Asianet Suvarna News Asianet Suvarna News

'ನೀವ್‌ ಹೇಳ್ತಾ ಇರೋ ನಾರಿ ಶಕ್ತಿ ಇದೇನಾ..' ಹೆಂಡ್ತಿ ಹಿಂಸೆ ತಾಳಲಾರದೆ ಪ್ರಧಾನಿಗೆ ಪತ್ರ ಬರೆದ ಬೆಂಗಳೂರು ಟೆಕ್ಕಿ!

ನನ್ನ ಪತ್ನಿ ಚೂರಿಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ. ಆಕೆಯಿಂದ ನನಗೆ ರಕ್ಷಣೆ ನೀಡುವಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಾಯಲಕ್ಕೆ ಬೆಂಗಳೂರಿನ ಟೆಕ್ಕಿ ಮೊರೆ ಸಲ್ಲಿಸಿದ್ದಾನೆ. ಪುರುಷರ ಪರವಾದ ಹಕ್ಕುಗಳಿಗೆ ಧ್ವನಿ ಎತ್ತುವ ಯದುನಂದನ್‌ ಆಚಾರ್ಯ ಪಿಎಂಓಗೆ ಟ್ವೀಟ್‌ ಮಾಡಿರುವ ವ್ಯಕ್ತಿ ಆಗಿದ್ದಾನೆ.
 

Bengaluru techie complained office of the Prime Minister PMO seeking protection from his wife san
Author
First Published Nov 2, 2022, 3:49 PM IST

ಬೆಂಗಳೂರು (ನ.2): ರಾಜಧಾನಿ ಬೆಂಗಳೂರಿನ ಟೆಕ್ಕಿ ಒಬ್ಬರು ಪತ್ನಿಯಿಂದ ರಕ್ಷಣೆ ಕೋರಿ ಪ್ರಧಾನಿ ಕಚೇರಿಗೆ ಪತ್ರ ಬರೆದಿದ್ದಾರೆ. ನಗರದ ಯದುನಂದನ್ ಆಚಾರ್ಯ ಎಂದು ಗುರುತಿಸಲಾದ ವ್ಯಕ್ತಿ, ತನ್ನ ಹೆಂಡತಿ ನಿರಂತರವಾಗಿ ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾಳೆ ಮತ್ತು ಕೊಲೆ ಬೆದರಿಕೆ ಹಾಕುತ್ತಾಳೆ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ವ್ಯಕ್ತಿ ಪಿಎಂಒ ಅಧಿಕೃತ ಹ್ಯಾಂಡಲ್‌ಗೆ ಪತ್ರವನ್ನು ಟ್ವೀಟ್ ಮಾಡಿದ್ದಾರೆ ಮತ್ತು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಮತ್ತು ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು ಅವರನ್ನು ಟ್ಯಾಗ್ ಮಾಡಿದ್ದಾರೆ. ತನ್ನ ಪತ್ನಿ ತನ್ನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾಳೆ ಮತ್ತು ತನಗೆ ಇರಿತದ ಗಾಯವಾಗಿದೆ ಎಂದು ವ್ಯಕ್ತಿ ಪತ್ರದಲ್ಲಿ ಬರೆದಿದ್ದಾನೆ. ಅವನು ಒಬ್ಬ ಗಂಡಸಾಗಿರುವ ಕಾರಣದಿಂದ ಯಾರೂ ಸಹಾಯ ಮಾಡಲು ಮುಂದೆ ಬರಲಿಲ್ಲ ಎಂದು ಹೇಳಿದರು. ಏತನ್ಮಧ್ಯೆ, ಅವರ ಟ್ವೀಟ್‌ಗೆ ಉತ್ತರಿಸಿದ ಪೊಲೀಸ್ ಆಯುಕ್ತರು, ಪೊಲೀಸ್ ಠಾಣೆಗೆ ಭೇಟಿ ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದ್ದಾರೆ.  "ನನ್ನ ಹೆಂಡತಿ ನನ್ನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದಾಳೆ, ಇದು ನೀವು ಉತ್ತೇಜಿಸುವ ನಾರಿ ಶಕ್ತಿಯೇ? ಇದಕ್ಕಾಗಿ ನಾನು ಅವಳ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಹಾಕಬಹುದೇ? ಇಲ್ಲವೇ ಎನ್ನುವುದನ್ನು ತಿಳಿಸಿ," ಎಂದು ವ್ಯಕ್ತಿ ಪತ್ರದಲ್ಲಿ ಬರೆದುಕೊಂಡಿದ್ದಾನೆ.

ಯದುನಂದನ್‌ ಅವರು ಮಾಡಿರುವ ಟ್ವೀಟ್‌ಗೆ ಕೆಲವೊಬ್ಬರು ಪ್ರತಿಕ್ರಿಯೆಯನ್ನೂ ನೀಡಿದ್ದಾರೆ. ನಿಮ್ಮ ಮೇಲೆ ಹಲ್ಲೆಯಾಗಿದೆ ಎನ್ನುವುದಕ್ಕೆ ಸಾಕ್ಷಿ ಏನಿದೆ ಎಂದು ಒಬ್ಬ ವ್ಯಕ್ತಿ ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ಯದುನಂದನ್‌, ನಿಮಗೆ ಯಾವ ರೀತಿಯ ದಾಖಲೆ ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು ಪೊಲೀಸರಿಂದಲೂ ಉತ್ತರ: ಹೆಂಡತಿ ಚೂರಿಯಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ. ಇದಕ್ಕೆ ಯಾವ ರೀತಿಯ ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ, ಬೆಂಗಳೂರು ಪೊಲೀಸ್‌ ಕಮೀಷನರ್‌ ಪ್ರತಾಪ್‌ ರೆಡ್ಡಿ, ಪೊಲೀಸ್‌ ಸ್ಟೇಷನ್‌ಗೆ ಬಂದು ಕಾನೂನು ರೀತಿಯ ಕ್ರಮ ಕೈಗೊಳ್ಳಿ ಎಂದು ಹೇಳಿದ್ದರು. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿರುವ ಅವರು, ಎರಡು ವರ್ಷಗಳ ಹಿಂದೆ ತಾವು ಮಾಡಿರುವ, ಸಂದೇಶವನ್ನು ತೋರಿಸಿ ಆ ವ್ಯಕ್ತಿ ಬೆಂಗಳೂರು ಪೊಲೀಸರನ್ನು ಟಾರ್ಗೆಟ್ ಮಾಡಿದ್ದಾರೆ. ವ್ಯಕ್ತಿಯು ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ಎರಡು ವರ್ಷಗಳಿಗಿಂತ ಹೆಚ್ಚು ಸಮಯದಿಂದಲೂ ಈ ರೀತಿಯ ಹಲ್ಲೆ ನನ್ನ ಮೇಲೆ ನಡೆಯುತ್ತಿದೆ ಎಂದಿದ್ದಾರೆ. ಇಂಥ ಸಂದರ್ಭದಲ್ಲಿ ಬೆಂಗಳೂರು ಪೊಲೀಸರಿಂದ ಈ ಬಾರಿ ಸಹಾಯ ನಿರೀಕ್ಷೆ ಮಾಡಬಹುದೇ ಎಂದು ಪ್ರಶ್ನೆ ಮಾಡಿದ್ದಾರೆ. 

ಯದುನಂದನ್ ಆಚಾರ್ಯ ಅವರು ಸಹಾಯ ಯಾಚಿಸಿರುವ ಈ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವುದು ಗೊತ್ತೇ ಇದೆ. ಯದುನಂದನ್ ಆಚಾರ್ಯ ಅವರಿಗೆ ಎಲ್ಲಾ ವರ್ಗಗಳ ಬೆಂಬಲ ಸಿಕ್ಕಿದ್ದು, ಕಿರುಕುಳಕ್ಕೊಳಗಾದ ಗಂಡಂದಿರ ಸಮಸ್ಯೆಗೆ ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ.

Follow Us:
Download App:
  • android
  • ios