾಟಕ ಮಾಡಿದ್ದಾನೆ.

ಯುವಕರೆ ಹುಷಾರ್, ಹಳ್ಳಿ ಹುಡುಗನ ಕೈಗೆ ಚಿಪ್ಪಿಟ್ಟ ಲಕ್ಷ್ಮೀ

ಇದಾದ ಮೇಲೆ  ಪವನ್ ಗುಟ್ಟಾಗಿ ಸಂಸಾರ ನಡೆಸಿದ್ದಾನೆ.  ಹಿಲ್ಸ್ ಸ್ಟೇಶನ್ ಗೆ ಹನಿಮೂನ್ ಗೂ ಕರೆದೊಯ್ದಿದ್ದಾನೆ.  ನಂತರ ಆಕೆಯನ್ನು ಹೈದರಾಬಾದ್ ನ ತವರು ಮನೆಯಲ್ಲಿ ಇರುವಂತೆ ತಿಳಿಸಿ ತನ್ನ ಪೋಷಕರನ್ನು ಒಪ್ಪಿಸಿ ನಿನ್ನನ್ನು ಕರೆಸಿಕೊಳ್ಳುತ್ತೇನೆ ಎಂದು ನಂಬಿಸಿದ್ದಾನೆ.

ಮೋಸ ಮಾಡುವ ಆಲೋಚನೆ ಹೊಂದಿದ್ದ ಪವನ್ ಸಾಮಾಜಿಕ ಜಾಲತಾಣದಲ್ಲಿ ತನ್ನ ಎಲ್ಲಾ ಖಾತೆಯನ್ನು ಬ್ಲಾಕ್ ಮಾಡಿ ಫೋನ್ ಸ್ವೀಚ್ ಆಫ್ ಮಾಡಿದ್ದಾನೆ. ಎಷ್ಟು ಬಾರಿ ಪ್ರಯತ್ನಿಸಿದರು ಯುವತಿಗೆ ಆತನ ಸಂಪರ್ಕ ಮಾಡಲು ಸಾಧ್ಯವಾಗಿಲ್ಲ. ತಾನು ಅನ್ಯಾಯಕ್ಕೆ ಒಳಗಾಗಿರುವುದು ಗೊತ್ತಾದ ಮೇಲೆ ಪೊಲೀರಿಗೆ ಯುವತಿ ದೂರು ನೀಡಿದ್ದಾಳೆ.

ಎರಡು ವರ್ಷಗಳ ಬಳಿಕ ಪವನ್ ಹೈದರಾಬಾದ್ ಗೆ ಮರಳಿರುವುದು ಗೊತ್ತಾಗಿ ಆತನ ಮನೆಗೆ ತೆರಳಿದರೆ 10 ಲಕ್ಷ ರುಪಾಯಿ ನೀಡಿ ಎಲ್ಲವನ್ನು ಮರೆತುಬಿಡು ಎಂದು ಹೇಳಿದ ಎಂದಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ. ಆರೋಪಿಯನ್ನು ಸರೋರ್ ನಗರ ಪೊಲೀಸರು ಬಂಧಿಸಿದ್ದಾರೆ.