ಕದಿಯಲು ಬಂದವ ಕೊಲೆಯಾಗಿ ಹೋದ; ಶ್ರೀರಾಮ್ ಪುರ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಕಳ್ಳತನ ಮಾಡಲು ಬಂದಿದ್ದ ಶ್ರೀರಾಮ್ ಪುರದ ಕಳ್ಳ ಜಗನ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಈ ಸಂಬಂಧ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಬೆಂಗಳೂರು(ಜೂ.05): ಶ್ರೀರಾಂಪುರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕಳ್ಳತನ ಮಾಡಲು ಹೋಗಿ 23 ವರ್ಷ ಜಗನ್ ಕೊಲೆಯಾಗಿದ್ದಾನೆ ಎಂದು ಪೊಲೀಸ್ ತನಿಖೆಯ ವೇಳೆ ಬಯಲಾಗಿದೆ.
ಹೌದು, ಕೊಲೆಯಾದ ಶ್ರೀರಾಮ್ ಪುರದ ಜಗನ್ ಹಲವು ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸಿದ್ದ. ಜೈಲಿನಿಂದ ಬಿಡುಗಡೆಯಾದ ಬಳಿಕವೂ ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದಾನೆ. ಮೇ 31ರಂದು ಅಪಾರ್ಟ್‌ಮೆಂಟ್‌ನಲ್ಲಿ ಕಳ್ಳತನ ಮಾಡಲು ಹೋಗಿ ಸೆಕ್ಯೂರಿಟಿಗಳ ಬಳಿ ಒದೆತಿಂದು ಪ್ರಾಣ ಬಿಟ್ಟಿದ್ದಾನೆ.
ಹೇಗಾಯ್ತು ಘಟನೆ?: ಜೈಲಿನಿಂದ ಬಿಡುಗಡೆಯಾಗಿದ್ದ ಜಗನ್ ರಾತ್ರಿ ವೇಳೆ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ಕಂಬ ಕದಿಯಲು ಹೋಗಿದ್ದಾನೆ. ಈ ವೇಳೆ ಅಪಾರ್ಟ್‌ಮೆಂಟ್ ಸೆಕ್ಯೂರಿಟಿ ಗಾರ್ಡ್ಸ್ ಕೈಗೆ ಸಿಕ್ಕಿಬಿದ್ದ ಜಗನ್ ಅವರನ್ನು ಮನಬಂದಂತೆ ಥಳಿಸಿ ಹೊರದಬ್ಬಲಾಗಿತ್ತು. ಸೆಕ್ಯೂರಿಟಿ ಗಾರ್ಡ್‌ಗಳಿಂದ ಜರ್ಝರಿತನಾದ ಜಗನ್ ಮನೆ ದಾರಿ ಹಿಡಿದಿದ್ದಾನೆ. ಶ್ರೀರಾಮ್ ಪುರದಲ್ಲಿರುವ ಮನೆಯ ಬಳಿ ಬರುತ್ತಿದ್ದಂತೆ ಕುಸಿದು ಮನೆ ಮುಂದಿದ್ದ ಮೋರಿಗೆ ಬಿದ್ದು ಪ್ರಾಣಬಿಟ್ಟಿದ್ದಾನೆ.
ಲವ್ವರ್ ಮೋಸ, ಸೆಲ್ಫಿ ವಿಡಿಯೋ ಮಾಡಿ ಕನ್ನಡ ಕಿರುತೆರೆ ನಟಿ ಆತ್ಮಹತ್ಯೆ
ಮೇಲ್ನೋಟಕ್ಕೆ ಇದು ಸಹಜ ಸಾವಲ್ಲ ಎನ್ನುವುದು ಖಚಿತವಾಗುತ್ತಿದ್ದಂತೆ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಜಗನ್ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಿದ ಪಶ್ಚಿಮ ಬಂಗಾಳ ಮೂಲದ ಜಾಯ್ ದೀಪ್, ಧನಂಜಯ್ ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
#NewsIn100Seconds: ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್
"